ಸಿದ್ಧಸಿರಿ ಸೌಹಾರ್ದ ಸಹಕಾರಿ ವತಿಯಿಂದ ನಿರ್ಮಿಸಿದ ಶೀಥಲೀಕರಣ ಘಟಕ ಉದ್ಘಾಟಿಸಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಬಸವ ನಾಡು

ವಿಜಯಪುರ- ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿವಾಸದ ಬಳಿ ಸಿದ್ಧಸಿರಿ ಸೌಹಾರ್ದ ಸಹಕಾರಿ ವತಿಯಿಂದ ನಿರ್ಮಿಸಲಾಗಿರುವ ಸಿದ್ಧಸಿರಿ ಒಣದ್ರಾಕ್ಷಿ ಸಂಸ್ಕರಣಾ ಘಟಕ, ಸಿದ್ದಸಿರಿ ಶೀತಲ ಘಟಕವನ್ನು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಉದ್ಗಾಟಿಸಿದರು.
ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಲ ಅವರ ತೋಟದ ಮನೆ ಬಳಿ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ.
ಈ ಸಂದರ್ಭದಲ್ಲಿ ಆಲಮಟ್ಟಿ ಅನ್ನದಾನೇಶ್ವರಿ ಪುರವರ ಹಿರೇಮಠದ ಶ್ರೀ ಡಾ. ರುದ್ರಮುನಿ ಶಿವಾಚಾರ್ಯರು, ಗುಜರಾತಿನ ಅಹ್ಮದಾಬಾದ ಬನ್ಸಿ ಘೀರ ಗೋಶಾಲೆಯ ಗೋಪಾಲಬಾಯಿ ಸುತಾರಿಯಾ, ಗೋ ಕೃಷ್ಣಾಮೃತ ಜಲ ವಿತರಣೆ ಅಭಿಯಾನದ ಮುಖ್ಯ ಕಾರ್ಯಕರ್ತ ರಾಜೇಶ್ವರ ರಾವ, ಸಿದ್ಧಸಿರಿ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ್, ಶಿವಾನಂದ ಅಣ್ಣೆಪ್ಪನವರ, ಸಾಯಿಬಾಬಾ ಸಿಂಧಗೇರಿ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ರಮೇಶ ಬಿರಾದಾರ, ವಿಜಯಕುಮಾರ ಚವ್ಹಾಣ, ಆಶೋಕಗೌಡ ತೊರವಿ, ಶೈಲಜಾ ಪಾಟೀಲ ಯತ್ನಾಳ, ಸೀಮಾ ಕೋರೆ, ರಾಮನಗೌಡ ಪಾಟೀಲ ಯತ್ನಾಳ, ಸೋಮಶೇಖರ ಬಂಡಿ, ಬಿ. ಎಸ್. ಪಾಟೀಲ (ನಾಗರಾಳ ಹುಲಿ), ಗಣಪತಿ ಜಾಧವ, ವ್ಯವಸ್ಥಾಪಕ ನಿರ್ದೇಶಕ ಜ್ಯೋತಿಬಾ ಖಂಡಾಗಳೆ, ಸಹಕಾರಿಯ ಹಿರಿಯ ಅಧಿಕಾರಿಗಳು ಸೇರಿದಂತೆ ದ್ರಾಕ್ಷಿ ಬೆಳೆಗಾರರು, ನಾನಾ ರೈತರು, ವ್ಯಾಪಾರಸ್ಥರು, ಉದ್ಯಮೆದಾರರು, ನಾನಾ ಸಂಘ-ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌