ಕೊರೊನಾ ಲಸಿಕೆ ವಿಚಾರದಲ್ಲಿ ಕೇಂದ್ರ, ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಬಸವ ನಾಡು

ವಿಜಯಪುರ- ಕೊರೊನಾ ಲಸಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.


ಕೊರೊನಾ ಲಸಿಕೆ ವಿಚಾರದಲ್ಲಿ ಸರಕಾರ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಪಡೆಯುವುದು ಅವರ ಹಕ್ಕು. ವ್ಯಾಕ್ಸಿನ್ ಒದಗಿಸುವುದು ಸರಕಾರದ ಕೆಲಸ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ವ್ಯಾಕ್ಸಿನ್ ನೀಡುವ ವಿಚಾರದಲ್ಲಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಎಂದು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.


2ನೇ ಡೋಸ್ ವ್ಯಾಕ್ಸಿನ್ ಸಿಗಲಿಲ್ಲ ಎಂದರೆ ಜನರ ತಪ್ಪೇನು? ನೀಡಲಾಗುವ ಲಸಿಕೆಯಲ್ಲಿ ಶೇ. 70 ರಷ್ಟು 2ನೇ ಡೋಸ್ ಬಳಸುವಂತೆ ಮಾರ್ಗಸೂಚಿ ನೀಡಿತ್ತು, ಈ ಮಾರ್ಗಸೂಚಿ ಪಾಲಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಹೈಕೋರ್ಟಿಗೆ ಕೇಂದ್ರ ಸರಕಾರದ ಎ ಎಸ್ ಜಿ ಐಶ್ವರ್ಯ ಭಾಟಿ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.

ರಾಜ್ಯ ಸರಕಾರ ನಿಯಮ ಪಾಲಿಸದಿದ್ದರೆ ಜನರೇನು ಮಾಡಬೇಕು? ರಾಜ್ಯ ಸರಕಾರ ವಿಫಲವಾಗಿದೆ ಎಂದು ಹೇಳ ಬಯಸುತ್ತೀರಾ? ಎಂದು ಕೇಂದ್ರ ಸರಕಾರದ ಎ ಎಸ್ ಜಿ ಗೆ ಹೈಕೋರ್ಟ್ ಮರು ಪ್ರಶ್ನೆ ಮಾಡಿತು. 1ನೇ ಡೋಸ್ ತೆಗೆದುಕೊಂಡವರಿಗೆ 2ನೇ ಡೋಸ್ ಸಿಕ್ಕಿಲ್ಲ.! 2 ನೇ ಡೋಸ್ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ.? 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದೆ


ಈ ಗ್ಯಾಪ್ ಅನ್ನು ಹೇಗೆ ಸರಿಪಡಿಸುತ್ತೀರಿ? ಎಂದು ಹೈಕೋರ್ಟ್ ಪ್ರಶ್ನೆ ಮಾಡಿತ್ತು.. ಈ ವೇಳೆ ಕೇಂದ್ರ ಸರ್ಕಾರದ ಎಎಸ್ ಜಿ ಐಶ್ವರ್ಯ ಭಾಟಿ , ವ್ಯಾಕ್ಸಿನ್ ವಿಳಂಬವಾದರೆ 1 ನೇ ಡೋಸ್ ನೀಡಲಾಗಲ್ಲ. ಕೋವ್ಯಾಕ್ಸಿನ್ 2ನೇ ಡೋಸ್ ಗೆ 6 ವಾರ ಕಾಲಾವಕಾಶವಿದೆ, ಕೋವಿಶೀಲ್ಡ್ ಗೆ 8 ವಾರ ಕಾಲಾವಕಾಶವಿದೆ ಎಂದು ಮನವಿ ಮಾಡಿದರು.

6 ಕೋಟಿ ಜನರಲ್ಲಿ ಎಷ್ಟು ಜನ ಮೊದಲ ಡೋಸ್ ತೆಗೆದುಕೊಂಡು ಎರಡನೇಯ ಡೋಸ್ ಯಾವಾಗ ಬೇಕಾದರೂ ತಗೊಬಹುದಾ? ತಡವಾದರೂ ಪರವಾಗಿಲ್ವ? ಎಂದು ಹೈಕೋರ್ಟ್ ಪ್ರಶ್ನೆ ಮಾಡಿತು. ರಾಜ್ಯದ ಜನ ಒಂದನೇ ಡೋಸ್ ಪಡೆದು 2ನೇ ಡೋಸ್ ನ್ನು ಸರಿಯಾಗಿ ಪಡೆಯದಿದ್ದರೆ. ಅದು ನ್ಯಾಷನಲ್ ವೇಸ್ಟ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

Leave a Reply

ಹೊಸ ಪೋಸ್ಟ್‌