ನ್ಯೂ ವಿಸ್ತಾ ಯೋಜನೆ ಹಣವನ್ನು ಕೊರೊನಾ ನಿಯಂತ್ರಣಕ್ಕೆ ಬಳಸಿ- ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ, ಕೇಂದ್ರ ಸರಕಾರಗಳು ವಿಫಲ- ಎಂ. ಬಿ. ಪಾಟೀಲ

ಬಸವ ನಾಡು

ವಿಜಯಪುರ- ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೊರೊನಾ ಎರನಡೇ ಅಲೆಯನ್ನು ತಡೆಗಟ್ಟುವಲ್ಲಿ ವಿಫಲವಾಗಿವೆ ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಬಿ ಎಲ್ ಡಿ ಇ ವಿವಿಯಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ಪಾಲಿನ ರೆಮಿಡಿಸಿವರ್ ಔಷಧಿ ನಮಗೆ ಹಂಚಿಕೆಯಾಗಿಲ್ಲ. ಆಕ್ಸಿಜನ್ ವಿಷಯದಲ್ಲಿಯೂ ಹಾಗೇ ಆಗಿದೆ. ಆದರೆ, ಸುಪ್ರೀಂ ಕೋರ್ಟ್ ಉಪಕಾರದಿಂದ ನಮಗೆ ಆಕ್ಸಿಜನ್ ಸಿಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಶ್ಲಾಘಿಸಿದರು.
ಇದೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದವೂ ವಾಗ್ದಾಳಿ ನಡೆಸಿದ ಎಂ. ಬಿ. ಪಾಟೀಲ, ಪ್ರಧಾನಿ ಮೋದಿಯವರು ಈ ಹಿಂದೆ ಆಡಳಿತ ನಡೆಸಿದ್ದ ರಾಜವಂಶಸ್ಥರ ಮಹಾರಾಜರು ಈ ರೀತಿ ಮಾಡಿಲ್ಲ, ಆದಕೆ. ನಮ್ಮ ವಿಶ್ವಗುರು ದೊಡ್ಡ ಮಹಾರಾಜರು ಎಂದು ವ್ಯಂಗವಾಡಿದರು. ಹೊಸ ಸಂಸತ್ತು ನಿರ್ಮಾಣ ಯೋಜನೆ ನ್ಯೂ ವಿಸ್ತಾ ಯೋಜನೆಯನ್ನು ನಿಲ್ಲಿಸಬೇಕು. ಅದಕ್ಕೆ ನಿಗದಿಯಾಗಿರುವ ರೂ. 20 ಸಾವಿರ ಕೋ. ಹಣದಲ್ಲಿ 62 ಕೋಟಿ ಜನರಿಗೆ ಕೊರೊನಾ ವ್ಯಾಕ್ಸೀನ್ ಹಾಕಬಹುದು. 2 ಲಕ್ಷಕ್ಕೂ ಹೆಚ್ಚು ವೆಂಟಿಲೇಟರ್. ಬೆಡ್ ನಿರ್ಮಾಣಕ್ಕೆ ಬಳಸಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದಾಗ ರೂ. 20 ಸಾವಿರ ಕೋ. ವೆಚ್ಚದ ವಿಸ್ತಾ ಯೋಜನೆಯನ್ನು ನಿಲ್ಲಿಸುತ್ತಾರೆ. ಪ್ರಧಾನಿ ಮೋದಿಯವರಿಗೆ ಜನ ಬೇಕೋ? ಅಥವಾ ನ್ಯೂ ವಿಸ್ತಾ ಬೇಕೊ? ಎಂದು ಅವರು ಪ್ರಶ್ನಿಸಿದರು.


ಕೇಂದ್ರ ಟಾಸ್ಕ್ ಫೋಸ್ ಸಭೆ ನಡೆಸಿಲ್ಲ. ಕೊರೊನಾ ಎದುರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ಈಗ ಲಕ್ಷಾಂತರ ಸಾವಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದ ಅವರು, ಪ್ರತಿಯೊಂದು ತಾಲೂಕಿನಲ್ಲಿ ಕೊರೊನಾ ಲಸಿಕೆಯನ್ನು ಸರಿಯಾಗಿ ಹಾಕಬೇಕು. ಅಲ್ಲದೇ, ಭವಿಷ್ಯದಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಆಕ್ಸಿಜನ್ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಎಂ. ಬಿ. ಪಾಟೀಲ ತಿಳಿಸಿದರು.
ರಾಜ್ಯದಲ್ಲಿ ಲಿಕ್ವಿಡ್ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ. ರಾಜ್ಯ ಸರಕಾರ ಕೇವಲ ಭವಿಷ್ಯದ ಬಗ್ಗೆ ಮಾತನಾಡುತ್ತಿದೆ. ಕೊರೊನಾ ಮೂರನೆಯ ಅಲೆ ಕುರಿತು ಮಾತನಾಡುತ್ತಿದೆ, ಆದರೆ, ಎರಡನೆ ಅಲೆ ತಡೆಯಲು ಆಗುತ್ತಿಲ್ಲ. ಸರಕಾರ ಮತ್ತು ಸಚಿವರು ಕೇವಲ ಸುಳ್ಳು ಭರವಸೆ ನೀಡುತ್ತಿದ್ದಾರೆ, ಅಲ್ಲದೆ ಭರವಸೆ ನೀಡುವದರಲ್ಲಿಯೇ ಕಾಲ ಹರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ದವೂ ಆಕ್ರೋಶ ಹೊರ ಹಾಕಿದ ಅವರು, ಉಸ್ತುವಾರಿ ಸಚಿವೆ ಹೆಣ್ಣು ಮಗಳಿದ್ದಾಳೆ ಎನು ಹೇಳೊದು? ಯಕ್ಸಂಬಾದಿಂದ ಬಂದು ಹೋದರೆ ಸಮಸ್ಯೆ ಬಗೆಹರಿಯಲ್ಲ, ವಿಜಯಪುರ ಜಿಲ್ಲೆಯಲ್ಲಿಯೇ ಕೊರೊನಾದಿಂದ ಸಾವಿಗೀಡಾಗಿರುವವರ ಪ್ರಮಾಣ ಕಡಿಮೆ ಇದೆ ಎಂದು ಹೇಳುತ್ತಿದ್ದಾರೆ. ಸಾವಿರ ಪಟ್ಟು ಡೆತ್ ರೆಟ್ ಕಡಿಮೆ ತೊರಿಸುತ್ತಿದ್ದಾರೆ. ಸಾವಿನ ಸತ್ಯ ಸಂಖ್ಯೆ ಹೇಳಿದ್ರೆ ಸರಕಾರಕ್ಕೆ ಸಾವಿನ ಕೆಟ್ಟ ಹೆಸರು ಬರದಿರುವಂತೆ ಮಾಡುತ್ತಿದ್ದಾರೆ ಎಂದು ಎಂದು ಎಂ. ಬಿ. ಪಾಟೀಲ ಗಂಭೀರ ಆರೋಪ ಮಾಡಿದರು.

ಲಕ್ಷಾಂತರ ಜನ ತೀರಿ ಹೋಗಿದ್ದಕ್ಕೆ ಬೆಲೆ ಇಲ್ಲವೆ? ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಸಾಯವವರು ಸಾಯುತ್ತಿದ್ದಾರೆ. ಈ ಎಲ್ಲಾ ಸಾವುಗಳು ಸರಕಾರ ಸರಿಯಾದ ಸಮಯಕ್ಕೆ ಔಷಧಿ ಇತರೆ ವ್ಯವಸ್ಥೆ ಮಾಡಿದ್ದರೆ ಆಗುತ್ತಿರಲಿಲ್ಲ. ಲಾಕಡೌನ್ ಹಿನ್ನಲೆಯಲ್ಲಿ ಕೂಲಿ‌ ಕಾರ್ಮಿಕರು ಹಾಗೂ ಕೆಲಸರಿಗೆ ಇಂದಿರಾ ಕ್ಯಾಂಟೀನ್ ಪಾಸರ್ಲಲ್‌ ನೀಡಿದರೂ ಬದುಕುತ್ತಿದ್ದರು. ಅದನ್ನು ಬಂದ್ ಮಾಡಿ ವ್ಯವಸ್ಥೆ ಹದಗೆಡಿಸಿದ್ದಾರೆ. ಅನ್ನಭಾಗ್ಯ ಯೋಜನೆ ತಡೆಯುವ ಹುನ್ನಾರ ನಡೆಸಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೆ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮಾದರಿಯಲ್ಲಿ ರೂ. 10 ಸಾವಿರ ಕೋ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಸರಕಾರಕ್ಕೆ ಕೊರೊನಾ ನಿಯಂತ್ರಣದ ಬಲವಾದ ಇಚ್ಚೆಯಿಲ್ಲ. ಅದಕ್ಕಾಗಿ ಜನ ಸಾಯುತ್ತಿದ್ದಾರೆ, ಕೇಂದ್ರ ಸಚಿವರನ್ನೇ ಕಳೆದುಕೊಂಡಿದ್ದಿವಿ ಎಂದು ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಅವರನ್ನು ನೆನಪಿಸಿಕೊಂಡರು. ನೊಟ್ ಪ್ರಿಂಟ್ ಮಾಡೋ ವಿಚಾರದಲ್ಲಿ ಹೇಳಿಕೆ ನೀಡಿರಲುವ ಸಚಿವ ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಂ. ಬಿ. ಪಾಟೀಲ, ನೋಟ್ ಪ್ರಿಂಟ್‌‌ ಮಷೀನ್‌‌ ಇರಲಿಕ್ಕಿಲ್ಲ. ಆದರೆ, ನೋಟ್ ಎಣಿಸುವ ಮಶೀನ್ ಮಶಿನ್ ಇರಬಹುದು ಎಂದು ವ್ಯಂಗವಾಡಿದರು.
ಈಶ್ವರಪ್ಪ ನಿಮ್ಮ ಮಾತಿಗೆ ಲಗಾಮು ಇಲ್ಲವೇ? ಉಡಾಫೆ ಮಾತನಾಡಿ ಜೀವ ತೆಗೆಯಬೇಡಿ. ಕೊರೊನಾದಂಥ ಸಂಕಷ್ಟಕ್ಕೆ ಆಕ್ಸಿಜನ್, ವೆಂಟಿಲೇಟರ್ ಇಲ್ಲದೇ ಹೊರಾಡಲು ಆಗಲ್ಲ. ರಾಜ್ಯಕ್ಕೆ ಕೋವ್ಯಾಕ್ಸೀನ್ ಹಂಚಿಕೆ ಆಗಿಲ್ಲ. ಕೇಂದ್ರದ ಪಿಎಂ ಕೇರ್ ಸರಿಯಾಗಿ ನಿರ್ವಹಣೆ‌ಯಾಗುತ್ತಿಲ್ಲ. ಮಾರಣ ಹೋಮ‌ ನಡೆದಿದೆ. ಇನ್ನು ಮುಂದಾದರೂ ಇದು ನಿಲ್ಲಲಿ, ನಾನು ಇಲ್ಲಿ ರಾಜಕಾರಣ ಮಾಡುತ್ತಿಲ್ಲ, ಬೇರೆ‌ ರಾಜ್ಯ ನೋಡಿ ಕಲಿಯಿರಿ, ನಿಮ್ಮ ಕೈಯಲ್ಲಿ ಆಗಲಿಲ್ಲ ಎಂದರೆ ಸರಕಾರ ವಿಸರ್ಜಿಸಿ ಎಂದು ಎಂ. ಬಿ. ಪಾಟೀಲ ಹೇಳಿದರು.

ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಮತ್ತೆ ಕೊರೊನಾ ಬೆಡ್ ಗಳ ಸಂಖ್ಯೆ ಹೆಚ್ಚಳ

ಈ ಮಧ್ಯೆ ತಾವೇ ಅಧ್ಯಕ್ಷರಾಗಿರುವ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಮತ್ತೆ 200 ಆಕ್ಸಿಜನ್ನನ್ನು ಬೆಡ್ ಆರಂಭಿಸಲು ಎಂ. ಬಿ. ಪಾಟೀಲ ನಿರ್ಧರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿ ಅವರು, ತಮ್ಮ ಕಾರ್ಯಕ್ಕೆ ಸಹಕರಿಸದ ಸರಕಾರದ ವಿರುದ್ಧ ಹರಿಹಾಯ್ದುರು.
ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಈ ಆಸ್ಪತ್ರೆಯಲ್ಲಿ ಈಗಿರುವ 500 ಬೆಡ್ ಗಳ ಜೊತೆ ಇನ್ನೂ 200 ಆಕ್ಸಿಜನ್ ಬೆಡ್ ಆರಂಭಿಸಲಾಗುವುದು. ಈಗಾಗಲೇ 300 ಆಕ್ಸಿಜನ್ ಬೆಡ್ ಗಳಿವೆ. ಮತ್ತೆ 200 ಹೊಸ ಆಕ್ಸಿಜನ್ ಬೆಡ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. 200 ಬೆಡ್ ನಿರ್ಮಿಸಿದರೆ 10 ಕೆ ಎಲ್ ಡಿ ಆಕ್ಸಿಜನ್ ಬೇಕು. ಸರಕಾರ ನಮ್ಮ ಆಸ್ಪತ್ರೆಗೆ ಬೇಕಾಗುವಷ್ಟು ಆಕ್ಸಿಜನ್ ಕೊಡಲು ಮುಂದೆ ಬರುತ್ತಿಲ್ಲ. ಆದ್ದರಿಂದ ಆಕ್ಸಿಜನ್ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುವದು ಹೇಗೆ? ಎಂದು ಪ್ರಶ್ನಿಸಿದ ಅವರು, ವಿಜಯಪುರ ಜಿಲ್ಲೆಯ ಜನತೆಯ ಉಪಕಾರ ನಮ್ಮ ಕುಟುಂಬದ ಮೇಲಿದೆ. ಅದನ್ನು ತೀರಸಲೇಬೇಕು, ಆದ್ದರಿಂದ 200 ಹೊಸ ಆಕ್ಸಿಜನ್ ಬೆಡ್ ಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಕೊರೊನಾ ರೋಗಿಗಳಿಗಾಗಿ 700 ಬೆಡ್ ನಿರ್ಮಾಣ ಮಾಡಿದ ಆಸ್ಪತ್ರೆ ಎಂದರೆ ಅದು ರಾಜ್ಯದಲ್ಲಿ ಬಿ ಎಲ್ ಡಿ ಈ ಆಸ್ಪತ್ರೆ ಇರಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಮಗೆ ಆಕ್ಸಿಜನ್ ಕೊಟ್ಟರೆ ಮಾತ್ರ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಸಾಧ್ಯ. ಇವತ್ತು ನಮ್ಮ ಆಸ್ಪತ್ರೆ ಗೆ ರೆಮಿಡಿಸಿವರ್ ಎಂಜೆಕ್ಷನ್ ಹಂಚಿಕೆ ಮಾಡಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಹೆರಿಗೆ ಮಾಡಿಸುತ್ತಿಲ್ಲ. ಗರ್ಭಿಣಿಯರಿಗೆ ಬಿ ಎಲ್ ಡಿ ಈ ಆಸ್ಪತ್ರೆಗೆ ಸಾಗ ಹಾಕುತ್ತಿದ್ದಾರೆ, ಸರಕಾರಿ ಆಸ್ಪತ್ರೆಯಲ್ಲಿ ಏಳು ಜನ ಹೆರಿಗೆ ವೈದ್ಯರಿದ್ದಾರೆ. ಆದರೂ ನಮ್ಮ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ, ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂದು ಎಂ. ಬಿ. ಪಾಟೀಲ ಗಂಭೀರ ಆರೋಪ ಮಾಡಿದರು.

Leave a Reply

ಹೊಸ ಪೋಸ್ಟ್‌