ಬಸವ ನಾಡು
ವಿಜಯಪುರ- ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಅಂಗವಾಗಿ ವಿಜಯಪುರದಲ್ಲಿ ಬಿಜೆಪಿ ವತಿಯಿಂದ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದೀನ, ದಲಿತರು, ಹಿಂದುಳಿದವರ ಉದ್ಧಾರಕ್ಕಾಗಿಯೇ ತಮ್ಮ ರಕ್ತ ಸುಟ್ಟುಕೊಂಡಿದ್ದಾರೆ. ಅವರ ಜಯಂತೋತ್ಸವವನ್ನು ರಕ್ತದಾನ ಮಾಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸಮಾನತೆ ಸಾರಿ ದೇಶವನ್ನು ಒಂದು ಮಾಡಿದರು. ಅಂಬೇಡ್ಕರ ಅವರು ಕೇವಲ ದಲಿತ ನಾಯಕ ಮಾತ್ರವಲ್ಲ. ಸಮಸ್ತ ದೇಶದ ನಾಯಕರಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ ಅಂಬೇಡ್ಕರ್ ಅವರು ರಾಜಕೀಯವಾಗಿ ಎದುರಿಸಿದ ಸಂಕಷ್ಯಗಳನ್ನು ವಿವರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಬಾಬಾಸಾಹೇಬ ಅಂಬೇಡ್ಕರ ಅವ ಜಯಂತ್ಯೋತ್ಸವವನ್ನು ರಕ್ತದಾನ ಮಾಡುವುದರ ಮೂಲಕ ಸರಳವಾಗಿ ಆಚರಿಸುತ್ತಿದ್ದಾರೆ. ದೇಶ ಸಂಕಷ್ಟದಲ್ಲಿದ್ದಾಗ ದೇಶವನ್ನು ಕಾಪಾಡಲು ಬಿಜೆಪಿ ಕಾರ್ಯಕರ್ತರು ಸಿದ್ಧರಿರುತ್ತಾರೆ. ಕಳೆದ ವರ್ಷ ಕೊರೊನಾ ಸಂಕಷ್ಟದ ಸಮಯದಲ್ಲಿ ನಮ್ಮ ಕಾರ್ಯಕರ್ತರು ತಮ್ಮ ಹಾಗೂ ಕುಟುಂಬದ ಪ್ರಾಣವನ್ನು ಲೆಕ್ಕಿಸದೇ ಜನರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಜನರಿಗೆ ಆಹಾರ, ಹಾಲು, ವಾಹನ ವ್ಯವಸ್ಥೆ ಮಾಡಿ ಕಷ್ಟದಲ್ಲಿರುವವರಿಗೆ ನೆರವಾಗಿದ್ದಾರೆ. ಇಂದು ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು ಕಾರ್ಯಕರ್ತರು ಸಮಸ್ಯೆಯಲ್ಲಿರುವ ಜನರಿಗೆ ಸಹಾಯ ಮಾಡಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗುರ, ಭೀಮಾಶಂಕರ ಹದನೂರ, ಮಳುಗೌಡ ಪಾಟೀಲ, ಮುತ್ತಣ್ಣ ಸಾಸನೂರ, ಶ್ರೀನಿವಾಸ ಕಂದಗಲ, ಛಾಯಾ ಮಸಿಯವರ, ಗೀತಾ ಕುಗನೂರ, ರವಿಕಾಂತ ಬಗಲಿ, ವಿಠ್ಠಲ ನಡುವಿನಕೇರಿ, ವಿಜಯ ಜೋಶಿ, ಬಾಬುರಾಜೇಂದ್ರ ನಾಯಕ ಪಾಫುಸಿಂಗ ರಜಪೂತ, ಭರತ ಕೋಳಿ, ಪ್ರಕಾಶ ಹಲಸಂಗಿ, ಸಿದ್ದು ಪೂಜಾರಿ, ಶಿವಪುತ್ರ ರೂಗಿ, ಮುತ್ತು ಸಾಸನೂರ, ಮಲ್ಲು ವಾಲೀಕಾರ, ಶಿವಪುತ್ರಪ್ಪ ನಾಟೀಕಾರ, ಬಾಬು ಚವ್ಹಾಣ ಸೇರಿದಂತೆ ಬಿಜೆಪಿ ಎಸ್. ಸಿ. ಮೋರ್ಚಾ ಕಾರ್ಯಕರ್ತರು ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಿದರು.