ಬಸವ ನಾಡು
ವಿಜಯಪುರ, ಮಾ. 31- ವಿಜಯಪುರ ಜಿಲ್ಲೆ ನೀರಾವರಿಗೆ ಒಳಪಟ್ಟಿದ್ದರಿಂದ ಬೇಸಿಗೆ ಸಮಯದಲ್ಲೂ ನೀರಿನ ಕೊರತೆ ತಪ್ಪಿದೆ. ಇದರಿಂದಾಗಿ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕಾರಣವಾಗಿದೆ ಎಂದು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ರೈತ ಸಂಘಗಳು ಮತ್ತು ವರ್ಡ್ ವಿಜನ್ ಇಂಡಿಯಾ ಎ. ಪಿ. ವಿಜಯಪುರ ಸಹಯೋಗದಲ್ಲಿ ಹಂಚಿನಾಳ ಪಿ. ಎಚ್. ಗ್ರಾಮದಲ್ಲಿ ಆಯೋಜಿಸಲಾಗಿದ್ದ ಪಿವಿಸಿ ಪೈಪ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವರ್ಡ್ ವಿಜನ್ ಸಂಸ್ಥೆ ಬಡ ರೈತರಿಗೆ ಪಿವಿಸಿ ಪೈಪ್ ಉಚಿತವಾಗಿ ನೀಡುತ್ತಿರುವುದು ನಿಜವಾಗಿ ಅಭಿನಂದನಾರ್ಹವಾಗಿದೆ. ರೈತರು ತಮ್ಮ ಜಮೀನಿನಲ್ಲಿ ಹೆಚ್ಚು-ಹೆಚ್ಚು ಬೆಳೆಗಳನ್ನು ಬೆಳೆದು ತಮ್ಮ ಹಾಗೂ ಮಕ್ಕಳ ಶಿಕ್ಷಣ, ಮೂಲಭೂತ ಸೌಲಭ್ಯಗಳನ್ನು ಹೊಂದಲು ಸಾಧ್ಯ ಎಂದು ಅವರು ಹೇಳಿದರು.
ವರ್ಡ್ ವಿಜನ್ ಸಂಸ್ಥೆ ವ್ಯವಸ್ಥಾಪಕ ಸುನಂದ ಎಸ್ ಮಾತನಾಡಿ, ಅತ್ಯಂತ ಕಡಿಮೆ ಜಮೀನನ್ನು ಹೊಂದಿದ ರೈತರಿಗೆ ನಮ್ಮ ಸಂಸ್ಥೆಯಿಂದ ರೈತರು ಬೆಳೆಯಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದರಿಂದ ರೈತರು ಮತ್ತು ಮಕ್ಕಳ ಅಭಿವೃದ್ಧಿಯೇ ನಮ್ಮ ಸಂಸ್ಥೆಯ ಗುರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಲ್ಡ್ ವಿಷನ್ ಸಂಸ್ಥೆ ಬಸವರಾಜ ಎಸ್, ಸುಖಲತಾ ಬಂಡಾರೆ, ಬಂಜಾರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ. ಎಲ್. ಚವ್ಹಾಣ, ಸಂಗು ಸಜ್ಜನ, ಅಶೋಕ ಪಾಟೀಲ, ಪದ್ದು ಚವ್ಹಾಣ, ಗುರು ಸಜ್ಜನ, ಕಾಂತು ರಾಠೋಡ, ನಿಂಗು ಸಜ್ಜನ, ಜತ್ತು ಕರಿಮನಿ ಸೇರಿದಂತೆ ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.