ಏಪ್ರಿಲ್ ಒಳಗೆ ತೆರಿಗೆ ಪಾವತಿಸಿ ಶೇ.5 ರಷ್ಟು ರಿಯಾಯಿತಿ ಪಡೆಯಿರಿ- ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಸೂಚನೆ

ಬಸವ ನಾಡು ವಿಜಯಪುರ- ವಿಜಯಪುರ ಮಹಾನಗರ ಪಾಲಿಕೆಯ ಕರದಾರರು 2020-21 ನೇ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಏಪ್ರಿಲ್ ಮಾಸಾಂತ್ಯದೊಳಗೆ ಪಾವತಿಸಿದರೆ ಶೇ. 5 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷಾಶೆಟ್ಟಿ ತಿಳಿಸಿದ್ದಾರೆ.ಮೇ ಮತ್ತು ಜೂನ್ ತಿಂಗಳಲ್ಲಿ ಬಡ್ಡಿ ರಹಿತ ತೆರಿಗೆ ಪಾವತಿಸಲು ಅವಕಾಶವಿದೆ. ಆಸ್ತಿ ತೆರಿಗೆಯನ್ನು ಜೂ. 31 ರೊಳಗೆ ಪಾವತಿಸದಿದ್ದರೆ ಜು. 1 ರಿಂದ ಪ್ರತಿ ತಿಂಗಳು ಶೇ. 2 ರಷ್ಟು ದಂಡ ವಿಧಿಸಲಾಗುತ್ತದೆ. 2021-22 ನೇ ಆರ್ಥಿಕ […]

ಹೈನುಗಾರಿಕೆ, ಹಾಲು ಉತ್ಪಾದನೆ ಬಗ್ಗೆ ಜನಜಾಗೃತಿಗೆ ವಿಜಯಪುರ ಉಪವಿಬಾಗಾಧಿಕಾರಿ ಬಲರಾಮ ಲಮಾಣಿ ಸೂಚನೆ

ಬಸವ ನಾಡು ವಿಜಯಪುರ- ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಉತ್ತಮವಾಗಿದ್ದು, ಬೇಸಿಗೆಯಲ್ಲಿಯೂ ಜಾನುವಾರುಗಳಿಗೆ ಮೇವು ಮತ್ತು ನೀರಿನ ಆಗುವುದಿಲ್ಲ. ಇದರ ಸದುಪಯೋಗ ಪಡೆದು ಪಶುಗಳ ಪಾಲನೆ, ಪೋಷಣೆ ಮಾಡಿ ಹೈನುಗಾರಿಕೆ ಮತ್ತು ಹಾಲು ಉತ್ಪಾದನೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡಬೇಕು ಎಂದು ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಪಶುಸಂಗೋಪನೆ ಮತ್ತು ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ವಿಜಯಪುರ ನಗರದ ರುಡ್ಸೆಟ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ […]

ಈ ತಿಂಗಳಾಂತ್ಯಕ್ಕೆ 24×7 ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನ ಪೂರ್ಣಗೊಳಿಸಲು ಶಾಸಕ ಯತ್ನಾಳ ಸೂಚನೆ

ಬಸವ ನಾಡು ವಿಜಯಪುರ- ವಿಜಯಪುರ ನಗರಕ್ಕೆ ನಿರಂತರ ನೀರು ಪೂರೈಸುವ 24×7 ಕುಡಿಯುವ ನೀರಿನ ಯೋಜನೆಯನ್ನು ಈ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೂಚನೆ ನೀಡಿದ್ದಾರೆ.ವಿಜಯಪುರ ನಗರದಲ್ಲಿರುವ ತಮ್ಮ ಸಾರ್ವಜನಿಕ ಸಂಪರ್ಕ ಕಾರ್ಯಾಲಯದಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಮಾಜಿ ಸದಸ್ಯರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.ಈಗ ವಿಜಯಪುರ ನಗರದಲ್ಲಿ 10 ರಿಂದ 12 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. […]

ವಿಜಯಪುರ ನಗರದ ಹೊರವಲಯದ ಸ್ಟೋನ್ ಕ್ರಷರ್ ಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಬಸವನಾಡು ವಿಜಯಪುರ- ವಿಜಯಪುರ ಜಿಲ್ಲೆಯ ಐನಾಪೂರ ಗ್ರಾಮದಲ್ಲಿರುವ ಸ್ಟೋನ್ ಕ್ರಷರ್ ಘಟಕಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸ್ಟೋನ್ ಕ್ರಷರ್ ಗಳಿಗೆ ನೀಡಲಾಗಿರುವ ಫಾರಂ-ಬಿ, ಫಾರಂ-ಸಿ ಮತ್ತು ಫಾರಂ-ಸಿ ನವೀಕರಣ, ಪರಿಭಾವಿತ ವಿಸ್ತರಣೆ ನೀಡುವ ಸಂಬಂಧ ಈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಲ್ಲು ಪುಡಿ ಮಾಡುವ ಪ್ರಾಧಿಕಾರದ ಅಧ್ಯಕ್ಷರು ಸೇರಿದಂತೆ ಸದಸ್ಯರಾದ ಉಪವಿಭಾಗಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ, ಪರಿಸರ ಇಲಾಖೆ […]