ಬಸವ ನಾಡು
ವಿಜಯಪುರ- ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೈದ್ಯಕೀಯ ಆಮ್ಲಜನಕ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮರ್ಪಕ ಆಕ್ಸಿಜನ್ ಪೂರೈಕೆಗಾಗಿ ವಿಜಯಪುರ ಜಿಲ್ಲಾಡಳಿತ ಆಕ್ಸಿಜನ್ ಕೋಶ ರಚನೆ ಸೇರಿದಂತೆ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ ಈಗ ಎರಡು ಆಮ್ಲಜನಕ ಘಟಕಗಳಿವೆ. ಮೆ. ಕುಲಕರ್ಣಿ ಗ್ಯಾಸಸ ಏಜೆನ್ಸಿ.ಮತ್ತು ಮೆ. ಎನ್. ಆರ್. ಗ್ಯಾಸಸ್ ಆಕ್ಸಿಜನ್ ಆಹೇರಿ.
ಈ ಘಟಕಗಳಿಂದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಪ್ರತಿದಿನ ಈ ಘಟಕಗಳಲ್ಲಿ ಆಕ್ಸಿಜನ್ ಲಭ್ಯತೆ ಆಧಾರದ ಮೇಲೆ ಹಾಗೂ ಆಸ್ಪತ್ರೆಗಳಲ್ಲಿನ ಕೊರೊನಾ ರೋಗಿಗಳ ಪ್ರಮಾಣಾ ಮತ್ತು ಅಗತ್ಯಕ್ಕೆ ತಕ್ಕಂತೆ ಯಾವುದೇ ರೀತಿಯ ವ್ಯತ್ಯಯವಾಗದಂತೆ ವೈದ್ಯಕೀಯ ಆಮ್ಲಜನಕವನ್ನು ಪೂರೈಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಎರಡು ಆಮ್ಲಜನಕ ಘಟಕಗಳ ಮೇಲ್ವಿಚಾರಣೆ ಕುರಿತು ತಹಸೀಲ್ದಾರರನ್ನು ಕ್ಯಾಂಪ್ ಅಧಿಕಾರಿಗಳೆಂದು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ನೇಮಿಸಲಾಗಿದೆ. ಈ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಆಮ್ಲಜನಕ ತಯಾರಿಕೆ ಘಟಕಗಳಲ್ಲಿ ಕಾರ್ಯ ನಿರ್ವಹಿಸಲು ಆದೇಶ ನೀಡಲಾಗಿದೆ. ಅಲ್ಲದೇ, ಈ ಅಧಿಕಾರಿಗಳು ನಿರ್ವಹಿಸುತ್ತಿರುವ ಕರ್ತವ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಕ್ಸಿಜನ್ ಕೋಶ ರಚಿಸಲಾಗಿದೆ. ರಮೇಶ್ ಕಳಸದ ಅಪರ ಜಿಲ್ಲಾಧಿಕಾರಿಗಳು ಇದರ ಮೇಲ್ವಿಚಾರಕರಾಗಿದ್ದು 9916418350 ಮೊಬೈಲ್ ಸಂಖ್ಯೆ ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ.
ಅದೇ ರೀತಿ ಡಾ: ಔದ್ರಾಮ ಅವರನ್ನು ನೋಡಲ್ ಅಧಿಕಾರಿ ಎಂದು ನೇಮಕ ಮಾಡಲಾಗಿದ್ದದು, ಅವರನ್ನು ಮೊಬೈಲ್ ಸಂಖ್ಯೆ 9449535101 ಮೂಲಕ ಸಂಪರ್ಕಿಸಬಹುದಾಗಿದೆ. ಅಲ್ಲದೇ, ಮಾಹಿತಿ ಅಧಿಕಾರಿಯನ್ನಾಗಿ ಎಸ್. ವಿ. ನಾವಿ ಅವರನ್ನು ನೇಮಕ ಮಾಡಲಾಗಿದ್ದು, ಅವರನ್ನು ಮೊಬೈಲ್ ಸಂಖ್ಯೆ 9449931074 ಮೂಲಕ ಹಾಗೂ ಸಹಾಯಕರನ್ನಾಗಿ ಶಿರಸ್ತೆದಾರ ಡಿ. ವೈ. ಕಟ್ಟಿಮನಿ, ಮೊಬೈಲ್ ಸಂಖ್ಯೆ 9482945104 ಮೂಲಕ ಸಂಪರ್ಕಿಸಬಹುದಾಗಿದೆ.
ವಿಜಯಪುರ ಜಿಲ್ಲೆಯ ಎಲ್ಲ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳ ಮಾಹಿತಿ. ವೈದ್ಯಕೀಯ ಆಕ್ಸಿಜನ್ ಪೂರೈಕೆ ಮತ್ತು ಕೊರೊನಾ ಹಾಗೂ ಇತರೆ ಮಾಹಿತಿಗಳ ಅನುಕೂಲಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ದಿನದ 24 ಗಂಟೆಗಳ ಕಾಲ ಸರದಿ ಆಧಾರದ ಮೇಲೆ ಸಿಬ್ಬಂದಿಗಳನ್ನು ಸಹಾಯವಾಣಿಗೆ ನೇಮಕ ಮಾಡಲಾಗಿದೆ. ಸಾರ್ವಜನಿಕರು ಮತ್ತು ಆಸ್ಪತ್ರೆಗಳು ತಮ್ಮ ಸಮಸ್ಯೆಗಳಿಗೆ ಈ ಸಂಖ್ಯೆಗಳಿಗೆ ಕರೆ ಮಾಡಿ ಪರಿಹಾರ ಕಂಡು ಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಸಹಾಯವಾಣಿ ಸಂಖ್ಯೆಗಳು- 1077( ಟೋಲ್ ಫ್ರೀ ನಂಬರ್ )
08352-222101 ಈ ನಂಬರ್ ಗಳಿಗೆ ಕರೆ ಮಾಡಬಹುದಾಗಿದೆ.
ಅಲ್ಲದೇ, ಆಸ್ಪತ್ರೆಗಳಲ್ಲಿನ ಬೆಡ್ ಗಳ ಲಭ್ಯತೆ ಕುರಿತು ಹಾಗೂ ಸರಕಾರ 07.05.2021 ರಂದು ಹೊರಡಿಸಿರುವ ಆದೇಶ ಹಾಗೂ ತಿದ್ದುಪಡಿ ಆದೇಶದಲ್ಲಿನ ಮಾರ್ಗಸೂಚಿಗಳ ಮಾಹಿತಿ ಕುರಿತು 1077 (ಟೋಲ್ ಫ್ರೀ ನಂಬರ್), 08352-222102, 08352-221261 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಿಳಿಸಿದ್ದಾರೆ.