ವಿಜಯಪುರ: ವಿಜಯಪುರ ಜಿಲ್ಲೆಯ ಎಲ್ಲ ಸರಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಬೇಕಾದ 132 ದಿನದ ಆಹಾರ ಧಾನ್ಯಗಳಾದ ಅಕ್ಕಿ, ಗೋಧಿ, ಉಪ್ಪು ಮತ್ತು 55 ದಿನಗಳಿಗೆ ಪ್ರತಿ ಮಗುವಿಗೆ 1 ಪಾಕೇಟ್ ಎಣ್ಣೆ (ಸೂರ್ಯಕಾಂತಿ ಎಣ್ಣೆ) ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಶಿಕ್ಷಣಾಧಿಕಾರಿ ಎಸ್. ಎಸ್. ಮುಜಾವರ(ಅದಾಯೋ) ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಎಲ್ಲಾ ಮುಖ್ಯ ಶಿಕ್ಷಕರು ನಿಯಮಾನುಸಾರವಾಗಿ ಪಾಲಕ-ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಈ ಆಹಾರ ಧಾನ್ಯ ವಿತರಿಸಲು ಸೂಚಿಸಲಾಗಿದೆ. ಈ ಆಹಾರ ಧಾನ್ಯ ವಿತರಣಾ ಕಾರ್ಯವು ಕೊರೊನಾ ಮಾರ್ಗಸೂಚಿಯಂತೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಆಹಾರ ಧಾನ್ಯ ವಿತರಣೆಯಿಂದ ನಗರ ಮತ್ತು ನಾನಾ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಒಂದು ಹೊತ್ತಿನ ಊಟ ಸಿಕ್ಕಂತಾಗಲಿದೆ. ಈಗಾಗಲೇ ಲಾಕಡೌನ್ ಹಿನ್ನೆಲೆಯಲ್ಲಿ ಜನಜೀವನಕ್ಕೆ ತೊಂದರೆಯಾಗಿದ್ದು, ಬಹಳಷ್ಟು ಬಡ ಪೋಷಕರು ಉದ್ಯೋವಿಲ್ಲದೆ ಮನೆಯಲ್ಲಿ ಕೂಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಅವರ ಆರ್ಥಿಕ ಸ್ಥಿತಿಯ ಮೇಲೆಯೂ ಸಾಕಷ್ಟು ಪರಿಣಾಮ ಬೀರಿದೆ.