ಇಂಡಿ ಉಪವಿಭಾಗಾಧಿಕಾರಿ, ಸಿಂದಗಿ ತಹಸೀಲ್ದಾರ ಧಾಳಿ- ಭೀಮಾ ತೀರದಲ್ಲಿ ಸುಮಾರು ರೂ. 5.31 ಲಕ್ಷ ಮೌಲ್ಯದ ಅಕ್ರಮ ಮರಳು ವಶ

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ಉಪವಿಭಾಗಾಧಿ ರಾಹುಲ್ ಸಿಂಧೆ ಅವರ ನೇತೃತ್ವದಲ್ಲಿ ಸಿಂದಗಿ ತಹಸೀಲ್ದಾರ ಮತ್ತು ಪೋಲಿಸ್ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಭೀಮಾ ತೀರದಲ್ಲಿ ಧಾಳಿ ನಡೆಸಿ ಅಕ್ರಮ ಮರಳನ್ನು ವಶಪಡಿಸಿಕೊಂಡಿದೆ.

ಸಿಂದಗಿ ತಾಲೂಕಿನ ಭೀಮಾ ತೀರದಲ್ಲಿ ಅಧಿಕಾರಿಗಳು ವಶಪಡಿಸಿಕೊಳ್ಳಲಾಗಿರುವ ಅಕ್ರಮ ಮರಳು

ಸಿಂದಗಿ ತಾಲೂಕಿನ ದೇವಣಗಾಂವ ಮತ್ತು ಶಂಬೆವಾಡ ಗ್ರಾಮ ವ್ಯಾಪ್ತಿಯಲ್ಲಿ ಭೀಮಾ ನದಿ ಪಾತ್ರದಲ್ಲಿ ಈ ಧಾಳಿ ನಡೆಸಿದ ಅಧಿಕಾರಿಗಳು 629 ಕ್ಯೂಬಿಕ್ ಮೀಟರ್ ಅನಧಿಕೃತ ಮರಳನ್ನು ವಶಕ್ಕೆ ಪಡೆದಿದೆ. ಎರಡು ಪ್ರತ್ಯೇಕ ಕಡೆ ನಡೆದ ಈ ಧಾಳಿಯಲ್ಲಿ ದೇವಣಗಾಂವ ಗ್ರಾಮದ ಎರಡು ಸ್ಥಳಗಳಲ್ಲಿ 294 ಕ್ಯೂಬಿಕ್ ಮೀಟರ್ ಮತ್ತು ಶಂಭೇವಾಡ ಗ್ರಾಮದ ಎರಡು ಪ್ರತ್ಯೇಕ ಸ್ಥಳಗಲ್ಲಿ 335 ಕ್ಯೂಬಿಕ್ ಮೀಟರ್ ಸೇರಿ ಒಟ್ಟು 629 ಕ್ಯೂಬಿಕ್ ಮೀಟರ್ ಮರಳನ್ನು ವಶಕ್ಕೆ ಪಡೆದಿದೆ. ಈ ಅಕ್ರಮ ಮರಳು ಸುಮಾರು ರೂ. 531595 ಮೌಲ್ಯದಾಗಿದ್ದಾಗಿದೆ ಎಂದು ಅಂಜಾಜಿಸಲಾಗಿದೆ.

ಸಿಂದಗಿ ತಾಲೂಕಿನ ಭೀಮಾ ತೀರದಲ್ಲಿ ವಶಪಡಿಸಿಕೊಳ್ಳಲಾಗಿರುವ ಅಕ್ರಮ ಮರಳು


ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಿಂದಗಿ ತಾಲೂಕಿನ ಆಲಮೇಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 379 ಮತ್ತು ಮೈನ್ಸ್ ಆ್ಯಕ್ಟ್ ಅಡಿ ದೂರು ದಾಖಲಿಸಿದೆ ಎಂದು ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌