ಬಸವನಾಡಿನ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಬಾಕಿ ಎಷ್ಟು ಗೊತ್ತಾ? ಕಬ್ಬಿನ ಬಿಲ್ ಪಾವತಿಸಲು ಡಿಸಿ ಖಡಕ್ ಸೂಚನೆ

ವಿಜಯಪುರ, ಮಾ. 25- ಬಸವ ನಾಡಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಸಾಕಷ್ಟು ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಹಣ ಪಾವತಿಸುಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸಕ್ಕರೆ ಕಾರ್ಖಾನೆಗಳ ಮಾಲಿಕರಿಗೆ ಏ. 7 ಗಡುವು ನೀಡಿದ್ದಾರೆ.
2020-21 ನೇ ಆರ್ಥಿಕ ವರ್ಷದಲ್ಲಿ ವಿಜಯಪುರ ಜಿಲ್ಲೆಯಲ್ಲಿರುವ ಎಂಟು ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿವೆಯಾದರೂ ಸಂಪೂರ್ಣವಾಗಿ ಹಣವನ್ನು ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎಲ್ಲ ಎಂಟು ಜನ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಪಿ. ಸುನೀಲ ಕುಮಾರ ಸಭೆ ನಡೆಸಿದ್ದಾರೆ.
ಶೇ.80 ಕ್ಕಿಂತ ಕಡಿಮೆ ಹಣ ಪಾವತಿಸಿರುವ ಸಕ್ಕರೆ ಕಾರ್ಖಾನೆಗಳು ಏ. 4ರೊಳಗೆ ಬಾಕಿ ಪಾವತಿಸಬೇಕು ಎಂದು ಅವರು ಖಡಲ್ ಸೂಚನೆ ನೀಡಿದ್ದಾರೆ. ಏ. 7 ರೊಳಗೆ ಎಲ್ಲ ಕಾರ್ಖಾನೆಗಳು ಶೇ. 100 ರಷ್ಟು ಹಣ ಪಾವತಿಸಬೇಕು. ಇಲ್ಲದಿದ್ದರೆ ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಅನ್ವಯ ಭೂಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಮೊತ್ತ

  1. ಮಲಘಾಣ ಮನಾಲಿ ಶುಗರ್ಸ್ ಲಿ. ಬಾಕಿ ಇಲ್ಲ
  2. ಕಾರಜೋಳ ಶ್ರೀ ಬಸವೇಶ್ವರ ಶುಗರ್ಸ್ ಲಿ. ರೂ., 65 60 ಕೋ.
  3. ಯರಗಲ ಶ್ರೀ ಬಾಲಾಜಿ ಶುಗರ್ಸ್ ಆ್ಯಂಡ್ ಕೆಮಿಕಲ್ ಪ್ರೈ.ಲಿ, ರೂ. 37 ಕೋ.
  4. ಮರಗೂರು ಶ್ರೀ ಭೀಮಾಶಂಕರ ಕೋ. ಆಪ್ ಶುಗರ್ಸ್ ಫ್ಯಾಕ್ಟರಿ ರೂ. 80.92 ಲಕ್ಷ.
  5. ನಾದ ಕೆಡಿ ಜಮಖಂಡಿ ಶುಗರ್ಸ್ ಲಿ. ಯುನಿಟ್-2 ರೂ. 24.76 ಕೋ.
  6. ಆಲಮೇಲ ಕೆಪಿಆರ್ ಶುಗರ್ಸ್ ಮಿಲ್ಸ್ ಪ್ರೈ.ಲಿ ರೂ. 10.03 ಕೋ.
  7. ಹಾವಿನಾಳ ಇಂಡಿಯನ್ ಶುಗರ್ ಮ್ಯಾನುಫೆಕ್ಚರ್ ಕೋ.ಲಿ ರೂ. 33.46 ಕೋ.
  8. ಗಲಗಲಿ ನಂದಿ ಎಸ್‍ಎಸ್‍ಕೆ ಲಿ. ರೂ. 32.59 ಕೋ.

Leave a Reply

ಹೊಸ ಪೋಸ್ಟ್‌