ಬಸವ ನಾಡು
ವಿಜಯಪುರ- ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಲಾಕಡೌನ್ ಘೋಷಣೆ ಮಾಡಿದ್ದು, ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಕೂಡ ಆದೇಶ ಹೊರಡಿಸಿದ್ದಾರೆ.
ಸಧ್ಯಕ್ಕೆ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣಿ, ನೂಕುನುಗ್ಗಲು ತಪ್ಪಿಸಲು ಮೇ 2 ರಿಂದಲೇ ಅನ್ವಯವಾಗುವಂತೆ ಎಲ್ಲ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ. ಇದರ ಬದಲಿಗೆ ಪ್ರತಿದಿನ ಬೆ. 6 ರಿಂದ ಸಂ. 6.00 ಗಂಟೆಯವರೆಗೆ ಹಾಪಕಾಮ್ಸ್, ಎಲ್ಲಾ ಹಾಲಿನ ಭೂತಗಳು, ತಳ್ಳುವ ಗಾಡಿ ಮೂಲಕ ಹಣ್ಣು, ತರಕಾರಿಗಳನ್ನು ಮಾರುಕಟ್ಟೆಯ ಬೆಲೆಗನುಗುಣವಾಗಿ ಮಾರಾಟ ಮಾಡಲು ಸೂಚನೆ ನೀಡಿದ್ದಾರೆ. ಅಲ್ಲದೇ, ಕೊರೊನಾ ನಿಯಮಗಳನ್ನು ಪಾಲಿಸುವುದರ ಜೊತೆಗೆ, ಎಪಿಎಂಸಿ ಮತ್ತು ದಿನಸಿ ಅಂಗಡಿಗಳನ್ನು ಪ್ರತಿದಿನ ಬೆ. 6 ಮ. 12ರ ವರೆಗೆ ಮಾತ್ರ ತೆರೆಯಲು ಅವಕಾಶ ನೀಡಿದ್ದಾದರೆ.
ಈ ಆದೇಶವನ್ನು ಸರಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳಪೆ ಗುಣಮಟ್ಟದ ವಸ್ತು ಮಾರಾಟಗಾರರ ವಿರುದ್ಧ ಕ್ರಮ
ಈ ಮಧ್ಯೆ ಜನತಾ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಪ್ರತಿದಿನ ಬೆ. 6 ಗಂಟೆಯಿಂದ ಬೆ. 10 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ವಸ್ತು ಮಾರಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಎಲ್ಲಾ ಅಗತ್ಯ ವಸ್ತುಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ನಿಗದಿತ ಬೆಲೆಯಲ್ಲಿ ಮತ್ತು ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡಬೇಕು. ಕೃತಕ ಅಭಾವ ಸೃಷ್ಟಿಸಿ ಬೆಲೆಯಲ್ಲಿ ಹೆಚ್ಚಳ ಮಾಡುವುದು ಮತ್ತು ಕಳಪೆ ಮಟ್ಟದ ವಸ್ತುಗಳನ್ನು ವಿತರಣೆ ಮಾಡಿದ್ದಲ್ಲಿ ಕರ್ನಾಟಕ ಅಗತ್ಯ ವಸ್ತುಗಳ(ಲೆಕ್ಕಪತ್ರ ನಿರ್ವಹಣೆ ಹಾಗೂ ದರ ಪ್ರದರ್ಶನ) ಆದೇಶ 1981 ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆದೇಶ 2006 ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪಿ. ಸುನೀಲ ಕುಮಾರ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಯಲ್ಲಿ ನಾನಾ ವಸ್ತುಗಳನ್ನು ಮಾರಾಟ ಮಾಡಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಛೇರಿಯ ದೂರವಾಣಿ ಸಂಖ್ಯೆ 9380443752 ಈ ಸಂಖ್ಯೆಗೆ ಕಚೇರಿ ಸಮಯದಲ್ಲಿ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ದರ ನಿಗದಿ
ಈ ಮಧ್ಯೆ, ಮೇ 12ರ ವರೆಗೆ ರಾಜ್ಯ ಸರಕಾರ ಜನತಾ ಕರ್ಫ್ಯೂ ಪೋಷಿಸಿದ್ದು, ವಿಜಯಪುರ ಜಿಲ್ಲೆಯಲ್ಲಿಯೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುಗಿರುತ್ತದೆ. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಕೆಲವು ಜನ ಕಿರಾಣಿ ವರ್ತಕರು ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಿನ ದರವನ್ನು ಪಡೆದಿದ್ದಾರೆಂದು ದೂರುಗಳು ಬರುತ್ತಿವೆ. ಆದ್ದರಿಂದ ಅಗತ್ಯ ವಸ್ತುಗಳಿಗೆ ಪ್ರತಿ ಕೆಜಿಗೆ ದರ ನಿಗದಿ ಪಡಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಪ್ರತಿ ಕೆಜಿ ದರ ಪಟ್ಟಿ ಇಂತಿದೆ.
ಸಕ್ಕರೆ- ರೂ. 35.
ಮೈದಾ- ರೂ. 28
ಬಾಂಬೆ ರವಾ- ರೂ. 30
ಕೆಸರಿ ರವಾ- ರೂ. 40
ತೊಗರಿ ಬೇಳೆ(ಮೀಡಿಯಂ)- ರೂ. 95
ತೊಗರಿ ಬೇಳೆ(ಪಟಾಕ)- ರೂ. 103
ಕಡ್ಲೆ ಬೇಳೆ- ರೂ. 70
ಗೋಧಿ ಹಿಟ್ಟು- ರೂ. 28
ಇಡ್ಲಿ ರವೆ- ರೂ. 35
ಉದ್ದಿನ ಬೇಳೆ- ರೂ. 110
ಅವಲಕ್ಕಿ(ಮೀಡಿಯಂ)- ರೂ. 35
ಅವಲಕ್ಕಿ(ಉತ್ತಮ)- ರೂ. 40
ಹೆಸರು ಬೇಳೆ- ರೂ. 100
ಬೆಲ್ಲ- ರೂ. 40
ಶೇಂಗಾ(ಹಸಿ)- ರೂ. 95
ಶೇಂಗಾ-(ಹುರಿದಿದ್ದು)- ರೂ. 120
ಪುಟಾಣಿ- ರೂ. 85
ನಿಗದಿ ಪಡಿಸಿ ವಿಜಯಪುರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಅದೇ ರೀತಿ,
ಕೊಬ್ಬರಿ- ರೂ. 200
ಬೆಳ್ಳುಳ್ಳಿ- ರೂ. 60
ಬಿಳಿಜೋಳ- ರೂ. 38
ಗೋಧಿ- ರೂ. 35
ಅಲಸಂದಿ- ರೂ. 80
ಹುಣಸೆ ಹಣ್ಣು- ರೂ. 90
ಪಾಮ್ ಆಯಿಲ್- ರೂ. 135
ಸೂರ್ಯಪಾನ ಆಯಿಲ್- ರೂ. 175
ಅಕ್ಕಿ(ಸೋನಾ)- ರೂ. 40
ಅಕ್ಕಿ(ಜೀರಾ)- ರೂ. 50
ಅಕ್ಕಿ(ಕೋಲಂ)- ರೂ. 58
ಇನ್ನಿತರ ವಸ್ತುಗಳ ಪ್ಯಾಕ್ ಮಾಡಿ ಎಂ ಆರ್ ಪಿ ದರದಲ್ಲಿ ಲಭ್ಯವಿರುತ್ತದೆ. ಮೇಲೆ ತಿಳಿಸಿದ ದರಕ್ಕಿಂತ ಯಾರಾದರೂ ಚಿಲ್ಲರೆ ವರ್ತಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದಲ್ಲಿ ಗ್ರಾಹಕರು ಜಿಲ್ಲಾಧಿಕಾರಿಗಳ ಕಚೇರಿಯ ಆಹಾರ ಶಾಖೆಯ ದೂರವಾಣಿ ಸಂಖ್ಯೆ 9380443752 ಗೆ ಕಚೇರಿ ಸಮಯದಲ್ಲಿ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.