ಬಸವ ನಾಡು
ವಿಜಯಪುರ- ಒಂದೆಡೆ ಕೊರೊನಾ ಸಂಕಷ್ಟ ಮತ್ತೋಂದೆಡೆ ಲಾಕಡೌನ್ ಮಧ್ಯೆ ಕೊರೊನಾ ರೋಗಿಗಳ ಜೊತೆ ಅವರ ಸಂಬಂಧಿಕರೂ ಸಂಕಷ್ಟ ಎದುರಿಸುತ್ತಿದ್ದಾರೆ.
ವಿಜಯಪುರ ನಗರದ ನಾನಾ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ದಾಖಲಾಗಿದ್ದರೆ ರೋಗಿಗಳ ಜೊತೆ ಬಂದಿರುವ ಸಂಬಂಧಿಕರಿಗೂ ಲಾಕಡೌನ್ ಬಿಸಿ ಬಲವಾಗಿಯೇ ತಟ್ಟಿದೆ. ಇದನ್ನು ಅರಿತ ವಿಜಯಪುರದ ಗಜಾನನ ಮಹಾಮಂಡಳ ನಾನಾ ಆಸ್ಪತ್ರೆಗಳಿಗೆ ತೆರಳಿ ಕೊರೊನಾ ಸೋಂಕಿತರ ಸಂಬಂಧಿಕರಿಗೆ ಒಂದಲ್ಲ, ಎರಡು ಹೊತ್ತು ಉತ್ತಮ ಗುಣಮಟ್ಟದ ಊಟದ ಪಾಕೀಟ್ ನೀಡಿವ ಮೂಲಕ ಮೌನವಾಗಿಯೇ ಅನ್ನ ದಾಸೋಹ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನೇತೃತ್ವದ ಗಜಾನನ ಮಹಾಮಂಡಳಿ ವತಿಯಿಂದ ಪ್ರತಿನಿತ್ಯ ಕೊರೊನಾ ಸೋಂಕಿತರ ಅಟೆಂಡರ್ ಗಳಿಗೆ ಪ್ರತಿದಿನ ಮದ್ಯಾಹ್ನ ಮತ್ತು ಸಂಜೆ ಹೊತ್ತು ಎರಡು ಬಾರಿ ವಿಜಯಪುರ ನಗರದ ನಾನಾ ಕೊವಿಡ್ ಆಸ್ಪತ್ರೆಗಳಿಗೆ ತೆರಳಿ ಗಜಾನನ ಮಹಾಮಂಡಳಿ ಸದಸ್ಯರು ಆಹಾರದ ಪಾಕೆಟ್ ಗಳನ್ನು ಹಂಚುತ್ತಿದ್ದಾರೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಹೊಟೇಲ್ ಗಳೆಲ್ಲವೂ ಬಂದ್ ಆಗಿವೆ. ಪರಿಣಾಮ ಕೊರೊನಾ ರೋಗಿಗಳ ಸಂಬಂಧಿಕರಿಗೆ ಗಜಾನನ ಮಹಾಮಂಡಳಿಯ 10 ಜನ ಸದಸ್ಯರ ತಂಡ ಮದ್ಯಾಹ್ನ ಹಾಗೂ ಸಂಜೆ ಹೊತ್ತು ಎರಡು ಸಲ ಊಟವನ್ನು ನೀಡುತ್ತಿದ್ದಾರೆ. ಒಂದು ದಿನ ಚಪಾತಿ-ಬದನೆಕಾಯಿ ಪಲ್ಲೆ, ಕೊಟ್ಟರೆ ಮತ್ತೋಂದು ದಿನ ಮಸಾಲ ರೈಸ್, ಘಿ ರೈಸ್ ನ್ನು ಆಯಾ ಆಸ್ಪತ್ರೆಗಳ ಬಳಿಗೆ ವಾಹನದಲ್ಲಿ ತೆರಳಿ ಹಂಚುತ್ತಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಇಂದು ಲಾಕ್ ಡೌನ್ ನಿಂದಾಗಿ ರೋಗಿಗಳ ಸಂಬಂಧಿಕರಿಗೆ ಊಟ ಸಿಗುವದು ಕಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಗಜಾನನ ಮಹಾಮಂಡಳಿಯ ಸರ್ವ ಸದಸ್ಯರ ನಿರ್ಣಯಂದತೆ ರೋಗಿಗಳ ಸಂಬಂಧಿಗಳಿಗೆ ಅಹಾರವನ್ನು ಆಯಾ ಆಸ್ಪತ್ರೆಗಳಿಗೆ ತೆರಳಿ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗಜಾನನ ಮಹಾಮಂಡಳಿ ಸದಸ್ಯ ಸತೀಶ ಪಾಟೀಲ ಇಂದು ಲಾಕ್ ಡೌನ್ ನಿಂದ ಹೊಟೇಲ್ ಗಳು ಬಂದ ಆಗಿವೆ. ಕೆಲವು ಪ್ರಾರಂಭವಿದ್ದರೂ ಹೆಚ್ಚಿನ ಬೆಲೆ ಪಡೆಯುತ್ತಿದ್ದಾರೆ. ಇಂಥ ಸಮಯದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಗಜಾನನ ಮಹಾಮಂಡಳಿ ಸದಸ್ಯರು ಈ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕೊರೊನಾ ರೋಗಿಯ ಸಂಬಂಧಿ ಪ್ರಕಾಶ ಬಿರಾದಾರ ಎಂಬುವರು ಪ್ರತಿಕ್ರಿಯೆ ನೀಡಿ, ಇಂದು ಹೊರಗಡೆ ಊಟ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಊಟ ಕೊಡುತ್ತಿರುವದು ತಮ್ಮಂಥವರಿಗೆ ತುಂಬಾ ಸಹಾಯಕಾರಿಯಾಗಿದೆ ಎಂದು ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಮತ್ತೋರ್ವ ರೋಗಿಯ ಸಂಬಂಧಿ ಮಾತನಾಡಿ, ಪ್ರತಿ ದಿನ ಮದ್ಯಾಹ್ನ ಹಾಗೂ ಸಂಜೆ ಹೊತ್ತಿನಲ್ಲಿ ಊಟ ಕೊಡುತ್ತಿರುವದು ನಮಗೆ ಬಹಳ ಅನುಕೂಲವಾಗಿದೆ. ಕಳೆದ 10 ದಿನಗಳಿಂದ ನಾವು ಇದೇ ಆಸ್ಪತ್ರೆಯಲ್ಲಿ ಎಡ್ಮೀಟ್ ಇದ್ದೇವೆ. ಇಷ್ಟು ದಿನಗಳಿಂದ ಸರಿಯಾದ ಸಮಯಕ್ಕೆ ನಮಗೆ ಊಟ ಕೊಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೋರ್ವ ರೋಗಿಯ ಸಂಬಂಧಿ ವಿಜಯ ಎಂಬಾತರು ಮಾತನಾಡಿ ಉತ್ತಮ ಗುಣಮಟ್ಟದ ಆಹಾರವನ್ನು ನಮಗೆ ಪ್ರತಿದಿನ ಕೊಡುತ್ತಿದ್ದಾರೆ. ಇಂದು ಕೆಲ ಹೊಟೇಲ್ ಗಳಲ್ಲಿ ರೇಟ್ ಸಹಿತ ದುಬಾರಿಯಾಗಿದೆ. ಹೀಗಾಗಿ ಗಜಾನನ ಮಂಡಳಿ ಸದಸ್ಯರಿಗೆ ತುಂಬು ಹೃದಯದ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.