ಕಬಿನಿ, ದಾಂಡೇಲಿ ಕಾಡಲ್ಲಿ ವರುಷಗಳ ಕಾಲ ಹುಡುಕಿದರೂ ಸಿಗದ ಹಕ್ಕಿ ಬಸವ ನಾಡಿನ ಮನೆಯ ಹಿಂಭಾಗದಲ್ಲಿ ಸೆರೆ ಹಿಡಿದ ಧ್ರುವ ಪಾಟೀಲ

ಬಸವ ನಾಡು

ವಿಜಯಪುರ- ಬಸವ ನಾಡಿನ ಯುವಕ ಮತ್ತು ವನ್ಯಜೀವಿ ಛಾಯಾಗ್ರಾಹಕ ಧ್ರುವ ಪಾಟೀಲ ಆ ಒಂದು ಹಕ್ಕಿಗಾಗಿ ವರುಷಗಟ್ಟಲೇ ಕಬಿನಿ ಮತ್ತು ದಾಂಡೇಲಿ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಫಲ ಸಿಕ್ಕಿರಲಿಲ್ಲ. ಆದರೆ, ಈಗ ಅದೇ ಆ ಒಂದು ಹಕ್ಕಿಯನ್ನು ತಮ್ಮ ಮನೆಯ ಉದ್ಯಾನದಲ್ಲಿ ಕಾಣುವ ಮೂಲಕ ಫುಲ್ ಖುಷ್ ಆಗಿ ಅದರ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.


ವಿಶ್ವದ ಬಲು ಅಪರೂಪದ ಮತ್ತು ಅಷ್ಟೇ ಸುಂದರವಾಗಿರುವ ಬಾನಾಡಿ ಪ್ಯಾರಾಡೈಸ್ ಫ್ಲೈಕ್ಯಾಚರ್ ಗಂಡು ಹಕ್ಕಿಯನ್ನು ಸೆರೆಯ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತು ಫೋಟೋಗಳನ್ನು ತಮ್ಮ ಇನಸ್ತಾಗ್ರಾಂ ನಲ್ಲಿ ಶೇರ್ ಮಾಡಿರುವ ಅವರು, ಪ್ರಕೃತಿಯಲ್ಲಿ ಸುಂದರವಾಗಿರುವ ಇಂಥ ಪಕ್ಷಿಯನ್ನು ವಿಜಯಪುರದಲ್ಲಿ ಕಾಣಬೇಕೆಂದರೆ ಅದೊಂದು ಅದೃಷ್ಠವೇ ಸರಿ ಎಂದು ತಿಳಿಸಿದ್ದಾರೆ. ಬಿರು ಬೇಸಿಗೆಗೆ ಹೆಸರಾಗಿರುವ ವಿಜಯಪುರ ಜಿಲ್ಲೆಯಲ್ಲಿ ಅದೂ ಕೂಡ ಮಟಮಟ ಮಧ್ಯಾಹ್ನ ಈ ಹಕ್ಕಿ ತಮ್ಮ ಮನೆಯ ಉದ್ಯಾನ ವನದಲ್ಲಿ ಕ್ಯಾಮೆರಾಗೆ ಸೆರೆ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.


ಬಿಳಿ ಬಣ್ಣದ ಮಾರ್ಫ್ ಪ್ಯಾರಾಡೈಸ್ ಫ್ಲೈಕ್ಯಾಚರ್ ನ್ನು ಸೆರೆ ಹಿಡಿದಿದ್ದೇನೆ. ತಾವು 10 ವರ್ಷದವರಿದ್ದಾಗ ಬರ್ಡ್ಸ್ ಆಫ್ ಇಂಡಿಯಾ ಬುಕ್ ಓದಿದ ಬಳಿಕ ಈ ಪಕ್ಷಿ ನನ್ನ ಫೆವರೀಟ್ ಆಗಿದೆ. ಈ ಹಕ್ಕಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಕಬಿನಿ ಮತ್ತು ದಾಂಡೇಲಿ ಅರಣ್ಯ ಪ್ರದೇಶದಲ್ಲಿ ವರುಷಗಳ ಕಾಲ ಕಾಯ್ದಿದ್ದೇನೆ. ಆದರೆ, ಮನೆಯ ಹಿತ್ತಲಲ್ಲಿ ಪಕ್ಷಿ ಸಿಕಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಅದರ ಭಾವಚಿತ್ರಗಳನ್ನು ತಮ್ಮ ಇನಸ್ತಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದ ಹಾಕೆ, ಧ್ರುವ ಪಾಟೀಲ ಮಾಜಿ ಸಚಿವ ಮತ್ತು ಹಾಲಿ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರ ಕಿರಿಯ ಪುತ್ರರಾಗಿದ್ದು, ಪರಿಸರ ಮತ್ತು ವನ್ಯ ಜೀವಿಗಳೊಂದಿಗೆ ಹೆಚ್ಚಿನ ಒಡನಾಡ ಹೊಂದಿದ್ದಾರೆ.

Leave a Reply

ಹೊಸ ಪೋಸ್ಟ್‌