ವಿಜಯಪುರ- ತುಂಬು ಗರ್ಭಿಣಿ ಮಹಿಳೆಯೊಬ್ಬಳು ಆರೋಗ್ಯ ಕವಚ ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲಕೊಪ್ಪ ಈ ಹೆರಿಗೆಯಾಗಿದೆ. ಆಲಕೊಪ್ಪ ನಿವಾಸಿ ಲಕ್ಷ್ಮೀ ಬಿರಾದಾರ 108 ಆರೋಗ್ಯ ಕವಚ ಆ್ಯಂಬೂಲನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಹೆರಿಗೆಗೆಂದು ಆಸ್ಪತ್ರೆಗೆ ತರುವ ವೇಳೆ ಮಾರ್ಗ ಮದ್ಯದಲ್ಲಿ ವಾಹನದಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಹನದಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ 108 ಆ್ಯಂಬೂಲನ್ಸ್ ಸಿಬ್ಬಂದಿ ಅನೀಲಕುಮಾರ ಗುಪ್ತಾ ಮತ್ತು ಮಹಾದೇವ ಬಡಿಗೇರ ಈ ಸಿಬ್ಬಂದಿ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆ ತಾಯಿ ಮತ್ತು ಮಗುವನ್ನು ಬಳಿಕ ಕಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ತಾಯಿ-ಮಗು ಸುರಕ್ಷಿತವಾಗಿ ಆರೋಗ್ಯದಿಂದ ಇದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.