ಕೊರೊನಾ ನಿಯಂತ್ರಣದಲ್ಲಿ ವಿಜಯಪುರಕ್ಕೆ ಮತ್ತೋಂದು ಗರಿ- ಗುಣಮುಖರಾಗುವವರ ಸಂಖ್ಯೆಯಲ್ಲಿ ರಾಜ್ಯದಲ್ಲೇಯ 2ನೇ ಸ್ಥಾನ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ಈಗ ಕೊರೊನಾ ನಿಯಂತ್ರಣದಲ್ಲಿ ಮತ್ತೋಂದು ಯಶಸ್ಸು ಸಾಧಿಸಿದೆ. ಕೊರೊನಾ ಸೋಂಕಿತರು ಗುಣಮುಖರಾಗುತ್ತಿರುವ ಜಿಲ್ಲೆಗಳಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ.

ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ ಜಿಲ್ಲೆಯಲ್ಲಿ ಈ ವರೆಗೆ ಕೊರೊನಾ ಸೋಂಕಿತರಲ್ಲಿ ಶೇ. 88.01 ರಷ್ಟು ಜನ ಗುಣಮುಖರಾಗಿದ್ದು, ಕರ್ನಾಟಕದಲ್ಲಿ ಬಸವ ನಾಡು ಎರಡನೇ ಸ್ಥಾನದಲ್ಲಿದೆ. ಬೀದರ ಜಿಲ್ಲೆಯಲ್ಲಿ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದ್ದು, ಶೇ. 89.19 ರಷ್ಟು ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಬೀದರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ ಶೇ. 87.71 ರಷ್ಟು ಸೋಂಕಿತರು ಗುಣಮುಖರಾಗಿದ್ದು, ಈ ಜಿಲ್ಲೆ ಗುಣಮುಖರಾಗುವವರ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದೆ.

ತುಮಕೂರು ಜಿಲ್ಲೆಯಲ್ಲಿ ಶೇ. 64. 14 ರಷ್ಟು ಜನ ಗುಣಮುಖರಾಗಿದ್ದು, ಈ ಜಿಲ್ಲೆಯ ಗುಣಮುಖರಾದವರ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಮೇ 11 ರಿಂದ 17ರ ಅವಧಿಯಲ್ಲಿ ಸಂಗ್ರಹಿಸಲಾಗಿರುವ ಅಂಕಿ-ಅಂಶದ ಪ್ರಕಾರ ಈ ಮಾಹಿತಿ ನೀಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

ಉಳಿದ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಗುಣಮುಖರಾಗುತ್ತಿರುವವ ಶೇಕಡಾವಾರು ವಿವರ

ಬೆಂಗಳೂರು ನಗರ ಶೇ. 64.85,
ಬಳ್ಳಾರಿ ಶೇ. 73.33,
ಹಾಸನ ಶೇ. 75.85,
ಬೆಂಗಳೂರು ಗ್ರಾಮೀಣ ಶೇ. 66.07,
ಮೈಸೂರು ಶೇ. 86.47,
ಬೆಳಗಾವಿ ಶೇ. 70.84,
ದಕ್ಷಿಣ ಕನ್ನಡ ಶೇ. 80.84,
ಕಲಬುರಗಿ ಶೇ. 79.64,
ಶಿವಮೊಗ್ಗ ಶೇ. 77.20,
ಮಂಡ್ಯ ಶೇ. 84.57,
ರಾಯಚೂರು ಶೇ. 76.57,
ಉತ್ತರ ಕನ್ನಡ ಶೇ. 77.82,
ಉಡುಪಿ ಶೇ. 85.03,
ಕೋಲಾರ ಶೇ. 79.60,
ಬಾಗಲಕೋಟೆ ಶೇ. 77.66,
ಚಿಕ್ಕಮಗಳೂರು ಶೇ. 77.13,
ಚಿಕ್ಕಬಳ್ಳಾಪುರ ಶೇ. 80.07,
ಧಾರವಾಡ ಶೇ. 84.81,
ಕೊಪ್ಪಳ ಶೇ. 75.48,
ಯಾದಗಿರಿ ಶೇ. 75.29,
ಕೊಡಗು ಶೇ. 76.83,
ಚಾಮರಾಜನಗರ ಶೇ. 79.15,
ದಾವಣಗೆರೆ ಶೇ. 87.08,
ರಾಮನಗರ ಶೇ. 77.25,
ಚಿತ್ರದುರ್ಗ ಶೇ. 84.05,
ಗದಗ ಸೇ. 84.15,
ಹಾವೇರಿ ಶೇ. 87.71

ಬಸವನಾಡು ವಿಜಯಪುರ ಜಿಲ್ಲೆಯ ಈ ಸಾಧನೆಗೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಎಸ್ಪಿ ಅನುಪಮ ಅಗ್ರವಾಲ, ಜಿ. ಪಂ. ಸಿಇಓ ಗೋವಿಂದ ರೆಡ್ಡಿ ಅವರ ಸಮರ್ಥ ನೇತೃತ್ವದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿರುವುದು ಪ್ರಮುಖ ಕಾರಣವಾಗಿದೆ.

ಇದೇ ರೀತಿ ಮುಂಬರುವ ದಿನಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಲಿ. ಸಧ್ಯಕ್ಕೆ ಎದುರಾಗಿರುವ ಬೆಡ್ ಸಮಸ್ಯೆ, ಆಕ್ಸಿಜನ್ ರೆಮಿಡಿಸಿವಿರ್ ಕೊರತೆಯಂಥ ಸಮಸ್ಯೆಗಳಿಗೆ ಬೇಗನೆ ಪರಿಹಾರ ಸಿಗಲಿ. ಬಸವನಾಡು ಕೊನಾನಾ ಮುಕ್ತವಾಗಲಿ ಎಂದು ಬಸವ ನಾಡು ಆಶಿಸುತ್ತದೆ.

Leave a Reply

ಹೊಸ ಪೋಸ್ಟ್‌