ಬಸವನಾಡಿಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣ- ಡಿಸಿಎಂ ಗೋವಿಂದ ಕಾರಜೋಳ
ವಿಜಯಪುರ, ಮಾ 22- ವಿಜಯಪುರ ನಗರದ ಬಾಬು ಜಗಜೀವನರಾಮ್ ವೃತ್ತದಿಂದ ಮಹಿಳಾ ವಿಶ್ವವಿದ್ಯಾಲಯದವರೆಗೆ ರಸ್ತೆ ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಲ್ಲಿ ನಿರ್ಮಿಸಲಾಗುವುದೆಂದು ರಾಜ್ಯ ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರು ಹೇಳಿದರು. ವಿಜಯಪುರ ನಗರದ ಬಾಬು ಜಗಜೀವನರಾಮ್ ವೃತ್ತದಿಂದ ಸುಭಾಸ್ ಚಂದ್ರ ಬೋಸ್ ವೃತ್ತದವೆರಗೆ 17.50 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಇಟಗಿ ಪೆಟ್ರೋಲ್ ಪಂಪ್‍ದಿಂದ ಮಹಿಳಾ ವಿಶ್ವವಿದ್ಯಾಲಯದವರೆಗೆ 35 ಕೋಟಿ ರೂ. ವೆಚ್ಚದ ಡಾಂಬರೀಕರಣ ರಸ್ತೆ ನಿರ್ಮಾಣ ಕಾಮಗಾರಿಗೆ […]
ಜಲಮೂಲ ಸಂರಕ್ಷಣೆಗೆ ನ್ಯಾಯಾಧೀಶರ ಕರೆ
ವಿಜಯಪುರ, ಮಾ 22- ಸ್ಮಾರಕಗಳ ನಗರವಾದ ವಿಜಯಪುರದಲ್ಲಿರುವ ತಾಜಬಾವಡಿ ಸೇರಿ ಅನೇಕ ಕೆರೆಗಳಿವೆ, ಈ ಕೆರೆಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಬಳಕೆಯಾಗುವಂತೆ ಮಾಡುವ ಕರ್ತವ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ ಹೇಳಿದರು. ವಿಜಯಪುರ ನಗರದ ಕಾಕಾ ಕಾರ್ಖಾನೆ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ, ಸ್ಪಂದನಾ ಸ್ವಯಂಸೇವಾ ಸಂಸ್ಥೆ ಮತ್ತು ಜೈನ್ ಇರಿಗೇಶನ್ ಸಿಸ್ಟಮ್ ಲಿಮಿಟೆಡ್ […]
ಶ್ರೀಶೈಲ ಮಲ್ಲಯ್ಯನ ಭಕ್ತಾದಿಗಳಿಗೆ ಸ್ವಾಮೀಜಿ, ಅಧಿಕಾರಿಗಳ ಸಲಹೆ, ಸೂಚನೆ
ವಿಜಯಪುರ, ಮಾ 22- ಭಕ್ತಾದಿಗಳಿಗೆ ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದ್ದ ಆಂಧ್ರ ಪ್ರದೇಶದ ಶ್ರೀಶೈಲದ ಮಲ್ಲಯ್ಯನ ಜಾತ್ರೆಗೆ ಈ ಬಾರಿ ಅವಕಾಶ ಕಲ್ಪಿಸಲಾಗಿದ್ದು, ಹಲವಾರು ಕಟ್ಟಳೆಗಳನ್ನು ವಿಧಿಸಲಾಗಿದೆ. ಈ ಬಾರಿ ನಡೆಯಲಿರುವ ಜಾತ್ರೆ ಮತ್ತು ಪಾಲಿಸಬೇಕಾದ ನಿಯಮಗಳ ಕುರಿತು ಶ್ರೀಶೈಲ ಜಗದ್ಗುರುಗಳು ಬಸವನಾಡು ವಿಜಯಪುರದಲ್ಲಿ ಸಭೆ ನಡೆಸಿದ್ದಾರೆ. ಆಂಧ್ರ ಪ್ರದೇಶದ ವಿಶೇಷ ಡೆಪ್ಯೂಟಿ ಕಲೆಕ್ಟರ್ ಕೂಡ ಪಾಲ್ಗೋಂಡಿದ್ದ ಈ ಸಭೆಯಲ್ಲಿ ವಿಜಯಪುರ ನಗರದ ನಾನಾ ಸಂಘಟನೆಗಳು ಮತ್ತು ಶ್ರೀಶೈಲಕ್ಕೆ ಪಾದಯಾತ್ರೆ ನಡೆಸುವ ನಾನಾ ಸಂಘಟನೆಗಳ ಮಖಂಡರೂ […]
ವಿಶ್ವ ಜಲ ದಿನದ ಮಹತ್ವ
ಭೂಮಿಯ ಸುತ್ತಲೂ ಭೂಮಿಯ 3 ಪಟ್ಟು ನೀರಿದೆ. ಮನುಷ್ಯನ ಶರೀರದಲ್ಲಿಯೂ 1/3 ನೀರು ಸೇರಿದೆ.ಪಂಚ ಮಹಾಭೂತಗಳಲ್ಲಿ ನೀರು ಕೂಡ ಇದೆ. ಶತಶತಮಾನಗಳಿಂದ ದಣಿದು ಬಂದವರಿಗೆ ದಾಹ ತಣಿಸಲು ನೀರನ್ನು ಕೊಡುವುದು ಶ್ರೇಷ್ಠ ಎಂದು ಭಾವಿಸಿದ್ದರು.ಸಾಮ್ರಾಟ್ ಅಶೋಕನ ಕಾಲದಲ್ಲಿ ಎಲ್ಲ ಮಾರ್ಗಗಳಲ್ಲಿಯೂ ಅರವಟ್ಟಿಗೆಗಳನ್ನು ಸ್ಥಾಪಿಸಿದ್ದರು. ಇತ್ತೀಚಿನವರೆಗೂ ನಮ್ಮ ಹಿರಿಯರು ಮಾರ್ಗಮಧ್ಯೆ ಗಳಲ್ಲಿ ಬೇಸಿಗೆಯಲ್ಲಿ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡಿ ದಾರಿಹೋಕರಿಗೆ ಅನುಕೂಲ ಕಲ್ಪಿಸಿದ್ದರು.ಬಸ್ ನಿಲ್ದಾಣ ರೈಲ್ವೆ ಸ್ಟೇಷನ್ ಸೇರಿದಂತೆ ಗಲ್ಲಿ- ಗಲ್ಲಿಗಳಲ್ಲಿಯೂ ವಿವಿಧ ಸಂಘ ಸಂಸ್ಥೆಯವರು, ದಾನಿಗಳು ಅರವಟ್ಟಿಗೆಗಳನ್ನು […]
ಬಿ ಎಲ್ ಡಿ ಇ ಸಂಸ್ಥೆ-ಹೈದರಾಬಾದನ ರಾಷ್ಟ್ರೀಯ ಇನ್‍ಸ್ಟಿಟ್ಯೂಟ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ಸಂಸ್ಥೆ ಒಡಂಬಡಿಕೆ
ವಿಜಯಪುರ, ಮಾ. 22- ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆ ಮತ್ತು ಹೈದರಾಬಾದಿನ ರಾಷ್ಟ್ರೀಯ ಇನ್‍ಸ್ಟಿಟ್ಯೂಟ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ಸಂಸ್ಥೆಯೊಂದಿಗೆ ಮುಂದಿನ 5ವರ್ಷಗಳವರೆಗೆ ಸಂಶೋಧನೆ, ತರಬೇತಿ, ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಪರಸ್ಪರ ಇಂದು ಒಪ್ಪಂದ ಮಾಡಿಕೊಂಡಿವೆ. ಹೈದರಾಬಾದನ ಎನ್.ಐ.ಪಿ.ಇ.ಆರ್ ನಿರ್ದೇಶಕಿ ಡಾ.ಶಶಿಬಾಲಾ ಸಿಂಗ್ ಹಾಗೂ ಬಿ.ಎಲ್.ಡಿ.ಇ ಸಂಸ್ಥೆ ಪರವಾಗಿ ನಿರ್ದೇಶಕ ಪ್ರೊ.ಎ.ಎಂ.ಪಾಟೀಲ್ ಬಿಜ್ಜರಗಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಖ್ಯಾತ ವಿಜ್ಞಾನಿ ಪ್ರೊ.ಕುಶಾಲ ದಾಸ. ಆಡಳಿತಾಧಿಕಾರಿ ಡಾ.ಆರ್.ವಿ.ಕುಲಕರ್ಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. […]