ವಿಜಯಪುರ: ಕೊರೊನಾ ಎರಡನೇ ಅಲೆ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ಜನರನ್ನು ಹೈರಾಣಾಗಿಸಿದೆ. ಕೊರೊನಾ ಸೋಂಕಿತರು ಬೆಡ್ ಗಳು ಸಮಸ್ಯೆ, ಔಷಧಿಗಳ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಸೋಂಕಿತರಿಗೆ ಸ್ಪಂದಿಸಲು ಏ. 20 ರಂದು ವಿಜಯಪುರದ ಅಮ್ಮನ ಚಾರಿಟೆಬಲ್ ಟ್ರಸ್ಟ್ ಮತ್ತು ಎಂ. ಬಿ. ಪಾಟೀಲ ಫೌಂಡೇಶನ್ ಸಹಾಯವಾಣಿ ಆರಂಭಿಸಿದ್ದವು. ಈಗ ಈ ಸಹಾಯವಾಣಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈವರೆಗೆ ಈ ಸಹಾಯವಾಣಿಗೆ 1200ಕ್ಕೂ ಹೆಚ್ಚು ಕರೆಗಳು ಬಂದಿದ್ದು, 600ಕ್ಕೂ ಹೆಚ್ಚು ಜನರಿಗೆ ವಿಜಯಪುರ ನಗರದ ನಾನಾ ಆಸ್ಪತ್ರೆಗಲಲ್ಲಿ ಬೆಡ್ ವ್ಯವಸ್ಥೆ, ಆಕ್ಸಿಜನ್ ಸಿಗುವಂತೆ ಮಾಡಲಾಗಿದೆ. ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಪ್ರಧಾನ ಕಾರ್ಯದರ್ಶಿ ಬಸವರಾಜ ಕೌಲಗಿ ಮತ್ತು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಹಾಗೂ ಎಂ. ಬಿ. ಪಾಟೀಲ ಫೌಂಡೇಶನ್ ಅಧ್ಯಕ್ಷ ಸುನೀಲಗೌಡ ಪಾಟೀಲ ಅವರ ನೇತೃತ್ವದಲ್ಲಿ ಈ ಫೌಂಡೇಶನ್ ಈಗ ವಿಜಯಪುರ ಜನರ ಪಾಲಿಗೆ ವರದಾನವಾಗಿದ್ದಾರೆ.
ಇವರು ಸಹಾಯವಾಣಿ ಆರಂಭಿಸಿದ್ದರಿಂದ ಬಹಳಷ್ಟು ರೋಗಿಗಳು ಆಸ್ಪತ್ರೆಗಳಿಗೆ ಪರದಾಡುವುದು ತಪ್ಪಿದೆ. ಅಲ್ಲದೇ, ಇವರು ನಾನಾ ಆಸ್ಪತ್ರೆಗಳಲ್ಲಿರುವ ಬೆಡ್ ಗಳ ಮಾಹಿತಿಯನ್ನು ಸಂಗ್ರಹಿಸಿ, ಆಕ್ಸಿಜನ್ ಹಾಗೂ ವೆಂಟಿಲೇಟರ್ ಗ
ಗಳ ಮಾಹಿತಿ ಸಂಗ್ರಹಿಸಿ ಸೂಕ್ತ ಚಿಕಿತ್ಸೆಗಾಗಿ ಪರದಾಡುತ್ತಿರುವ ರೋಗಿಗಳಿಗೆ ಮಾಹಿತಿಯನ್ನು ನೀಡುತ್ತಿದೆ. ಸಹಾಯವಾಣಿ ಆರಂಭವಾದಾಗಿನಿಂದ ಈವರೆಗೂ ನಿರಂತರವಾಗಿ ಕರೆಗಳು ಬರುತ್ತಿದ್ದು, ಈ ಕರೆಗಳನ್ನು ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕರಾದ ಸಂತೋಷ ಇಂಡಿ ಹಾಗೂ ಟ್ರಸ್ಟ್ ನ ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಅಮಿತ ಬಿರಾದಾರ. ಸತೀಶ ನಡಗಡ್ಡಿ. ಪ್ರದೀಪ ಲಿಂಗದಳ್ಳಿ ಕರೆ ಮಾಡಿದವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಹಗಲಿರುಳು ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರ ಕಾರ್ಯ ಶ್ಲಾಘನೀಯವಾಗಿದೆ.
ಈ ಪದಾಧಿಕಾರಿಗಳ ಸೇವೆಯನ್ನು ಟ್ರಸ್ಟ್ ನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮತ್ತು ಎಂ. ಬಿ. ಪಾಟೀಲ ಫೌಂಡೇಶನ್ ಅಧ್ಯಕ್ಷ ಮತ್ತು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನಿಲಗೌಡ ಪಾಟೀಲ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಸಂಗಮೇಶ ಬಬಲೇಶ್ವರ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ತಮ್ಮ ಎಂ. ಎಸ್. ಬಬಲೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಕೇವಲ ಅರ್ಧ ಫೀ ತೆಗೆದುಕೊಂಡು ರಾಜ್ಯದಲ್ಲಿಯೇ ಮಾದರಿಯಾದ ಕೆಲಸ ಮಾಡಿದ್ದರು. ಈಗ ಎರಡನೆಯ ಅಲೆಯ ಸಂದರ್ಭದಲ್ಲಿ ಸಹಾಯವಾಣಿ ಪ್ರಾರಂಭ ಮಾಡುವ ಮೂಲಕ ಜನರ ನೆರವಿಗೆ ಧಾವಿಸಿರುವದು ಸಾರ್ವಜನಿಕವಾಗಿ ವ್ಯಾಪಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಮ್ಮ ಸಹಾಯವಾಣಿಯ ಪದಾಧಿಕಾರಿಗಳು ಮತ್ತು ತಮ್ಮ ವೈಯಕ್ತಿಕ ಕರೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ರೋಗಿಗಳ ನೆರವಿಗೆ ಧಾವಿಸಿದ ಆಸ್ಪತ್ರೆಗಳ ಮುಖ್ಯಸ್ಥರಿಗೆ ಮತ್ತು ವೈದ್ಯರು ಹಾಗೂ ನರ್ಸ್ ಗಳಿಗೆ ಈ ಸೇವಾ ಕಾರ್ಯದಲ್ಲಿ ಸಹಕರಿಸಿದ ಎಲ್ಲರ ಸೇವೆಯನ್ನು ಸಂಗಮೇಶ ಬಬಲೇಶ್ವರ ಕೊಂಡಾಡಿದ್ದಾರೆ. ಅಲ್ಲದೇ, ಅವರಿಗೆ ಕೃತಜ್ಞತೆಗಳನ್ನೂ ಸಲ್ಲಿಸಿದ್ದಾರೆ.