ಬಸವ ನಾಡು
ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯ 2019- 20 ನೇ ಆರ್ಥಿಕ ವರ್ಷದ ಅಂಕಿ-ಅಂಶಗಳ ನೋಟ ಎಂಬ ಪುಸ್ತಕವನ್ನು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಬಿಡುಗಡೆ ಮಾಡಿದರು.
ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರ ಅಧ್ಯಕ್ಷತೆಯಲ್ಲಿ 7ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ನಡೆಯಿತು.
ಈ ಸಂದರ್ಭದಲ್ಲಿ ಅವರು ಜಿಲ್ಲೆಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮತ್ತು ಇತರ ಚಟುವಟಿಕೆಗಳ ಬಗೆಗಿನ ಮಹತ್ವದ ಅಂಕಿ-ಅಂಶಗಳನ್ನು ಒಳಗೊಂಡ 2019-20 ನೇ ಸಾಲಿನ ಜಿಲ್ಲಾ ಅಂಕಿ-ಅಂಶಗಳ ನೋಟ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಶಿಕ್ಷಣ, ಸಂಶೋಧನೆ, ಯೋಜನೆ, ಇತ್ಯಾದಿ ಉದ್ದೇಶಗಳಿಗೆ ಈ ಅಂಕಿ-ಅಂಶಗಳು ಆಧಾರವಾಗಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಪಿ. ಸುನೀಲ ಕುಮಾರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ಶ್ರಮ ವಹಿಸಿ ಮಾಹಿತಿ ಸಂಗ್ರಹಿಸಿ ಪ್ರಕಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ನಿರ್ದೇಶಕರು ಇವರ ಮತ್ತು ಸರಕಾರದ ಆದೇಶದನ್ವಯ 7 ನೇ ಆರ್ಥಿಕ ಗಣತಿಯನ್ನು 2011ರ ಜನಗಣತಿ ಆಧಾರದ ಮೇಲೆ ಆರ್ಥಿಕ ಗಣತಿ ಕೈಗೊಂಡಿದ್ದು, ಜಿಲ್ಲೆಯ 5 ತಾಲೂಕುಗಳು, 693 ಗ್ರಾಮಗಳಿವೆ. ಗ್ರಾಮ ಪಂಚಾಯಿತಿ ಘಟಕವಾಗಿ ಇಟ್ಟುಕೊಂಡು ಕಾರ್ಯ ನಿರ್ವಹಿಸಲಾಗಿದೆ. ಈ ಗಣತಿ ಅನ್ವಯ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ವಿಜಯಪುರ, ಇಂಡಿ, ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕುಗಳಲ್ಲಿ 680 ಜನ ವಸತಿ ಗ್ರಾಮಗಳು, 13 ಜನ ವಸತಿ ಇಲ್ಲದ ಗ್ರಾಮಗಳು ಎಂದು ಗುರುತಿಸಲಾಗಿದೆ. 213 ಗ್ರಾಮ ಪಂಚಾಯಿತಿಗಳನ್ನು 2011 ರ ಜನಗಣತಿಗೆ ಅನುಸಾರವಾಗಿ 150 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 150 ವಾರ್ಡ್ ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಅಲ್ಲದೇ, ದರಂತೆ 6ನೇ ಆರ್ಥಿಕ ಗಣತಿ ಹಾಗೂ 7ನೇ ಆರ್ಥಿಕ ಗಣತಿ ಅನ್ವಯ ಉದ್ಯಮಗಳ ವ್ಯತ್ಯಾಸದ ಬಗ್ಗೆ ಗುರುತಿಸಲಾಗಿದೆ. ಸಾಮಾನ್ಯ ಸೇವಾ ಕೇಂದ್ರ ವಿಜಯಪುರ ಇವರ ವತಿಯಿಂದ ನೀಡಿದ ಗಣತಿ ಅಂಕಿ- ಅಂಶಗಳ ವರದಿಯಂತೆ 7 ನೇ ಆರ್ಥಿಕ ಗಣತಿಯಲ್ಲಿ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ 36244 ಮತ್ತು ನಗರ ಪ್ರದೇಶ ವ್ಯಾಪ್ತಿಯಲ್ಲಿ 46748 ಸೇರಿದಂತೆ ಒಟ್ಟು 82992 ಉದ್ಯಮಗಳು ಕಂಡು ಬಂದಿವೆ. ಕಳೆದ ಆರ್ಥಿಕ ಗಣತಿಯಲ್ಲಿ 60427 ಉದ್ಯಮಿಗಳಿದ್ದವು ಇಗ 82992 ಉದ್ಯಮಗಳು ಕಂಡುಬಂದಿರುವುದರಿಂದ ಜಿಲ್ಲೆಯಲ್ಲಿ 22565 ಉದ್ಯಮಗಳ ವ್ಯತ್ಯಾಸ ಕಂಡುಬಂದಿದೆ ಎಂದು ಆರ್ಥಿಕ ಗಣತಿಯನ್ನು ತಿಳಿಸಲಾಗಿದೆ.
ಈ ಸಭೆಯಲ್ಲಿ ದತ್ತಾಂಶ ಮಂಡಿಸಿ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸುವ ಕುರಿತು ಚರ್ಚಿಸಲಾಯಿತು. ಅದರಂತೆ ಉದ್ಯಮಗಳಲ್ಲಿ ಹೆಚ್ಚಿಗೆ ಶೇ. 134.29 ರಷ್ಟು ಬೆಳವಣಿಗೆ ಕಂಡು ಬಂದಿದ್ದು ಈ ಕುರಿತು ಸಾಂಖ್ಯಿಕ ಇಲಾಖೆಯಿಂದ ಮರುಪರಿಶೀಲನೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪಿ ಸುನೀಲ ಕುಮಾರ ಸಂಬಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ(ಪ್ರಭಾರ) ಎಸ್. ವಿ. ನಾವಿ ಅವರು 7 ನೇ ಆರ್ಥಿಕ ಗಣತಿಯ ಬಗ್ಗೆ ಮಾಹಿತಿ ನೀಡಿದರು.