ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ 212 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ಪಡೆಗಳು ಈಗಾಗಲೇ ಸಭೆ ನಡೆಸಿ, ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಚಢಚಣದಲ್ಲಿ ಕಾರ್ಯಪಡೆ ಸಭೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ತಾವು ಈಗಾಗಲೇ ಗುಣಕಿ, ಝಳಕಿ, ಹೋರ್ತಿ ಈ ಮೂರು ಹಳ್ಳಿಗಳಲ್ಲಿ ಭೇಟಿ ನೀಡಿದ್ದು, ಗ್ರಾಮ ಪಂಚಾಯಿತಿ ಕಾರ್ಯ ಪಡೆಗಳು ಯಾವ ರೀತಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಕಾರ್ಯ ಪಡೆಯವರು ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕಾರ್ಯಪಡೆ ಮತ್ತು ಆಶಾ ಕಾರ್ಯಕರ್ತರು ತಮ್ಮೊಂದಿಗೆ ಪಲ್ಸ್ ಆಕ್ಸಿ ಮೀಟರ್ ಇಟ್ಟುಕೊಂಡಿರಬೇಕು. ಪ್ರತಿ ಕುಟುಂಬದಲ್ಲಿ ಯಾವುದೇ ರೀತಿಯ ಜ್ವರ, ನೆಗಡಿ, ಕೆಮ್ಮು, ಉಸಿರಾಟ ತೊಂದರೆ ಹಾಗೂ ಬೇರೆ ಬೇರೆ ಅಪಾಯಕಾರಿ ಖಾಯಿಲೆ ಇದ್ದವರನ್ನು ಆದ್ಯತೆ ಮೇಲೆ ತಕ್ಷಣ ಚಿಕಿತ್ಸೆಗೆ ಒಳಪಡಿಸಲಿ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಗ್ರಾಮ ಪಂಚಾಯಿತಿ ಕಾರ್ಯ ಪಡೆಯಿಂದ ಮಾಸ್ಕ, ಸ್ಯಾನಿಟೈಸರ್ ಕೊಟ್ಟು ಆಶಾ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಇದುವರೆಗೆ 4 ದಿನಗಳಲ್ಲಿ ಒಟ್ಟು 1899 ಜನ ಕೊರೊನಾ ಸೋಂಕಿನ ಲಕ್ಷಣಗಳು ಇರುವವರನ್ನು ಗುರುತಿಸಿದ್ದಾರೆ. 78 ಜನರಿಗೆ ಕೋವಿಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಿದ್ದಾರೆ. ಹೋಮ್ ಐಸೋಲೇಷನ್ ಗ್ರಾಮ ಪಂಚಾತಮಯಿತಿ ವತಿಯಿಂದ ಬೇಸಿಕ್ ಮೆಡಿಕಲ್ ಕಿಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಕಾರ್ಯ ಪಡೆಯಿಂದ ನಾಳೆ ಸರ್ವೇ ಕಾರ್ಯ ಮುಗಿಯುತ್ತದೆ. ಸೋಂಕು ತಗುಲಿದ ವ್ಯಕ್ತಿಯನ್ನು ಯಾರಿಗೆ ಕರೆ ಮಾಡಬೇಕೆಂಬ ಮಾಹಿತಿಗಾಗಿ ಮನೆ ಮನೆಗೆ ಭಿತ್ತಿ ಪತ್ರ ನೀಡಲಾಗುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ಕೊರೊನಾ ಸೋಂಕು ತಗುಲಿದ ವ್ಯಕ್ತಿ ಕ್ವಾರೆಂಟೈನ್ ನಲ್ಲಿ ಇರಲು ನೋಟಿಸ್ ನೀಡಿ, ಮನೆಗೂ ಅಂಟಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸೀಲ್ ಡೌನ್ ಕೂಡ ಮಾಡಿದ್ದೇವೆ. ಕ್ವಾರೆಂಟೈನ್ ಮತ್ತು ಸೀಲ್ ಡೌನ್ ಮಾಡಿದ
ಫೋಟೋವನ್ನು ತೆಗೆದುಕೊಂಡಿರಬೇಕು ಎಂದು ತಿಳಿಸಲಾಗಿದೆ ಎಂದು ಗೋವಿಂದರೆಡ್ಡಿ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ , ಸರ್ವೆಯಲ್ಲಿ 60 ಕೋವಿಡ್ ಕೇರ್ ಸೆಂಟರ್ ಗಳನ್ನು ಮಾಡಲಾಗಿದೆ. ಸುಮಾರು 3000 ರೋಗಿಗಗಳ ನಿರ್ವಹಣೆ ಸಾಮರ್ಥ್ಯವನ್ನು ಈ ಕೇಂದ್ರಗಳು ಹೊಂದಿವೆ. ತಹಸಿಲ್ದಾರ್ ರಿಂದ ಮ್ಯಾನೇಜ್ಮೆಂಟ್, ಉತ್ತಮ ವೈದ್ಯರಿಂದ ಚಿಕಿತ್ಸೆ ಸಹ ನೀಡಲಾಗುತ್ತಿದೆ. ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಒಂದು ವಾರದಲ್ಲಿ ರಿಪೋರ್ಟ್ ಬರುಲಿದ್ದು, ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡುವುದು ಇದರಿಂದ ನಿಯಂತ್ರಣಜ್ಜೆ ಬರುವ ಆಶಾಭಾವನೆ ಇದೆ ಎಂದು ಅವರು ತಿಳಿಸಿದರು.