ಡಾ. ರವಿ ಎಸ್. ಕೋಟೆಣ್ಣವರ,
ಹೋಮಿಯೋಪಥಿ ವೈದ್ಯ
ವಿಜಯಪುರ- ಕೊರೊನಾ ಎರಡನೇ ಅಲೆಯ ನಡುವೆಯೇ ಈಗ ಬ್ಲ್ಯಾಕ್ ಫಂಗ್ ಕಾಟ ಶುರವಾಗಿದೆ. ಅಲ್ಲಲ್ಲಿ ಈ ರೋಗ ಕೆಲವರಲ್ಲಿ ಕಾಣಿಸಿಕೊಂಡಿದ್ದು, ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿಯೂ ಮೊದಲ ಪ್ರಕರಣ ಪತ್ತೆಯಾಗಿದೆ ಎನ್ನಲಾಗಿದ್ದು, ಇದನ್ನು ಜಿಲ್ಲಾಡಳಿತ ಇನ್ನಷ್ಟೇ ದೃಢಪಡಿಸಬೇಕಿದೆ.
ಈ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿಯೂ ಇಬ್ಬರಲ್ಲಿ ಈ ರೋಗ ಕಾಣಿಸಿಕೊಂಡಿದೆ. ಬ್ಲ್ಯಾಕ್ ಫಂಗಸ್ ಅಂದರೆ ಕನ್ನಡದಲ್ಲಿ ಕಪ್ಪು ಶಿಲೀಂದ್ರ ಕೇದ ಈಗ ತಾನೆ ಶಿವ-ಶಿವಾ ಎಂದು ಕರೋನಾದಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಮತ್ತೆ ಆತಂಕಕ್ಕೆ ತಳ್ಳುತ್ತಿದೆ.
ಏನೀದು ಬ್ಲ್ಯಾಕ ಫoಗಸ್?
ಇದನ್ನು ವೈದ್ಯಕೀಯದಲ್ಲಿ Rino cerebral mucar mycosis ಎಂದು ಕರೆಯುತ್ತಾರೆ. ಇದೊಂದು ಮುಕಾರ್(Mucor) ಎಂಬ ಶಿಲೀಂಧ್ರಗಳಿಂದ ಬರುವ ರೋಗ. ಇವುಗಳು ತೇವವಾದ ಗೋಡೆ, ನೆಲ, ಮಣ್ಣಿನಲ್ಲಿ ಬೆಳೆಯುತ್ತವೆ. ಸಾಮಾನ್ಯವಾಗಿ ಯಾವ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ ಅಂಥವರದಲ್ಲಿ ಇದು ಕಾಣಿಸಿಕೊಳ್ಳುತ್ತದೆ.
ಉದಾಹರಣೆಗಾಗಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ, ಕ್ಷಯರೋಗ, ಹೃದಯ ರೋಗ, ಸ್ಥೂಲ ಕಾಯಗಳಿಂದ ಬಳಲುತ್ತಿರುವವರಲ್ಲಿ, ಹೆಪೆಟೈಟಿಸ್, ಏಡ್ಸದಿಂದ ಬಳಲುತ್ತಿರುವವರು, ಯಾವುದೋ ಕಾರಣಗಳಿಂದ ಎಂಟಿವೈರಲ್ ಹಾಗೂ ಸ್ಟೀರಾಯ್ಡ್ ಔಷಧಿಗಳನ್ನು ಸೇವಿಸಿದ್ದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬ್ಲ್ಯಾಕ ಫoಗಸ್ ರೋಗ ಕಾಣಿಸಿಕೊಳ್ಳುತ್ತಿದೆ. ಇವರೇ ಈ ಫoಗಸ್ ನ ಮೇನ್ ಟಾರ್ಗೆಟ್ ಆಗುತ್ತಿದ್ದಾರೆ. ಇತ್ತೀಚೆಗಷ್ಟೇ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಕೂಡ ಇದು ಕಾಣಿಸಿಕೊಳ್ಳುತ್ತಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ.
ಬ್ಲ್ಯಾಕ್ ಫಂಗಸ್
ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಲ್ಲಿ ಸಾಮಾನ್ಯವಾಗಿ ಶೀತ, ತಲೆ ನೋವು, ಜ್ವರ, ಮೈ ಕೈ ನೋವು, ಕಣ್ಣು ನೋವು, ಸೈನಸ್ ಸಮಸ್ಯೆ, ಮುಖದಲ್ಲಿ ಮರಗಟ್ಟಿದ ಅನುಭವ. ಮೂಗಿನಲ್ಲಿ ವಾಸನೆಯುಕ್ತ ಕಪ್ಪು ಸಿಂಬಳ. ಕಪ್ಪು ಹಕಳೆಗಳು ಆಗುತ್ತವೆ. ನಂತರ ಕಣ್ಣಿಗೂ ಪಸರಿಸಿ ದೃಷ್ಟಿದೋಶ ಕಾಣಿಸಿಕೊಂಡು ಮುಂದೆ ವೇಗವಾಗಿ ಸಂಪೂಣ೯ವಾಗಿ ಕುರುಡುತನ ಉಂಟಾಗಿ, ಸೋಂಕು ತೀವ್ರವಾಗಿ ಮೆದುಳಿಗೆ ಹರಡಿ ಗಂಭೀರ ರೂಪದ ತೊಡಕುಗಳುಂಟಾಗಿ ವ್ಯಕ್ತಿಗೆ ಮಾರಕವಾಗುತ್ತವೆ.
ಮುಂಜಾಗ್ರತಾ ಕ್ರಮಗಳು
ಹಳೆಯ ಗಾದೆ ಮಾತು Prevention Is Better Than Cure ಎಂಬಂತೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಬಹುಕಾಲದ ವ್ಯಾಧಿಗಳಿಂದ ಬಳಲುತ್ತಿರುವವರು. ಈಗಷ್ಟೇ ಕೊರೊನಾ ಸೋಂಕಿನಿಂದ ಗುಣಮುಖರಾದವರು ಗುಣಮುಖವಾದವರು ತಜ್ಞ ವೈದ್ಯರನ್ನು ಸಂಪಕಿ೯ಸಿ ಸಲಹೆ ಸೂಚನೆ ಪಡೆಯಬೇಕು. ಆದಷ್ಟು ಹಸಿ ಮಣ್ಣು, ಹಸಿ ನೆಲ, ಹಸಿ ಗೋಡೆಗಳನ್ನು ಮುಟ್ಟಬಾರದು. ಗಿಡ, ಮರಗಳ ಮೇಲೆ ಕೈಯಾಡಿಸಬಾರದು. ಮೇಲಿಂದ ಮೇಲೆ ಬಿಸಿ ನೀರು, ಸಾಬೂನು, ಅಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರಗಳಿಂದ ಕೈ, ಕಾಲು ತೊಳೆಯಬೇಕು. ಮೇಲಿಂದ ಮೇಲೆ ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಕೈವಸ್ತ್ರ, ಮುಖ ಕವಚ, ಟವಲಗಳನ್ನು ಡೆಟಾಲ್, ಸೆವಲಾನ್ ಬೆರೆಸಿದ ಸುಡುಬಿಸಿ ನೀರಿನಲ್ಲಿ ಹಾಕಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಉಪಯೋಗಿಸಬೇಕು. ಯಾವಾಗಲೂ ಜೀವನದಲ್ಲಿ ಧನಾತ್ಮಕವಾಗಿ ವಿಚಾರಧಾರೆಗಳಿರಬೇಕು. ಋಣಾತ್ಮಕವಾಗಿದ್ದರೂ ಕೂಡ ರೋಗ ನಿರೋಧಕ ಶಕ್ತಿ ಕುಂದುತ್ತದೆ.
ಇಷ್ಟು ಮುನ್ನೆಚ್ಚರಿ ವಹಿಸಿದರೂ ಸೋಂಕಿಗೊಳಗಾದರೆ ಬಸವಣ್ಣನವರ ವಚನದಂತೆ ಅಂಜಿದೆಡೆ ಮಾಣದು, ಅಳುಕಿದಡೆ ಮಾಣದು, ವಜ್ರ ಪಂಜರದೊಳಗಿದ್ದಡೆ ಮಾಣದು ತಪ್ಪದೋ, ಲಲಾಟಲಿಖಿತ, ಕಕ್ಕುಲತೆಗೆ ಬಂದಡೆ ಆಗದು ನೋಡಾ
ಧ್ರತಿಗೆಟ್ಟು ಮನ ಧಾತುಗೆಟ್ಟಡೆ, ಅಪ್ಪುದು ತಪ್ಪದು. ಬಾರದು – ಬಪ್ಪದು ಬಪ್ಪದು ತಪ್ಪದು ಕೂಡಲಸಂಗಮದೇವಾ’
ಹೀಗಾದರೆ ಅದು ನಮ್ಮ ನಮ್ಮ ಕಮ೯. ಸರ್ವೆ ಜನ ಸುಖಿನೋ ಭವಂತು.