ಬಸವ ನಾಡು
ವಿಜಯಪುರ- ನಾಗಠಾಣ ಮತ್ತು ಮಿಂಚನಾಳ ಮಧ್ಯೆ ನಿರ್ಮಿಸಲಾಗುತ್ತಿರುವ 6 ಕಿ. ಮಿ. ರಸ್ತೆ, ಮತ್ತು 2 ಸೇತುವೆ ಕಾಮಗಾರಿಗಳನ್ನು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಪರಿಶೀಲನೆ ನಡೆಸಿದರು.
ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಬಳಿಕ ಮಾತನಾಡಿ, ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ರಸ್ತೆ ಕಾಮಗಾರಿ ಈಗ ಪೂರ್ಣಗೊಂಡಿದೆ. ಒಂದು ಸೇತುವೆ ಕಾಮಗಾರಿ ಮುಗಿಯುವ ಹಂತದಲ್ಲಿದೆ. ನಾಗಠಾಣ ಬಳಿಯ ಸೇತುವೆ ಕಾಮಗಾರಿ ನಡೆಯುತ್ತದೆ ಎಂದು ತಿಳಿಸಿದರು.
ಒಟ್ಟು ರೂ. 9 ಕೋ. ವೆಚ್ಚದಲ್ಲಿ ಮಿಂಚನಾಳ, ನಾಗಠಾಣ, ಅಲಿಯಾಬಾದ್ ಹಾಗೂ ದ್ಯಾಬೇರಿ ಭಾಗದ ಮುಖ್ಯ ರಸ್ತೆ ಪೂರ್ಣಗೊಂಡಿದೆ. ಇದರಿಂದ ಮಿಂಚನಾಳ, ನಾಗಠಾಣ, ಅಲಿಯಾಬಾದ್ ಹಾಗೂ ದ್ಯಾಬೇರಿ ಭಾಗದ ಸಾರ್ವಜನಿಕರಿಗೆ ಈ ರಸ್ತೆ ಮತ್ತು ಸೇತುವೆಗಳಿಂದ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯ ಮತ್ತು ಎರಡು ಸೇತುವೆಗಳ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಸಂಸದ ರಮೇಶ ಜಿಗಜಿಣಗಿ ಖಡಕ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಿ. ಬಿ. ಪಾಟೀಲ, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜು ಮಜುಂದಾರ, ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ನವೀನ ಅರಕೇರಿ ಸೇರಿದಂತೆ ನಾನಾ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.