ಬಸವ ನಾಡಿನಲ್ಲೊಂದು ಮಾದರಿ ವಿವಾಹ- ಈ ದಂಪತಿ ಮಾಡಿದ್ದೇನು ಗೊತ್ತಾ?

ಬಸವ ನಾಡು

ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯಲ್ಲೊಂದು ಮಾದರಿ ವಿವಾಹ ನಡೆದಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾರ್ಗಸೂಚಿ ಪಾಲಿಸಿದ್ದಷ್ಟೇ ಅಲ್ಲ, ಈ ದಂಪತಿ ಇತರ ವಿವಾಹಗಳಿಗೂ ಸ್ಪೂರ್ತಿಯಾಗುವ ಕೆಲಸ ಮಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಅಂಬಿಕಾ ಮತ್ತು ಪ್ರಶಾಂತ ಜೋಡಿ ಇತ್ತೀಚೆಗೆ ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಆದರೆ, ಈ ಶುಭ ಸಂದರ್ಭದಲ್ಲಿ ಜನಸಾಮಾನ್ಯರೂ ಕೂಡ ಭೇಷ ಎನಿಸುವ ಮಾದರಿ ಕೆಲಸ ಮಾಡಿದೆ.

ಇದು ಕೊರೊನಾ ಕಾಲದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಕಾರ್ಯಕ್ರಮದಲ್ಲಿಯೂ ಇತರರಿಗೆ ಮಾದರಿಯಾದ ಮತ್ತು ಜಾಗೃತಿ ಸಂದೇಶ ತೋರಿದ ಘಟನೆಗೆ ಸಾಕ್ಷಿಯಾದ ಪ್ರಸಂಗ. ಈ ಮೂಲಕ ಈ ನೂತನ ದಂಪತಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.

ವಿವಾಹ ದಿನ ಪರಸ್ಪರ ಹಾರ ಬದಲಾಯಿಸಿಕೊಂಡ ದಂಪತಿ ಪರಸ್ಪರ ಮಾಸ್ಕ್ ಬದಲಾಯಿಸಿಕೊಳ್ಳುವ ಮೂಲಕ ಸಪ್ತಪದಿ ತುಳಿದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಅಷ್ಚೇ ಅಲ್ಲ, ಥರ್ಮಲ್ ಸ್ಕ್ಯಾನರ್ ಮೂಲಕ ದೇಹದ ಉಷ್ಣಾಂಶವನ್ನೂ ಚೆಕ್ ಮಾಡಿ ಭಲೇ ಜೋಡಿ ಎನಿಸಿಕೊಂಡರು.

ಅಂಬಿಕಾ ಹಾಗೂ ಪ್ರಶಾಂತ ಮಾಸ್ಕ್ ಬದಲಾಯಿಸಿ ನವ ಜೀವನಕ್ಕೆ ಕಾಲಿಟ್ಟ ನೂತನ ದಂಪತಿಯಾಗಿದ್ದು, ನಿಡಗುಂದಿ ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಈ ಮದುವೆ ಕಾರ್ಯಕ್ರಮದಲ್ಲಿ ಕೊರೊನಾ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಪಾಡಲಾಗಿತ್ತು. ಮದುವೆಗೆ ಬಂದ ಅತಿಥಿಗಳು ಸಾಮಾಜಿಕ ಅಂತರದಲ್ಲಿ ಕುಳಿತುಕೊಂಡು ನೂತನ ದಂಪತಿಗೆ ಶುಭ ಹಾರೈಸಿದರು.

ಈ ಮದುವೆ ಕಾರ್ಯಕ್ರಮಕ್ಕೆ ವಧು-ವರರರು ಮತ್ತು ಬಂಧು ಬಳಗ, ಸ್ನೇಹಿತರು, ಪಟ್ಟಣದ ಗುರು-ಹಿರಿಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅಲ್ಲದೇ, ಇತರರಿಗೆ ಮಾದರಿಯಾಗುವಂತೆ ಮಾಸ್ಕ್ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಈ ದಂಪತಿ ಕಾಲಿಟ್ಟಿದ್ದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೊನಾ ನಿಯಮ ಮೀರಿ ಅದ್ದೂರಿ ವಿವಾಹ ಕಾರ್ಯಕ್ರಮ ನಡೆಸುವವರಿಗೆ ಈ ಮದುವೆ ಸಮಾರಂಭ ಮಾದರಿಯಾದಂತಿತ್ತು.

Leave a Reply

ಹೊಸ ಪೋಸ್ಟ್‌