ಬಸವ ನಾಡು
ವಿಜಯಪುರ- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಿಜೆಪಿ ಶಾಸಕ ಮತ್ತು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಹಾಗೂ ಅವರ ತಂದೆ ಇಬ್ಬರಿಗೂ ಕೊರೊನಾ ಸೋಂಕು ದೃಡಪಟ್ಟಿದೆ.
ಸಧ್ಯ ಇಬ್ಬರನ್ನೂ ವಿಜಯಪುರದ ಸರಕಾರಿ ಕೋವಿಡ್ ಆಸ್ಪತ್ರೆಗೆ ಮುಂದಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ತಮ್ಮ ಸಂಪರ್ಕದಲ್ಲಿ ಬಂದವರು ಮುನ್ನೆಚ್ಚರಿಕೆಯಾಗಿ ಕೊರೊನಾ ತಪಾಸಣೆ ಮಾಡಿಸಿಕೊಳ್ಳಬೇಕು, ಸ್ವಯಂ ಹೋಂ ಕ್ವಾರೆಂಟೈನಗೆ ಒಳಗಾಗಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.