ಡಿಗ್ರಿ, ಪಿಜಿ ಪರೀಕ್ಷೆಗಳು ತಡವಾದರೂ ಆನ್‌ಲೈನ್‌ ಬೋಧನೆ ಮುಂದುವರಿಕೆ- ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು: ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು ತಡವಾದರೂ ಆನಲೈನ್ ಬೋಧನೆ ಮುಂದುವರೆಯಲಿದೆ ಎಂದು ಡಿಸಿಎಂ ಡಾ. ಸಿ. ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪದವಿ ಮತ್ತು ವಿವಿ ಗಳು ಕೋರ್ಸ್‌ಗಳ ಸಮ ಸ್ಥಾನಿಕ ಸೆಮಿಸ್ಟರ್‌ ಕೋರ್ಸ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬೇಕು. ಈ ಕೋರ್ಸ್‌ಗಳ ಭೌತಿಕ ತರಗತಿಗಳನ್ನು ಆರಂಭಿಸುವ ಕುರಿತು ಕೊರೊನಾ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಅಶ್ವತ್ಥ ನಾರಾಯಣ ತಿಳಿಸಿದರು. ಬೆಸ ಸೆಮಿಸ್ಟರ್‌ಗಳಿಗೆ ಪರೀಕ್ಷೆಗಳನ್ನು ಇನ್ನೂ […]

ಜಿಲ್ಲೆಯಲ್ಲಿ ಬ್ಯಾಕ್ ಫಂಗಸ್ ಸಂಖ್ಯೆ 50ಕ್ಕೇರಿಕೆ- ಆರ್ ಎಂ ಪಿ ವೈದ್ಯರು ಕೊರೊನಾಗೆ ಚಿಕಿತ್ಸೆ ನೀಡಿದರೆ ಕ್ರಮ- ಪಿ. ಸುನೀಲ ಕುಮಾರ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಗಂಭೀರ ಸ್ವರೂಪದ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಇಳಿಮುಖ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ನಿರಂತರ ಮತ್ತು ಗುಣಮಟ್ಟದ ಕೊರೊನಾ ರೋಗ ಲಕ್ಷಣ ಪರೀಕ್ಷೆ, ಆ್ಯಪ್ ಮೂಲಕ ಪ್ರತಿದಿನ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರೊಂದಿಗೆ ಬೆಡ್ ನಿರ್ವಹಣೆ, ನಿಗದಿತ ತಂತ್ರಾಂಶದಲ್ಲಿ ಕೊರೊನಾ ರೋಗಿಗಳ ದಾಖಲು, ಬಿಡುಗಡೆ, ಸಾವು, […]

ಆರೋಗ್ಯ ಕವಚ ಆ್ಯಂಬೂಲನ್ಸ್ ನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಸಿಬ್ಬಂದಿ

ವಿಜಯಪುರ- ತುಂಬು ಗರ್ಭಿಣಿ ಮಹಿಳೆಯೊಬ್ಬಳು ಆರೋಗ್ಯ ಕವಚ ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲಕೊಪ್ಪ ಈ ಹೆರಿಗೆಯಾಗಿದೆ. ಆಲಕೊಪ್ಪ ನಿವಾಸಿ ಲಕ್ಷ್ಮೀ ಬಿರಾದಾರ 108 ಆರೋಗ್ಯ ಕವಚ ಆ್ಯಂಬೂಲನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಗೆಂದು ಆಸ್ಪತ್ರೆಗೆ ತರುವ ವೇಳೆ ಮಾರ್ಗ ಮದ್ಯದಲ್ಲಿ ವಾಹನದಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಹನದಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ 108 ಆ್ಯಂಬೂಲನ್ಸ್ ಸಿಬ್ಬಂದಿ ಅನೀಲಕುಮಾರ ಗುಪ್ತಾ […]

ವಿಜಯಪುರದಲ್ಲಿ ಯತ್ನಾಳ ಅಧ್ಯಕ್ಷತೆಯ ಸಂಸ್ಥೆಯಿಂದ ಆಕ್ಸಿಜನ್ ಆನ್ ವ್ಹೀಲ್ ಉಚಿತ ಸೇವೆ ಆರಂಭ

ವಿಜಯಪುರ: ವಿಜಯಪುರ ಜಿಲ್ಲೆ ಕೊರೊನಾ ಎರಡನೇ ಅಲೆ ಮುಂದುವರೆದಿದ್ದು, ಕೊರೊನಾ ಸೋಂಕಿತರು ಸೂಕ್ತ ವೈದ್ಯಕೀಯ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ. ಇದನ್ನು ಮನಗಂಡ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷರಾಗಿರುವ ಶ್ರೀ ಸಿದ್ದೇಶ್ವರ ಸಂಸ್ಥೆ ಮತ್ತು ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ರಾಜ್ಯದಲ್ಲಿಯೇ ಪ್ರಥಮವಾಗಿ ಖಾಸಗಿ ಸಂಸ್ಥೆಯಿಂದ ಆಕ್ಸಿಜನ್ ಆನ್ ವ್ಹೀಲ್ ಸೇವೆ ಆರಂಭವಾಗಿದೆ. ಶ್ರೀ ಸಿದ್ಧೇಶ್ವರ ಸಂಸ್ಥೆಗೆ ಸೇರಿರುವ ಶಾಲಾ ಬಸ್ಸುಗಳಲ್ಲಿ ಆಕ್ಸಿಜನ್ ಮಷೀನ್ ಒಳಗೊಂಡ ಸೇವೆ ಆರಂಭವಾಗಿದೆ. ಈ ವಾಹನಗಳಿಗೆ […]

ಬಿ ಎಲ್ ಡಿ ಆಸ್ಪತ್ರೆಯಲ್ಲಿ ಮೂರು ಜನ ಬ್ಲ್ಯಾಕ್ ಫಂಗಸ್ ರೋಗಿಗಳು ಗುಣಮುಖ- ಆರು ಜನರಿಗೆ ಶಸ್ತ್ರಚಿಕಿತ್ಸೆ- ಉಪಕುಲಪತಿ ಡಾ. ಮುಧೋಳ

ವಿಜಯಪುರ: ಕೊರೊನಾದಿಂದ ಗುಣಮುಖರಾಗಿದ್ದ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಕಪ್ಪು ಶಿಲೀಂದ್ರ(ಬ್ಲಾಕ್ ಫಂಗಸ್) ರೋಗಿಗಳ ಚಿಕಿತ್ಸೆಗೆ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಆರಂಭಿಸಲಾಗಿದೆ ಎಂದು ಬಿ ಎಲ್ ಡಿ ಇ ಡೀಮ್ಡ್ ವಿವಿ ಉಪಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ. ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ, ವಿಜಯಪುರದ ಪಕ್ಕದ ಕಲಬುರಗಿ, ಬಾಗಲಕೋಟೆ, ಸೇರಿದಂತೆ ನಾನಾ ಜಿಲ್ಲೆಗಳ ಒಟ್ಟು 25 ರೋಗಿಗಳು ಇಲ್ಲಿ ಬ್ಲಾಕ್ ಫಂಗಸ್ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ನಿನ್ನೆ ಮೂರು ಗುಣಮುಖರಾಗಿ […]