ಕೊರೊನಾ ಕಾಟ ಮುಂದುವರೆಯಲಿದೆ- ಚೀನಾದಿಂದ ಭಯವಿದೆ- ಗಣ್ಯ ವ್ಯಕ್ತಿಯ ಸ್ಥಾನಮಾನದಲ್ಲಿ ಏರಿಳಿತವಾಗಲಿದೆ- ಕಾಲಜ್ಞಾನದ ಹೊತ್ತಿಗೆ ಬಿಚ್ಚಿಟ್ಟ ಬಬಲಾದಿ ಕಾರ್ಣಿಕ

ಇಲ್ಲಿನ ಕಾರ್ಣಿಕರು ನುಡಿಯುವ ಕಾಲಜ್ಞಾನದ ಭವಿಷ್ಯ ಈವರೆಗೂ ನಿಜವಾಗುತ್ತ ಬಂದಿರುವುದು ವಿಶೇಷವಾಗಿದೆ.
  • praveen

ವಿಜಯಪುರ, ಮಾ. 15-  ಈ ಬಾರಿಯೂ ಕೊರೊನಾ ಕಾಟ ಮುಂದುವರೆಯಲಿದೆ.  ಅಷ್ಟೇ ಅಲ್ಲ, ಉತ್ತರ ದಿಕ್ಕಿನಲ್ಲಿರುವ ದೇಶ(ಚೀನಾ) ದಿಂದಲೂ ಭಯವಿದೆ ಎಂದು ಬಸವನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮೂಲ ಮಠಾಧೀಶ ಮತ್ತು ಕಾರ್ಣಿಕ ಸಿದ್ಧರಾಮಯ್ಯ ಹೊಳಿಮಠ 2021ನೇ ವರ್ಷದ ಆಗುಹೋಗುಗಳ ಬಗ್ಗೆ ಕಾಲಜ್ಞಾನ ಹೊತ್ತಿಗೆಯಲ್ಲಿರುವ ಭವಿಷ್ಯವನ್ನು ಬಿಚ್ಚಿಟ್ಟಿದ್ದಾರೆ.

            ಮಠದ ಜಾತ್ರೆ ಮೂರನೇ ದಿನ ಕಾಲಜ್ಞಾನ ಹೇಳುವ ಪರಿಪಾಠವಿದ್ದು, ಇಲ್ಲಿ ಕಾರ್ಣಿಕ ನುಡಿಯುವ ಭವಿಷ್ಯ ಅಷ್ಟೇ ಮಹತ್ವ ಪಡೆದಿದೆ.  ಇಂದು ಭವಿಷ್ಯ ನುಡಿದ ಕಾರ್ಣಿಕ, ಈ ಬಾರಿ ಮಳೆ ಮತ್ತು ಬೆಳೆ ಚೆನ್ನಾಗಿ ಬರಲಿವೆ.  ಬೆಳೆಗಳಿಗೆ ಕೀಟಬಾಧೆಯಿಂದಾಗಿ ರೋಗ ರುಜಿನಗಳೂ ಹೆಚ್ಚಾಗಲಿವೆ.  ಇರಾನ್, ಇರಾಕ್ ಅಮೇರಿಕ ದೇಶದಲ್ಲಿ ಕಲಹದ ವಾತಾವರಣ ಉಂಟಾಗಲಿದೆ.  ಕೆಲವು ಬೆಳೆಗಳಿಗೆ ಉತ್ತಮ ಬೆಲೆ ಬರಲಿದೆ ಎಂದು ತಿಳಿಸಿದ್ದಾರೆ.

            ಅಷ್ಟೇ ಅಲ್ಲ, ಆಯಾ ಪಕ್ಷಗಳಲ್ಲಿಯೇ ಅಸೂಯೆ ರಾಜಕಾರಣ ಹೆಚ್ಚಾಗಲಿದೆ.  ಪರಸ್ಪರ ದ್ವೇಷದಿಂದ ಕೆಟ್ಟಫಲ ಅನುಭವಿಸಲಿದ್ದಾರೆ.  ಅದೇ ರೀತಿ ವ್ಯಾದಿಯೂ ಕಾಡಲಿದೆ.  ಅಂದರೆ ರೋಗವೂ ಕಾಡಲಿದೆ ಎಂದು ಪ್ರಸಕ್ತ ಕೊರೊನಾ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ ಅವರು, ಉತ್ತರ ದಿಕ್ಕಿನಲ್ಲಿ ಭಯವಿದೆ.  ಮಳೆ ಮತ್ತು ಬೆಳೆ ಸಂಪನ್ನವಾಗಲಿದೆ.  ಕಾಳು, ಕಡಿಗಳ ಬೆಳೆಗಳ  ಬೆಲೆ ಗಗನಕ್ಕೇರಲಿದೆ.  ಗಣ್ಯ ವ್ಯಕ್ತಿಯ ಏರಿಳಿತವಾಗಲಿದೆ.  ಹಿಂಗಾರಿ ಸಮಾನವಾಗಿರಲ್ಲ.  ಕೋಮು ಗಲಭೆಯಾಗಲಿವೆ.  ಅಗ್ನಿ ಅವಘಡಗಳು, ಭೂಕಂಪ ಸಂಭವಿಸಲಿದೆ.  ತೆಲಗು ರಾಜ್ಯಕ್ಕೆ ಕೇಡಾಗಲಿದೆ.  ಯುದ್ಧಭಯವಿದೆ.  ಗಾಳಿ ಅನಾಹುತಗಳೂ ಹೆಚ್ಚಾಗಲಿವೆ.  ಏಳಾನೆ ಮಳೆ, ಎಂಟಾನೆ ಬೆಳೆ ಈ ಬಾರಿ ಆಗಲಿವೆ ಎಂದು ಶ್ರೀ ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ 2021ರ ಕಾಲಜ್ಞಾನ ಹೇಳಿದ್ದಾರೆ.

Leave a Reply

ಹೊಸ ಪೋಸ್ಟ್‌