ಮನೆ ಮನೆ ಸಮೀಕ್ಷೆ ನಡೆಸಿ ಚಿಕಿತ್ಸೆ ನೀಡಿದರೆ ವಿಜಯಪುರ ಜಿಲ್ಲೆ ಕೊರೊನಾ ಮುಕ್ತವಾಗಲು ಸಾಧ್ಯ- ಎಂ. ಬಿ. ಪಾಟೀಲ

ಬಸವ ನಾಡು ವಿಜಯಪುರ-: ಗ್ರಾಮೀಣ ಭಾಗದಲ್ಲಿ ಮನೆ-ಮನೆ ಸಮೀಕ್ಷೆ ಮಾಡಿ ಅನಾರೋಗ್ಯಕ್ಕೀಡಾದವರಿಗೆ ರೋಗ ಲಕ್ಷಣಗಳನುಸಾರ ಚಿಕಿತ್ಸೆ ನೀಡಲು ಪ್ರಾರಂಭಿಸಿದರೆ ವಿಜಯಪುರ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗುತ್ತದೆ ಎಂದು ಮಾಜಿ ಸಚಿವ, ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ಮನವಿ ಪತ್ರ ನೀಡಿ ಚರ್ಚೆ ನಡೆಸಿದ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಮೊದಲನೆ ಅಲೆಯಲ್ಲಿ ಅಷ್ಟಾಗಿ ಕಂಡು ಬರದ ಕೊರೊನಾ, ಈಗ 2ನೇ ಅಲೆಯಲ್ಲಿ ಹೆಚ್ಚಾಗಿ […]

ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿವಿ ಹಂಗಾಮಿ ಉಪಕುಲಪತಿಯಾಗಿ ಡಾ. ಆರ್. ಎಸ್. ಮುಧೋಳ ನೇಮಕ

ಬಸವ ನಾಡು ವಿಜಯಪುರ: ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಹಂಗಾಮಿ ಉಪಕುಲಪತಿಗಳಾಗಿ ಡಾ. ಆರ್. ಎಸ್. ಮುಧೋಳ ಅವರನ್ನು ನೇಮಕ ಮಾಡಲಾಗಿದೆ. ವಿಶ್ವವಿದ್ಯಾಲಯದ ಕುಲಪತಿ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಡಾ. ಆರ್. ಎಸ್. ಮುಧೋಳ ಅವರು ಮೂಲತಃ ವಿಜಯಪುರ ಜಿಲ್ಲೆಯ ಪಕ್ಕದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋವಳ್ಳಿ ಗ್ರಾಮದವರಾಗಿದ್ದಾರೆ. ವಿಜಯಪುರದ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಪಿಯು ಮುಗಿಸಿ, ಹುಬ್ಬಳ್ಳಿಯ […]

ರಾಜ್ಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಕಾರಣ ಬಿಚ್ಚಿಟ್ಟ ಮಾಜಿ ಸಚಿವ ಎಂ. ಬಿ. ಪಾಟೀಲ

ಬಸವ ನಾಡು ವಿಜಯಪುರ: ರಾಜ್ಯ ಸರಕಾರ ಸ್ವ್ಯಾಬ್ ಟೆಸ್ಟ್ ಕಡಿಮೆ ಮಾಡಿರುವುದೇ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಕಾರಣ. ಇದು ಇದೇ ರೀತಿ ಮುಂದುವರೆದರೆ ಕೊರೊನಾ ಮಹಾಸ್ಪೋಟವಾಗಲಿದೆ ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ವಾಹಿನಿ ಪಬ್ಲಿಕ್ ಟಿವಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, ಈಗ ರಾಜ್ಯಾದ್ಯಂತ ಕೊರೊ ನಾ ಟೆಸ್ಟಿಂಗ್ ಕಡಿಮೆಯಾಗಿದೆ. ಜನೇವರಿ, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ […]

ಹಬ್ಬದಾಚರಣೆ ಬದಲು ಊರೆಲ್ಲ ಔಷಧಿ ಸಿಂಪಡಿಸಿ ಮಾದರಿಯಾದ ರಂಭಾಪುರ ಗ್ರಾಮಸ್ಥರು

ಬಸವ ನಾಡು ವಿಜಯಪುರ- ಬಸವ ನಾಡು ವಿಜಯಪುರ ಹೊರ ವಲಯದ ರಂಭಾಪುರ ಗ್ರಾಮಸ್ಥರು ಈ ಬಾರಿ ಹಬ್ಬದಾಚರಣೆಯ ಬದಲು ವಿನೂತನ ಕಾರ್ಯ ಮಾಡುವ ಮೂಲಕ ಕಾಯಕವೇ ಕೈಲಾಸ ಎಂಬಂತೆ ಇಡೀ ಊರಿಗೆ ಉಪಕಾರ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿಯೂ ಕೊರೊನಾ ಎರಡನೇ ಅಲೆ ಜೋರಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿಯೂ ಲಾಕಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಹಬ್ಬ, ಹರಿದಿನಗಳಿದ್ದರೂ ಮನೆಯಲ್ಲಿಯೇ ಆಚರಿಸಬೇಕು ಎಂದು ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಂಭಾಪುರ ಗ್ರಾಮಸ್ಥರು ಬಸವ ಜಯಂತಿಯನ್ನಂತೂ […]

ಬಸವ ನಾಡಿನಲ್ಲೊಂದು ಮಾದರಿ ವಿವಾಹ- ಈ ದಂಪತಿ ಮಾಡಿದ್ದೇನು ಗೊತ್ತಾ?

ಬಸವ ನಾಡು ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯಲ್ಲೊಂದು ಮಾದರಿ ವಿವಾಹ ನಡೆದಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾರ್ಗಸೂಚಿ ಪಾಲಿಸಿದ್ದಷ್ಟೇ ಅಲ್ಲ, ಈ ದಂಪತಿ ಇತರ ವಿವಾಹಗಳಿಗೂ ಸ್ಪೂರ್ತಿಯಾಗುವ ಕೆಲಸ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಅಂಬಿಕಾ ಮತ್ತು ಪ್ರಶಾಂತ ಜೋಡಿ ಇತ್ತೀಚೆಗೆ ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಆದರೆ, ಈ ಶುಭ ಸಂದರ್ಭದಲ್ಲಿ ಜನಸಾಮಾನ್ಯರೂ ಕೂಡ ಭೇಷ ಎನಿಸುವ ಮಾದರಿ ಕೆಲಸ ಮಾಡಿದೆ. ಇದು ಕೊರೊನಾ […]

ಲಾಕಡೌನ್ ಸಂದರ್ಭದಲ್ಲಿ ಬಸವ ನಾಡಿನಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಇಳಿಕೆ- ಅಧ್ಯಯನ ವರದಿ

ಬಸವ ನಾಡು ವಿಜಯಪುರ: ರಾಜ್ಯಾದ್ಯಂತ ಈಗ ಕೊರೊನಾ ಎರಡನೇ ಭೀಕರವಾಗಿದ್ದು, ದಿನೇ ದಿನೇ ತನ್ನ ಪ್ರಭಾವವನ್ನು ಹೆಚ್ಚಿಸುತ್ತ ಸಾಗಿದೆ. ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರಕಾರ ಜನತಾ ಕರ್ಫ್ಯೂ ಮತ್ತು ಲಾಕಡೌನ್ ಜಾರಿ ಮಾಡಿದೆ. ಈ ಅವಧಿಯಲ್ಲಿ ರಾಜ್ಯದ 23 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹರಡುವ ಪ್ರಮಾಣ ಹೆಚ್ಚಾಗಿದ್ದರೆ, ಉಳಿದ ಏಳು ಜಿಲ್ಲೆಗಳಲ್ಲಿ ಕಡಿಮೆಯಾಗಿದೆ.ಈ ಏಳು ಜಿಲ್ಲೆಗಳಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯೂ ಒಂದಾಗಿರುವುದು ಸಂತಸ ತಂದಿದೆ. ವಿಜಯಪುರ ಜಿಲ್ಲೆಯಲ್ಲಿ ಪ್ರತಿನಿತ್ಯ 300 ರಿಂದ 500ಕ್ಕೂ […]