ವಿಜಯಪುರ, ಮಾ. 25- ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ವಿವಿಯ ವಿಜ್ಞಾನ, ಮಾನವೀಯತೆ ಮತ್ತು ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ. ಕುಶಾಲ ದಾಸ ಅವರು ದಕ್ಷಿಣ ಏಷ್ಯಾ ರಾಷ್ಟ್ರಗಳ ಶರೀರ ಕ್ರೀಯಾಶಾಸ್ತ್ರಜ್ಞರ ಸಂಸ್ಥೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಾರ್ಕ್ ರಾಷ್ಟ್ರಗಳ ವ್ಯಾಪ್ತಿಯ ಶರೀರ ಕ್ರೀಯಾಶಾಸ್ತ್ರಜ್ಞರ ಸಂಸ್ಥೆ ಅಧ್ಯಕ್ಷರಾಗಿ ನಿನ್ನೆ ದೆಹಲಿಯ ಜಾಮಿಯಾ ಹಮ್‍ದರ್ದ್ ವಿಶ್ವವಿದ್ಯಾಲಯದಲ್ಲಿ ಆನ್‍ಲೈನ್ ಮೂಲಕ ನಡೆದ ಚುನಾವಣೆಯಲ್ಲಿ ತಮ್ಮ ಪ್ರತಿ ಸ್ಪರ್ಧಿಯನ್ನು 12-2 ಮತಗಳ ಬಾರಿ ಅಂತರದಿಂದ ಸೋಲಿಸಿ ಗೆಲವು ಸಾಧಿಸಿದ್ದಾರೆ.
ಪ್ರತಿಷ್ಠಿತ ದೆಹಲಿಯ ಅಖಿಲ ಭಾರತೀಯ ವೈದ್ಯವಿಜ್ಞಾನ ಸಂಸ್ಥೆ(ಏಮ್ಸ್) ಪ್ರಾಧ್ಯಾಪಕರು ಈ ಚುನಾವಣೆಯಲ್ಲಿ ಡಾ. ಕುಶಾಲ ದಾಸ್ ಅವರ ಎದುರಾಳಿಯಾಗಿದ್ದರು. ಶ್ರೀಲಂಕಾದ ಕೊಲಂಬೊದಲ್ಲಿ ಕಛೇರಿ ಹೊಂದಿರುವ ಈ ಸಂಸ್ಥೆಯನ್ನು ಎರಡು ವರ್ಷಗಳವರೆಗೆ ಡಾ. ಕುಶಾಲದಾಸ ಮುನ್ನೆಡಸಲಿದ್ದಾರೆ.
ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ, ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ. ಎಸ್. ಬಿರಾದಾರ, ಸಮಉಪಕುಲಪತಿ ಡಾ. ಆರ್. ಎಸ್. ಮುಧೋಳ, ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಸೇರಿದಂತೆ ವಿವಿಯ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಡಾ. ಕುಶಾಲ ದಾಸ ಅವರನ್ನು ಅಭಿನಂದಿಸಿದ್ದಾರೆ.
ವಿಜಯಪುರದಂಥ ಸ್ಥಳದಲ್ಲಿದ್ದುಕೊಂಡೇ ದೇಶ-ವಿದೇಶಗಳ ವಿಜ್ಞಾನಿಗಳು ಹಾಗೂ ಸಂಸ್ಥೆಗಳೊಂದಿಗೆ ಡಾ. ಕುಶಾಲ ದಾಸ ಅವರು ತಮ್ಮ ದೈಹಿಕ ನ್ಯೂನ್ಯತೆಗಳ ನಡುವೆಯೂ ಸದಾ ಸಕ್ರಿಯರಾಗಿ ಒಡನಾಟ ಹೊಂದಿದ್ದಾರೆ. ಅಲ್ಲದೇ, ವಿಜ್ಞಾನದ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಪದಾಧಿಕಾರಿಗಳು ಇಂದು ಭೇಟಿ ಮಾಡಿ, ಅವರನ್ನು ಸನ್ಮಾನಿಸಿ, ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಮದಭಾವಿ, ಡಾ. ಮಹಾಂತೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ.ಎಂ.ಎಸ್.ಮದಭಾವಿ, ಎಂ.ಎಸ್.ಇಜೇರಿ, ಡಾ.ಮಹಾಂತೇಶ ಬಿರಾದಾರ, ಡಾ.ವಿ.ಡಿ.ಐಹೊಳ್ಳಿ, ಎ.ಬಿ.ಬೂದಿಹಾಳ ಉಪಸ್ಥಿತರಿದ್ದರು.