ಏಪ್ರಿಲ್ ಒಳಗೆ ತೆರಿಗೆ ಪಾವತಿಸಿ ಶೇ.5 ರಷ್ಟು ರಿಯಾಯಿತಿ ಪಡೆಯಿರಿ- ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಸೂಚನೆ

ಬಸವ ನಾಡು

ವಿಜಯಪುರ- ವಿಜಯಪುರ ಮಹಾನಗರ ಪಾಲಿಕೆಯ ಕರದಾರರು 2020-21 ನೇ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಏಪ್ರಿಲ್ ಮಾಸಾಂತ್ಯದೊಳಗೆ ಪಾವತಿಸಿದರೆ ಶೇ. 5 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷಾಶೆಟ್ಟಿ ತಿಳಿಸಿದ್ದಾರೆ.
ಮೇ ಮತ್ತು ಜೂನ್ ತಿಂಗಳಲ್ಲಿ ಬಡ್ಡಿ ರಹಿತ ತೆರಿಗೆ ಪಾವತಿಸಲು ಅವಕಾಶವಿದೆ. ಆಸ್ತಿ ತೆರಿಗೆಯನ್ನು ಜೂ. 31 ರೊಳಗೆ ಪಾವತಿಸದಿದ್ದರೆ ಜು. 1 ರಿಂದ ಪ್ರತಿ ತಿಂಗಳು ಶೇ. 2 ರಷ್ಟು ದಂಡ ವಿಧಿಸಲಾಗುತ್ತದೆ. 2021-22 ನೇ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಏ. 30 ರೊಳಗೆ ಪಾವತಿಸಿ ಶೇ. 5 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಆಸ್ತಿ ತೆರಿಗೆಯನ್ನು ಪಾವತಿ ಮಾಡಲು ಪಾಲಿಕೆ ಕಚೇರಿಯಲ್ಲಿ ಕರ್ನಾಟಕ ಒನ್ ನಲ್ಲಿ ಪಾವತಿಸಬಹುದಾಗಿದೆ. ಇಲ್ಲಿ ಸರಕಾರಿ ರಜಾ ದಿನಗಳನ್ನು ಒಳಗೊಂಡು ಎಪ್ರೀಲ್ 30ರ ವರೆಗೂ ಇದು ಕಾರ್ಯ ನಿರ್ವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಆಸ್ತಿ ತೆರಿಗೆ ಪಾವತಿಸುವುದು ಈಗ ತುಂಬಾ ಸುಲಭವಾಗಿದ್ದು, ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಆನ್‍ಲೈನ್ ಮೂಲಕವೂ ಪಾವತಿಸಬಹುದಾಗಿದೆ. ಪೇಟಿಎಂ ಆ್ಯಪ್ ಮೂಲಕ ಮತ್ತು www.vijayapuracity.org ಗೆ ಭೇಟಿ ನೀಡಿಯೂ ತೆರಿಗೆಯನ್ನು ಪಾವತಿಸಬಹುದಾಗಿದೆ. ಆಸ್ತಿ ತೆರಿಗೆದಾರರು ತಮ್ಮ ಆಸ್ತಿ ತೆರಿಗೆಯನ್ನು ನಿಗದಿತ ಸಮಯದಲ್ಲಿ ಪಾವತಿಸುವುದರಿಂದ ವಿಜಯಪುರ ನಗರದ ಸರ್ವಾಂಗೀಣ ಅಭಿವೃದ್ಧಿ ಸಹಕಾರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಏಪ್ರಿಲ್ ತಿಂಗಳ ಒಳಗಾಗಿ ತೆರಿಗೆ ಪಾವತಿಸಿ ಶೇ. 5 ರಷ್ಟು ರಿಯಾಯಿತಿ ಲಾಭ ಪಡೆಯಬೇಕು ಮತ್ತು ವಿಜಯಪುರ ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ತೆರಿಗೆ ಭರಿಸುವಂತೆ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌