ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿವಿ ಹಂಗಾಮಿ ಉಪಕುಲಪತಿಯಾಗಿ ಡಾ. ಆರ್. ಎಸ್. ಮುಧೋಳ ನೇಮಕ

ಬಸವ ನಾಡು

ವಿಜಯಪುರ: ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಹಂಗಾಮಿ ಉಪಕುಲಪತಿಗಳಾಗಿ ಡಾ. ಆರ್. ಎಸ್. ಮುಧೋಳ ಅವರನ್ನು ನೇಮಕ ಮಾಡಲಾಗಿದೆ.

ವಿಶ್ವವಿದ್ಯಾಲಯದ ಕುಲಪತಿ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಡಾ. ಆರ್. ಎಸ್. ಮುಧೋಳ ಅವರು ಮೂಲತಃ ವಿಜಯಪುರ ಜಿಲ್ಲೆಯ ಪಕ್ಕದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋವಳ್ಳಿ ಗ್ರಾಮದವರಾಗಿದ್ದಾರೆ. ವಿಜಯಪುರದ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಪಿಯು ಮುಗಿಸಿ, ಹುಬ್ಬಳ್ಳಿಯ ಕೆಎಂಸಿ ಯಲ್ಲಿ ಎಂ ಬಿ ಬಿ ಎಸ್ ಮತ್ತು ಎಂ ಎಸ್ ಶಿಕ್ಷಣದ ನಂತರ ಬೆಳಗಾವಿಯಲ್ಲಿ ಕೆ ಎಲ್ ಇ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಹಾಗೂ ಕೆ ಎಲ್ ಇ ಡಾ. ಪ್ರಭಾಕರ ಕೋರೆ ಅವರ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ. ಉಪಪ್ರಾಚಾರ್ಯ, ಆಸ್ಪತ್ರೆಯ ಸುಪರಿಂಟೆಂಡೆಂಟ್ ಹಾಗೂ ನಿರ್ದೇಶಕರಾಗಿ ಒಟ್ಟು 35 ವರ್ಷಗಳ ಸೇವೆ ಸಲ್ಲಿಸದ ಆಡಳಿತದ ಅನುಭವ ಹೊಂದಿದ್ದಾರೆ.

ಕಿವಿ, ಮೂಗು ಮತ್ತು ಗಂಟಲು ತಜ್ಞರಾಗಿರುವ ಡಾ. ಆರ್. ಎಸ್. ಮುಧೋಳ ಅವರು 4 ತಿಂಗಳ ಹಿಂದೆ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯ ಸಮಉಪಕುಲಪತಿಯಾಗಿ ನೇಮಕವಾಗಿದ್ದರು. ಇವರ ನೇಮಕಕ್ಕೂ ಮುಂಚೆ ಉಪಕುಲಪತಿಯಾಗಿದ್ದ ಡಾ. ಎಂ. ಎಸ್. ಬಿರಾದಾರ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಡಾ. ಆರ್. ಎಸ್. ಮುಧೋಳ ಅವರನ್ನು ಹಂಗಾಮಿ ಉಪಕುಲಪತಿಯಾಗಿ ನೇಮಕ ಮಾಡಲಾಗಿದೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿ.ವಿ ಕುಲಪತಿ, ಮಾಜಿ ಸಚಿವ ಎಂ. ಬಿ. ಪಾಟೀಲ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌