ವಿಜಯಪುರ, ಮಾ. 22- ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆ ಮತ್ತು ಹೈದರಾಬಾದಿನ ರಾಷ್ಟ್ರೀಯ ಇನ್‍ಸ್ಟಿಟ್ಯೂಟ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ಸಂಸ್ಥೆಯೊಂದಿಗೆ ಮುಂದಿನ 5ವರ್ಷಗಳವರೆಗೆ ಸಂಶೋಧನೆ, ತರಬೇತಿ, ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಪರಸ್ಪರ ಇಂದು ಒಪ್ಪಂದ ಮಾಡಿಕೊಂಡಿವೆ.
ಹೈದರಾಬಾದನ ಎನ್.ಐ.ಪಿ.ಇ.ಆರ್ ನಿರ್ದೇಶಕಿ ಡಾ.ಶಶಿಬಾಲಾ ಸಿಂಗ್ ಹಾಗೂ ಬಿ.ಎಲ್.ಡಿ.ಇ ಸಂಸ್ಥೆ ಪರವಾಗಿ ನಿರ್ದೇಶಕ ಪ್ರೊ.ಎ.ಎಂ.ಪಾಟೀಲ್ ಬಿಜ್ಜರಗಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಖ್ಯಾತ ವಿಜ್ಞಾನಿ ಪ್ರೊ.ಕುಶಾಲ ದಾಸ. ಆಡಳಿತಾಧಿಕಾರಿ ಡಾ.ಆರ್.ವಿ.ಕುಲಕರ್ಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಶೇಷವಾಗಿ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ, ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಇಂಜನಿಯರಿಂದ ಕಾಲೇಜು, ಶ್ರೀ ಸಂಗನಬಸವ ಫಾರ್ಮಸಿ ಕಾಲೇಜು ಮತ್ತು ಎಸ್.ಬಿ ಆರ್ಟ್ಸ್ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಗಳು ಭಾಗವಾಗಿದ್ದು, ಈ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಹಂತಗಳಲ್ಲಿ ಹೈದರಾಬಾದ ಎನ್.ಐ.ಪಿ.ಇ.ಆರ್ ನೆರವು ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.