ಬಿ ಎಲ್ ಡಿ ಇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ ಆರಂಭ

ವಿಜಯಪುರ, ಮಾ. 26- ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ರೋಗ ಶಸ್ತ್ರ ಚಿಕಿತ್ಸೆ ಸೇವೆಗಳು ಆರಂಭವಾಗಿವೆ.

ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ರೋಗ ಮತ್ತು ಹೃದಯ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಚಿಕಿತ್ಸೆಗಳು ಆರಂಭಗೊಂಡಿವೆ.
ಕರ್ನಾಟಕ ಸುವರ್ಣ ಆರೋಗ್ಯ ಟ್ರಸ್ಟ್ ಅಡಿಯಲ್ಲಿ ಬಿ ಪಿ ಎಲ್ ರೋಗಿಗಳಿಗೆ ಆಯಷ್ಮಾನ್ ಭಾರತ(ಎ ಬಿ‌ ಎ ಆರ್ ಕೆ) ಮತ್ತು ಸರಕಾರಿ ಉದ್ಯೋಗಿಗಳಿಗಾಗಿ ಜ್ಯೋತಿ ಸಂಜೀವಿನಿ(ಜೆ‌ ಎಸ್ ಎಸ್) ಯೋಜನೆಗಳು ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯವಿದೆ.

ವಿಜಯಪುರ ಜಿಲ್ಲೆಯ ಹಾಗೂ ಸುತ್ತಲಿನ ಹೃದಯ ರೋಗಿಗಳು ಆಸ್ಪತ್ರೆಯ ಹಾಗೂ ಈ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಲು ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌