ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಆಚರಣೆ

ಬಸವ ನಾಡು

ವಿಜಯಪುರ- ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಜಯಂತಿಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಚರಿಸಲಾಯಿತು.
ವಿಜಯಪುರ ನಗರದಲ್ಲಿರುವ ಪತ್ರಿಕಾ ಭವನದಲ್ಲಿ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಸಚೇಂದ್ರ ವೈ. ಲಂಬು ಪೂಜೆ ಸಲ್ಲಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಅವರು, ಅಂಬೇಡ್ಕರ ಅವರು ಶೋಷಿತ ಜನಾಂಗದ ಏಳಿಗೆಗಾಗಿ ಶೃಮಿಸಿ, ದೇಶದ ನೀರಾವರಿ, ರಿಸರ್ವ್ ಬ್ಯಾಂಕ, ಮಹಿಳೆಯರ ಏಳಿಗೆ, ಸಮಾನತೆ, ಮತ ಚಲಾವಣೆ ಹಕ್ಕು, ಬಾಣಂತಿಯರಿಗೆ ರಜೆ ಹೀಗೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿ ಎಲ್ಲರೂ ಸ್ವಾವಲಂಬನೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶಿಯಾಗಿದ್ದಾರೆ. ಕೊಟ್ಯಂತರ ಜನರಿಗೆ ದಾರಿದೀಪವಾಗಿರುವ ವಿಶ್ವವಿಖ್ಯಾತ ಅಂಬೇಡ್ಕರ ಅವರ ಚಿಂತನೆಗಳೂ ಇಂದಿಪೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಿನಾಯಕ. ಸೊಂಡೂರ. ರಾಹುಲ ಮಾನಕರ. ಖಾಜಾ ಬೇಪಾರಿ. ಸಾಗರ ಕಾಂಬಳೆ. ಸುನಿಲ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌