ಹುಣಸೆಗಿಡ ಕೋರ್ಟ್ ನಿಂದ ಬನ್ನಿಗಿಡ ಕೋರ್ಟ್ ವರೆಗಿನ ತಮ್ಮ ವೃತ್ತಿ ಜೀವನದ ನೆನಪಿನ ಬುತ್ತಿ ಬಿಚ್ಚಿಟ್ಟ ನ್ಯಾಯವಾದಿ ಅರ್ಜುನ ಮಿಸಾಳೆ

ಬಸವ ನಾಡು ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಗೂ ನ್ಯಾಯಾಂಗ ಇಲಾಖೆಗೂ ಅದರದೇ ಆದ ಇತಿಹಾಸವಿದೆ. ಹಿರಿಯ ನ್ಯಾಯವಾದಿ ಅರ್ಜುನ ಮಿಸಾಳೆ ಅವರು ತಾವು ನ್ಯಾಯವಾದಿಯಾಗಿ ಸೇವೆ ಸಲ್ಲಿಸಲು ಆರಂಭಿಸಿದಾಗಿನಿಂದ ಇಂದಿನವರೆಗಿನ ನ್ಯಾಯಾಲಯಗಳು ಮತ್ತು ಅವುಗಳ ಸ್ಥಳಗಳ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ.ನ್ಯಾಯವಾದಿ ಅರ್ಜುನ್ ಮಿಸಾಳೆ ಅವರ ಫೇಸ್ ಬುಕ್ ವಾಲ್ ನಿಂದ ಪಡೆಯಲಾದ ಮಾಹಿತಿ ಇಲ್ಲಿದೆ. https://m.facebook.com/story.php?story_fbid=1142085802903653&id=100013067313581 ವಿಜಯಪುರ ನ್ಯಾಯಾಲಯಗಳು- “ಹುಣಸೆಗಿಡ […]

10 ತಿಂಗಳಲ್ಲಿ ವಿಜಯಪುರ ವಿಮಾನ ನಿಲ್ದಾಣ ಮೊದಲ ಹಂತದ ಕಾಮಗಾರಿ ಪೂರ್ಣ- ಸಂಸದ ರಮೇಶ ಜಿಗಜಿಣಗಿ

ಬಸವ ನಾಡು ವಿಜಯಪುರ- ಬಹು ನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ನಿಗದಿಗಿಂತ ಮೊದಲೇ ಪೂರ್ಣವಾಗಲಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ರಮೇಶ ಜಿಗಜಿಣಗಿ ಅವರು ಅಧಿಕಾರಿಗಳ ಜೊತೆ ಭೇಟಿ ನೀಡಿದರು. ಕಾಮಗಾರಿ ಪರಿಶೀಲನೆ ನಡೆಸಿದರು. ಈ ಕಾಮಗಾರಿಗೆ ನೀಡಲಾಗಿರುವ ಹಣ ಮತ್ತು ನಿಗದಿತ ಸ್ಥಳದ ಬಗ್ಗೆ ಕೆಲವು ಜನಪ್ರತಿನಿಧಿಗಳು ಅಪಸ್ವರ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದೆಯೇ ಈ ಕುರಿತು […]

ಸಿದ್ಧಸಿರಿ ಸೌಹಾರ್ದ ಸಹಕಾರಿ ವತಿಯಿಂದ ನಿರ್ಮಿಸಿದ ಶೀಥಲೀಕರಣ ಘಟಕ ಉದ್ಘಾಟಿಸಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಬಸವ ನಾಡು ವಿಜಯಪುರ- ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿವಾಸದ ಬಳಿ ಸಿದ್ಧಸಿರಿ ಸೌಹಾರ್ದ ಸಹಕಾರಿ ವತಿಯಿಂದ ನಿರ್ಮಿಸಲಾಗಿರುವ ಸಿದ್ಧಸಿರಿ ಒಣದ್ರಾಕ್ಷಿ ಸಂಸ್ಕರಣಾ ಘಟಕ, ಸಿದ್ದಸಿರಿ ಶೀತಲ ಘಟಕವನ್ನು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಉದ್ಗಾಟಿಸಿದರು.ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಲ ಅವರ ತೋಟದ ಮನೆ ಬಳಿ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ.ಈ ಸಂದರ್ಭದಲ್ಲಿ ಆಲಮಟ್ಟಿ ಅನ್ನದಾನೇಶ್ವರಿ ಪುರವರ ಹಿರೇಮಠದ ಶ್ರೀ ಡಾ. ರುದ್ರಮುನಿ ಶಿವಾಚಾರ್ಯರು, ಗುಜರಾತಿನ ಅಹ್ಮದಾಬಾದ […]

ಲಾಕಡೌನ್ ನಿಂದ ಬಡವರು ಸಂಕಷ್ಟಕ್ಕೆ ಸಿಲುಕುತ್ತಾರೆ- ಲಾಕಡೌನ್ ಬೇಡ ಎಂದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ- ಕೊರೊನಾ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ಒಂದು ವೇಳೆ ಲಾಕಡೌನ್ ಮಾಡಿದರೆ ಬಡವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಹಿನ್ನೆಲೆಯಲೆಯಲ್ಲಿ ಲಾಕಡೌನ್ ಬದಲು ಪರ್ಯಾಯ ಮಾರ್ಗಗಳತ್ತ ಚಿಂತನೆ ನಡೆಸಬೇಕು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.ವಿಜಯಪುರ ಜಿಲ್ಲೆಯ ಬುರಣಾಪುರದಲ್ಲಿ ಮಾತನಾಡಿದ ಅವರು, ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೊರೊನಾ 2ನೇ ಅಲೆ ನಿಯಂತ್ರಿಸಲು ಲಾಕಡೌನ್ ಬಗ್ಗೆ ಚಿಂತನೆ ನಡೆಸಿದೆ. ಆದರೆ, ಲಾಕಡೌನ್ ಮಾಡಿದರೆ ಸಾಲಸೋಲ […]