ಕೊರೊನಾ ಹೆಮ್ಮಾರಿ ವಿರುದ್ಧ ಗೆದ್ದ ಶತಾಯುಷಿ ಸ್ವಾತಂತ್ರ್ಯ ಯೋಧ
ಬಸವ ನಾಡು ವಿಜಯಪುರ- ಕೊರೊನಾ ಸೋಂಕಿತರಾಗಿದ್ದ ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಗುಣಮುಖರಾಗುವ ಮೂಲಕ ಕೊರೊನಾ ಹೆಮ್ಮಾರಿ ವಿರುದ್ಧ ಗೆಲುವು ಸಾಧಿಸಿದ್ದಾರೆ.ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ದೊರೆಸ್ವಾಮಿ ಕೊರಪನಾ ಸೊಂಕೀತರಿಗೆ ಮಾದರಿಯಾಗಿದ್ದಾರೆ. ಇವರನ್ನು ಕಂಡು ಕೊರೋನಾ ಓಡಿ ಹೋದಂತಾಗಿದೆ. ದೇಶದಲ್ಲಿ ಕೊರೋನಾದಿಂದ ಜನ ಭಯ ಪಡುತ್ತಿರುವ ಈ ಸಮಯದಲ್ಲಿ ಶತಾಯುಷಿ ಎಚ್. ಎಸ್. ದೊರೆಸ್ವಾಮಿ ಕೊರೊನಾ ಸೊಂಕೀತರಿಗೆ ಸ್ಪೂರ್ತಿಯಾಗಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ವಾರಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಗುಣಮುಖರಾಗಿ […]
ವಿಜಯಪುರ ಜಿಲ್ಲಾಸ್ಪತ್ರೆಗೆ ನಾಲ್ಕು ಆಕ್ಸಿಜನ್ ಕಾನ್ಸಂಟ್ರೇಟರ್ ಹಸ್ತಾಂತರಿಸಿದ ಪೊಲೀಸರು
ಬಸವ ನಾಡು ವಿಜಯಪುರ- ರಾಜ್ಯಾದ್ಯಂತ ಕೊರೊನಾ ಎರಡನೇ ಅಲೆ ತೀವ್ರವಾಗಿ ಹೆಚ್ಚುತ್ತಿದ್ದು, ದಿನೇ ದಿನೇ ಕೊರೊನಾ ಸೋಂಕಿತಸ ಸಂಖ್ಯೆಯೂ ಹೆಚ್ಚಾಗುತ್ತಿದೆ.ಈ ಮಧ್ಯೆ ಆಕ್ಸಿಜನ್ ಕೊರತೆಯೂ ಹೆಚ್ಚಾಗಿದ್ದರಿಂದ ಕೊರೊನಾ ಸೋಂಕಿತರಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಸಿಬಿ ಎಡಿಜಿಪಿ ಸೀಮಾಂತ ಕುಮಾರ ಸಿಂಗ್ ಬೆಂಗಳೂರಿನ O2 ಎನ್ ಜಿ ಓ ಜೊತೆ ಸೇರಿ ರಾಜ್ಯದ ನಾನಾ ಜಿಲ್ಲೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ O2 ಸಂಸ್ಥೆ ಸಿ ಎಸ್ ಆರ್ ಯೋಜನೆಯಡಿ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆಯಾಗಿ […]
ವಿಜಯಪುರ ಜಿಲ್ಲೆಯಲ್ಲಿ ಆಕ್ಸಿಜನ್ ನಿರ್ವಹಣೆಗೆ ಆಕ್ಸಿಜನ್ ಕೋಶ ರಚನೆ, ಸಹಾಯವಾಣಿ ಸೌಲಭ್ಯ- ಡಿಸಿ ಪಿ. ಸುನೀಲ ಕುಮಾರ
ಬಸವ ನಾಡು ವಿಜಯಪುರ- ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೈದ್ಯಕೀಯ ಆಮ್ಲಜನಕ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮರ್ಪಕ ಆಕ್ಸಿಜನ್ ಪೂರೈಕೆಗಾಗಿ ವಿಜಯಪುರ ಜಿಲ್ಲಾಡಳಿತ ಆಕ್ಸಿಜನ್ ಕೋಶ ರಚನೆ ಸೇರಿದಂತೆ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ ಈಗ ಎರಡು ಆಮ್ಲಜನಕ ಘಟಕಗಳಿವೆ. ಮೆ. ಕುಲಕರ್ಣಿ ಗ್ಯಾಸಸ ಏಜೆನ್ಸಿ.ಮತ್ತು ಮೆ. ಎನ್. ಆರ್. […]
ಮಳೆಗಾಲದಲ್ಲಿ ಬರುವ ರೋಗಗಳಿಗೆ ಹೋಮಿಯೋಪಥಿ ಚಿಕಿತ್ಸೆ ಬಗ್ಗೆ ವೈದ್ಯರ ಸಲಹೆಗಳು
ಪ್ರೊ. ರವಿ ಎನ್. ಕೋಟೆಣ್ಣವರ,ಖ್ಯಾತ ಹೋಮಿಯೋಪಥಿ ವೈದ್ಯರು ವಿಜಯಪುರ- ಮಳೆ ಬರುವ ಕಾಲಕ್ಕೆ ಒಳಗ್ಯಾಕ ಕುಂತೇವುಇಳೆಯೊಡನೆ ಜಳಕವಾಡೋಣು ನಾವೂನುಮೋಡಗಳ ಆಟ ನೋಡೋಣುಎಂದು ಪ್ರಾಸಬದ್ದವಾಗಿ ಭಾವಪೂರ್ಣ ಸಾಲುಗಳನ್ನು ಬರೆದರು ವರಕವಿ ಬೇಂದ್ರೆ.ನಿಜ, ಮಳೆ ಎಂದರೆ ಹಾಗೇನೆ, ಆಗಸದ ಶೂನ್ಯದಿಂದ ಥಳಥಳಿಸುವ ಮುತ್ತುಗಳಂತೆ ನೆಲಕ್ಕೆ ಬಿದ್ದು ಜೀವಸೃಷ್ಟಿಗೆ ನಾಂದಿ ಹಾಡುವ ಮಳೆಯು ಅದ್ಯಾವುದೋ ಮಾಯದ ಲೋಕದಿಂದ ಬಂದದ್ದೇ ಇರಬಹುದೇನೊ ಎಂಬ ವಿಸ್ಮಯ.ಈ ಮಳೆಯ ಹುಟ್ಟೇ ಒಂದು ಅದ್ಭುತ, ಅಚ್ಚರಿ, ಕೌತುಕ, ಚೋದ್ಯ. ಬಿಸಿ ಬಿಸಿ ಬೇಗೆಯ ದಿನಗಳಲ್ಲಿ, ಮಳೆಯ ಸೂಚನೆಯೂ […]
ಕೊರೊನಾ ರೋಗಿಗಳ ಪ್ರಮಾಣಕ್ಕೆ ಅನುಗುಣವಾಗಿ ಖಾಸಗಿ ಆಸ್ಪತ್ರೆಗಳಿಗೆ ರೆಮಡಿಸಿವಿರ್ ಎಂಜೆಕ್ಷನ್ ಹಂಚಿಕೆ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ
ಬಸವ ನಾಡು ವಿಜಯಪುರ- ಸರಕಾರದಿಂದ ವಿಜಯಪುರ ಜಿಲ್ಲೆಗೆ ಹಂಚಿಕೆಯಾದ ರೆಮಿಡಿಸಿವಿರ್ ಎಂಜೆಕ್ಷನ್ ನ್ನು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಅಲ್ಲಿನ ರೋಗಿಗಳ ಪ್ರಮಾಣಕ್ಕನುಗುಣವಾಗಿ ಹಂಚಿಕೆ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.ಮೇ 11 ರಂದು ನಾನಾ ಖಾಸಗಿ ಆಸ್ಪತ್ರೆಗಳಿಗೆ 2054 ರೆಮಿಡಿಸಿವಿರ್ ಎಂಜೆಕ್ಷನ್ ಹಂಚಿಕೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ, ಖಾಸಗಿ ಆಸ್ಪತ್ರೆಗಳಲ್ಲಿನ ಕೊರೊನಾ ರೋಗಿಗಳ ಸಂಖ್ಯೆಗೆ ಪ್ರಮಾಣಕ್ಕೆ ಅನುಗುಣವಾಗಿ ಈ ಔಷಧಿಯನ್ನು ನೇರವಾಗಿ ಆಯಾ ಖಾಸಗಿ […]