ವಿಜಯಪುರ ನಗರದ ಹೊರವಲಯದ ಸ್ಟೋನ್ ಕ್ರಷರ್ ಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಬಸವನಾಡು

ವಿಜಯಪುರ- ವಿಜಯಪುರ ಜಿಲ್ಲೆಯ ಐನಾಪೂರ ಗ್ರಾಮದಲ್ಲಿರುವ ಸ್ಟೋನ್ ಕ್ರಷರ್ ಘಟಕಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಈ ಸ್ಟೋನ್ ಕ್ರಷರ್ ಗಳಿಗೆ ನೀಡಲಾಗಿರುವ ಫಾರಂ-ಬಿ, ಫಾರಂ-ಸಿ ಮತ್ತು ಫಾರಂ-ಸಿ ನವೀಕರಣ, ಪರಿಭಾವಿತ ವಿಸ್ತರಣೆ ನೀಡುವ ಸಂಬಂಧ ಈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಲ್ಲು ಪುಡಿ ಮಾಡುವ ಪ್ರಾಧಿಕಾರದ ಅಧ್ಯಕ್ಷರು ಸೇರಿದಂತೆ ಸದಸ್ಯರಾದ ಉಪವಿಭಾಗಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ, ಪರಿಸರ ಇಲಾಖೆ ಅಧಿಕಾರಿಗಳು, ಪೊಲೀಸ್ ಉಪ ಅಧೀಕ್ಷಕರು ಉಪಸ್ಥಿತರಿದ್ದರು. ಅಲ್ಲದೇ, ಈ ಕಲ್ಲು ಪುಡಿ ಮಾಡುವ ಘಟಕಗಳ ಬಗ್ಗೆ ಮಾಹಿತಿ ನೀಡಿದರು.


ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಯುಕ್ತರು ಐನಾಪೂರ ಗ್ರಾಮದಲ್ಲಿ ಕ್ರಷರ್ ವಲಯಗಳಿರುವ ಪ್ರದೇಶಕ್ಕೆ ಭೇಟಿ ನೀಡಿ ಚರ್ಚಿಸಿ ಮುಂದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ವಿಷಯಗಳ ಕುರಿತು ಚರ್ಚಿಸಿ ಕ್ರಮಕೈಗೊಳ್ಳಲು ಸೂಚಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ನಿರ್ಧರಿಸಿದರು.

Leave a Reply

ಹೊಸ ಪೋಸ್ಟ್‌