ವಿಜಯಪುರ- ಜನರು ಕೊರೊನಾ ವಿಚಾರದಲ್ಲಿ ಬೇಗನೇ ಚಿಕಿತ್ಸೆ ಪಡೆಯದೆ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಆತಂಕ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆ ಬುರಣಾಪುರ ಬಳಿ ಅಧಿಕಾರಿಗಳ ಜೊತೆ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ವೇಳೆ ವಕೀಲರೊಬ್ಬರು ಮೊಬೈಲ್ ಕರೆ ಮಾಡಿದ್ದರು. ಈ ಸಂದರ್ಭದಲ್ಲಿ ಪೋನ್ ಸಂಭಾಷಣೆಯಲ್ಲಿ ತೊಡಗಿದಾಗ ಕಾರಜೋಳ ಈ ರೀತಿ ಹೇಳಿದರು.
ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದರೂ ಎಂಟ್ಹತ್ತು ದಿನ ಮನೆಯಲ್ಲಿಯೇ ಮಲಗುತ್ತಾರೆ. ನಂತರ ಉಸಿರಾಟ ಸಮಸ್ಯೆ ಎದುರಾದ ತಕ್ಷಣ ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಬೇಕು ಎಂದು ಓಡಿ ಬರುತ್ತಾರೆ. ಯುವಕರು ಆರಂಭದಲ್ಲಿಯೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯದೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಊರಲ್ಲಿ ಡಂಗೂರ ಸಾರಿ ಜನರಲ್ಲಿ ಜಾಗೃತಿ ಮೂಡಿಸಿ. ಜನರಿಗೆ ಹೇಳಿ ಹೇಳಿ ಸಾಕಾಗಿದೆ ಗೋವಿಂದ ಕಾರಜೋಳ ಮೊಬೈಲ್ ಸಂಭಾಷಣೆಯಲ್ಲಿ ಬೇಸರ ವ್ಯಕ್ಯಪಡಿಸಿದರು.