ವಿಜಯಪುರ- ಕೊರೊನಾ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ಒಂದು ವೇಳೆ ಲಾಕಡೌನ್ ಮಾಡಿದರೆ ಬಡವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಹಿನ್ನೆಲೆಯಲೆಯಲ್ಲಿ ಲಾಕಡೌನ್ ಬದಲು ಪರ್ಯಾಯ ಮಾರ್ಗಗಳತ್ತ ಚಿಂತನೆ ನಡೆಸಬೇಕು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಬುರಣಾಪುರದಲ್ಲಿ ಮಾತನಾಡಿದ ಅವರು, ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೊರೊನಾ 2ನೇ ಅಲೆ ನಿಯಂತ್ರಿಸಲು ಲಾಕಡೌನ್ ಬಗ್ಗೆ ಚಿಂತನೆ ನಡೆಸಿದೆ. ಆದರೆ, ಲಾಕಡೌನ್ ಮಾಡಿದರೆ ಸಾಲಸೋಲ ಮಾಡಿ ವ್ಯಾಪಾರ ಮಾಡುತ್ತಿರುವ ಬಡವರಿಗೆ ತೀವ್ರ ತೊಂದರೆಯಾಗಲಿದೆ ಎಂದು ಆತಂಕ ತಿಳಿಸಿದರು.
ಕೊರೊನಾ ನಿಯಂತ್ರಿಸಲು ಲಾಕಡೌನ್ ಹೊರತಾದ ಹೊರತಾದ ಕ್ರಮಗಳನ್ನು ಕೈಗೊಳ್ಳುವ ಕುರಿತು ರಾಜ್ಯ ಸರಕಾರ ಚಿಂತನೆ ನಡೆಸಬೇಕು. ಲಾಕ್‌ಡೌನ್ ಮಾಡಿದರೆ ಪ್ರಯೋಜನವಿಲ್ಲ. ಲಾಕ್‌ಡೌನ್ ಮಾಡಿದರೆ ಪ್ರಯೋಜನ ಆಗುತ್ತೆ ಎಂದು ಅನಿಸುವುದಿಲ್ಲ ಎಂದು ಅವರು ಹೇಳಿದರು.
ಈಗ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಮಾಡಿದ್ದಾರೆ, ಆದರೆ, ಅಲ್ಲಿ ಏನೂ ಬಂದ್ ಆಗಿಲ್ಲ. ಎಂದಿನಂತೆ ಜನಜೀವನ ಸಾಗಿದೆ. ಕೇವಲ ಮುಂದಿನ ಬಾಗಿಲಿಗೆ ಕೀಲಿ ಹಾಕಿ ಉಳಿದ ಮೂರೂ ಗೋಡೆಗಳೇ ಇಲ್ಲ ಎಂದು ಅವರು ಮಹಾರಾಷ್ಟ್ರದಲ್ಲಿ ಲಾಕಡೌನ್ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಬಿಚ್ಚಿಟ್ಟರು. ಲಾಕ್‌ಡೌನ್ ನಿಂದ ಪ್ರಯೋಜನವೇ ಇಲ್ಲ. ಲಾಕ್‌ಡೌನ್ ಮಾಡಿದರೆ ಬಡ ಜನರೆಲ್ಲ ಏನು ಮಾಡಬೇಕು ಎಂದು ಪ್ರಶ್ನಿಸಿದ ರಮೇಶ ಜಿಗಜಿಣಗಿ, ಲಾಕಡೌನ್ ಬದಲು ಪರ್ಯಾಯ ಯೋಜನೆಗಳ ಬಗ್ಗೆ ಚಿಂತನೆ ನಡೆಸಬೇಕು ಎಂದು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಬಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರು, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಿ. ಬಿ. ಪಾಟೀಲ, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಆರ್. ಕೆ. ಮುಜುಮದಾರ, ವಿಮಾನ ನಿಲ್ದಾಣ ಯೋಜನೆಯ ಅಡೆಕ್ ಟೀಮ್ ಲೀಡರ್ ಟೀಮ್ ಲೀಡರ್ ಐಡೆಕ್ ಪ್ರಕಾಶ, ಗುತ್ತಿಗೆದಾರ ಎಸ್. ಎಸ್. ಆಲೂರ, ಬಿಜೆಪಿ ಮುಖಂಡರಾದ ಚಿದಾನಂದ ಚಲವಾದಿ, ವಿಜಯ ಜೋಶಿ, ರಾಜು ಪಾಟೀಲ ಮುಂತಾದವರು ಉಪಸ್ಥಿತರಿದ್ದರು.