ವಿಜಯಪುರ, ಮಾ. 27- ವಿಜಯಪುರ ಜಿಲ್ಲೆಯ ಬ್ಯಾಂಕುಗಳ 2021-22ನೇ ಆರ್ಥಿಕ ವರ್ಷದ ರೂ. 8040.27 ಕೋ. ಹಣಕಾಸು ವಿನಿಯೋಗ ಹೊಂದಿರುವ ಎಲ್ಲಾ ಬ್ಯಾಂಕರ್‌ಗಳಿಗೆ ವಾರ್ಷಿಕ ಸಾಲ ಯೋಜನೆ (ಎಸಿಪಿ) ಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ್ ರೆಡ್ಡಿ ಅವರು ಬಿಡುಗಡೆ ಮಾಡಿದರು.
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಡಿಎಲ್‌ಸಿಸಿ ಸಭೆಯಲ್ಲಿ ಸಾಲ ಯೋಜನೆಯಡಿ ರೂ. 5932.72 ಕೋ. (73.79%) ಕೃಷಿ, ರೂ. 865.85 ಕೋ. (10.77%) ಎಂಎಸ್‌ಎಂಇ ಮತ್ತು ಇತರ ಆದ್ಯತೆಯ ವಲಯಕ್ಕೆ ರೂ. 418.50 ಕೋ. (5.20%) ಬಿಡುಗಡೆ ಮಾಡಿದರು.
ಸಮಗ್ರ ಕೃಷಿ , ಸಂಬಂಧಿತ ಚಟುವಟಿಕೆಗಳಾದ ಡೈರಿ, ಕೋಳಿ, ಕುರಿ / ಮೇಕೆ, ಕೃಷಿ ಚಟುವಟಿಕೆಯ ಜೊತೆಗೆ ಕೃಷಿ ಚಟುವಟಿಕೆ, ತೋಟಗಾರಿಕೆ ಬೆಳೆಗಳಾದ ಲಿಂಬೆ, ದ್ರಾಕ್ಷಿ, ದಾಳಿಂಬೆ, ಪಿಎಂಎಫ್‌ಎಂಇ, ಎಐಎಫ್ ಅಡಿಯಲ್ಲಿ ಹಣಕಾಸು, ಆತ್ಮನಿರ್ಭರ ಭಾರತ್ ಯೋಜನೆಯಡಿ ಮುದ್ರಾ ಸಾಲಗಳು, ವಸತಿ ಸಾಲಗಳು ಇತ್ಯಾದಿಗಳಿಗಾಗಿ ಅನುದಾನ ಮೀಸಲಿಡಲಾಗಿದೆ.
ಎಲ್ಲ ಸರಕಾರಿ ಪ್ರಾಯೋಜಿತ ಯೋಜನೆಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಮತ್ತು ಜಿಲ್ಲಾ ಆಡಳಿತಕ್ಕೆ ಎಸ್. ಸಿ. ಮತ್ತು ಎಸ್. ಟಿ. ವಿದ್ಯಾರ್ಥಿಗಳ ಬಾಕಿ ಇರುವ ಆಧಾರ್ ಮ್ಯಾಪಿಂಗನ್ನು ಕಡಿಮೆ ಮಾಡಲು ಸಹಾಯ ಮಾಡುವಂತೆ ಬ್ಯಾಂಕ್ ರುಗಳಿಗೆ ಮುಖ್ಯ ಕಾರ್ಯ ಕಾರ್ವಹಣಾಧಿಕಾರಿಗಳು ಸೂಚಿನೆ ನೀಡಿದರು.
ಈ ಸಭೆಯಲ್ಲಿ ಲೀಡ ಬ್ಯಾಂಕ್ ಮ್ಯಾನೇಜರ್ ಸೋಮನಗೌಡ ಐನಾಪುರ, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ವೀರಪ್ಪ ಪತ್ರಾದ್, ವಿದ್ಯಾ ಗಣೇಶ್, ಡಿಡಿಎಂ, ನಬಾರ್ಡ್ ಮತ್ತು ನಾನಾ ಬ್ಯಾಂಕುಗಳ ಹಿರಿಯ ಅಧಿಕಾರಿಗಳು, ಕೈಗಾರಿಕಾ ಸಂಘಗಳ ಪ್ರತಿನಿಧಿ ಎಸ್. ವಿ. ಪಾಟೀಲ, ಗುಡ್ಡೋದಗಿ ಮತ್ತು ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.