ಬಸವ ನಾಡು
ವಿಜಯಪುರ- ಕೊರೊನಾ 2ನೇ ಅಲೆ ಜೋರಾಗಿದ್ದು ಗುಮ್ಮಟ ನಗರಿ ವಿಜಯಪುರದಲ್ಲಿಯೂ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಈ ಮುಂಚೆ ಪ್ರತಿದಿನ ಎರಡಂಕಿಯೊಳಗೆ ಇರುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಈಗ ಶತಕದ ಗಡಿ ದಾಟುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಜನಜಾಗೃತಿ ಮೂಡಿಸಲು ವಿಜಯಪುರದಲ್ಲಿ ಖಾಕಿ ಪಡೆ ಮುಂದಾಗಿದೆ.
ವಿಜಯಪುರ ಪೊಲೀಸರು ಎಸ್ಪಿ ಅನುಪಮ ಅಗ್ರವಾಲ ನೇತೃತ್ವದಲ್ಲಿ ವಿಜಯಪುರ ಗುಮ್ಮಟ ನಗರಿ ವಿಜಯಪುರದಲ್ಲಿ ಕೊರೊನಾ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದ ಅಂಗವಾಗಿ ಖುದ್ದು ರಸ್ತೆಗಿಳಿದ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ವಿಜಯಪುರ ನಗರದ ಗಾಂಧಿಚೌಕಿನಲ್ಲಿ ತಿರುಗಾಡಿ ಜನರಿಗೆ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದರು.
ವಿಜಯಪುರ ನಗರದ ನಾನಾ ಮಾರುಕಟ್ಟೆ ಪ್ರದೇಶಗಳಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಸಂಚಿರಿಸಿದ ಅನುಪಮ ಅಗ್ರವಾಲ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ನಾನಾ ನಾನಾ ಮಾರುಕಟ್ಟೆಗಳಲ್ಲಿ ಅನವಷ್ಯಕವಾಗಿ ತಿರುಗಾಡುತ್ತಿದ್ದ ಮತ್ತು ಮಾಸ್ಕ್ ಧರಿಸದೇ ಓಡಾಡುತ್ತಿರುವವರನ್ನು ದಂಡ ವಿಧಿಸಿದರು. ಕೆಲವರಿಗೆ ಮಾಸ್ಕ ಕೂಡ ವಿತರಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಸೂಚನೆ ಸೂಚನೆ ನೀಡಿದರು.
ಕೆಲವರಿಗೆ ಚೆನ್ನಾಗಿಯೇ ತಿಳಿ ಹೇಳಿದ ಅವರು, ಬುದ್ದಿವಾದವನ್ನೂ ಹೇಳಿದರು. ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಎಸ್ಪಿ ಅನುಪಮ ಅಗರವಾಲ ಖಡಕ್ ವಾರ್ನಿಂಗ್ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಡಿವೈಎಸ್ಪಿ ಲಕ್ಷ್ಮಿನಾರಾಯಣ, ಗಾಂಧಿಚೌಕ್ ಸಿಪಿಐ ರವೀಂದ್ರ ನಾಯ್ಕೋಡಿ ಸೇರಿದಂತೆ ನಾನಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.