ವಿಜಯಪುರದ ಬಿ ಎಲ್ ಡಿ ಇ ಆಸ್ಪತ್ರೆಗೆ ಬಂತು ಮತ್ತೋಂದು ಆಕ್ಸಿಜನ್ ಘಟಕ ಒಂದೆರಡು ದಿನಗಳಲ್ಲಿ ಕಾರ್ಯಾರಂಭ
ವಿಜಯಪುರ: ಬಸವ ನಾಡು ವಿಜಯಪುರ ನಗರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಪೂರೈಸ ಮತ್ತೋಂದು ಘಟಕ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಮುಂದಿನ 2-3 ದಿನಗಳಲ್ಲಿ ಈ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ತಿಳಿಸಿದ್ದಾರೆ. ಈ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಿ ಎಲ್ ಡಿ ಈ ಆಸ್ಪತ್ರೆಯಲ್ಲಿ ಈಗಾಗಲೇ 13 ಕೆ ಎಲ್ ಡಿ ಆಕ್ಸಿಜನ್ ಘಟಕದ […]
ಗ್ರಾಮೀಣ ಪ್ರದೇಶದ ಕೊರೊನಾ ರೋಗಿಗಳಿಗೆ ಕೂಡಲೇ ಚಿಕಿತ್ಸೆ ನೀಡಲು ಡಿಸಿಎಂ ಗೋವಿಂದ ಕಾರಜೋಳ ಸೂಚನೆ
ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಕೊರೊನಾ ಲಕ್ಷಣ ಕಂಡು ಬಂದವರನ್ನು ತಕ್ಷಣ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಜಯಪುರದಲ್ಲಿ ನೂತನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆ ನಡೆಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣಪುಟ್ಟ ಮನೆಗಳಲ್ಲಿ ಗ್ರಾಮಸ್ಥರು ವಾಸಿಸುತ್ತಿರುವುದರಿಂದ ಕುಟುಂಬದ ಸದಸ್ಯರಲ್ಲಿ ಸೋಂಕು ವೇಗವಾಗಿ ಹರಡಲು ಕಾರಣವಾಗುತ್ತಿದೆ. ಆದ್ದರಿಂದ ಕೊರೊನಾ ಲಕ್ಷಣಗಲು ಕಂಡು ಬಂದ ತಕ್ಷಣ ನಿಗದಿತ […]
ರಾಜೀವ ಗಾಂಧಿ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಅವರಿಂದ ಬಡವರಿಗೆ ದಿನಸಿ, ಔಷಧಿ ಕಿಟ್, ಪೊಲೀಸರಿಗೆ ಮಾಸ್ಕ್, ಸ್ನಾನಿಟೈಸರ್, ಗ್ಲೌಸ್ ವಿತರಣೆ
ವಿಜಯಪುರ: ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರಿಫ್ ಅವರು ಕೊರೊನಾ ಸಂಕಷ್ಟದಲ್ಲಿರುವ ಬಡವರ ನೆರವಿಗೆ ಧಾವಿಸಿದ್ದಾರೆ. ರಾಜೀವ ಗಾಂಧಿ ಅವರ ಪುಣ್ಯತಿಥಿಯ ಅಂಗವಾಗಿ ವಿಜಯಪುರ ನಗರದ ವಾರ್ಡ್ ಸಂಖ್ಯೆ 2 ಮತ್ತು ಖಾಜಾ ಅಮೀನ ದರ್ಗಾ, ಭಾಟ ಕಾಲನಿ ಮತ್ತು ಕಲ್ಲಿನ ಖಣಿ ಪ್ರದೇಶಗಳಿಗೆ ತೆರಳಿ ಲಾಕಡೌನ್ ನಿಂದ ಸಂಕಷ್ಟದಲ್ಲಿರುವ ಜನರಿಗೆ ದಿನಸಿ ಕಿಟ್ ವಿತರಿಸಿದರು. ಅಲ್ಲದೇ, ಕೊರೊನಾ ನಿಯಂತ್ರಣಕ್ಕೆ ಅಗತ್ಯವಾಗಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯ ಕಿಟ್ ಗಳನ್ನೂ ಕೂಡ ವಿತರಿಸಿದರು. ಕೊರೊನಾದಿಂದಾಗಿ ದಿನಗೂಲಿ […]
ಕೋವಿಡ್ ಜೊತೆ ಈಗ ನೆರೆಯ ಜಿಲ್ಲೆಗಳಿಗಷ್ಟೇ ಅಲ್ಲ ಮಹಾರಾಷ್ಟ್ರದ ಬ್ಲ್ಯಾಕ್ ಫಂಗಸ್ ರೋಗಿಗಳಿಗೂ ವರದಾನವಾದ ಬಸವ ನಾಡಿನ ಬಿ ಎಲ್ ಡಿ ಇ ಆಸ್ಪತ್ರೆ
ವಿಜಯಪುರ: ಕೆಲವೇ ದಿನಗಳ ಹಿಂದೆ ಕೊರೊನಾ ಈಗ ಬ್ಲ್ಯಾಕ್ ಫಂಗಸ್ ನಿಂದ ರೋಗಿಗಳಿಗೆ ಚಿಕಿತ್ಸಾ ತಾಣವಾಗಿದೆ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆ. ಸರಕಾರ ನಿಗದಿ ಮಾಡಿದ ದರಕ್ಕಿಂತಲೂ ಶೇ. 70 ರಷ್ಟು ಕಡಿಮೆ ದರದಲ್ಲಿ ಮತ್ತು ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಕೊರೊನಾ ರೋಗಿಗಳಿಗೆ ವರದಾನವಾಗಿದ್ದ ಬಿ ಎಲ್ ಡಿ ಇ ಆಸ್ಪತ್ರೆ ಈಗ ಬ್ಲ್ಯಾಕ್ ಫಂಗಸ್ ರೋಗಿಗಳ ಪಾಲಿಗೂ ಚಿಕಿತ್ಸಾ ತಾಣವಾಗಿ ಮಾರ್ಪಟ್ಟಿದೆ. ವಿಜಯಪುರ ನಗರದಲ್ಲಿರುವ ಮತ್ತು ಮಾಜಿ ಸಚಿವ […]
ಲಂಚಬಾಕ ಪೊಲೀಸರ ಮಾನ ಹರಾಜು ಮಾಡಿದ ಲಾರಿ ಚಾಲಕರು- ಹೈವೆ ಪೆಟ್ರೋಲಿಂಗ್ ನ ಇಬ್ಬರು ಪೊಲೀಸ್ ಅಧಿಕಾರಿಗಳು ಅಮಾನತು
ವಿಜಯಪುರ: ಕೊರೊನಾ 2ನೇ ಅಲೆ ತಡೆಗಟ್ಟಲು ವಿಜಯಪುರ ಪೊಲೀಸರು ತಮ್ಮ ಜೀವ ಪಣಕ್ಕಿಟ್ಟು ಹಗಲಿರುಳು ಶ್ರಮಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಆದರೆ, ಮತ್ತೋಂದೆಡೆ ಹೈವೆ ಪೆಟ್ರೋಲಿಂಗ್ ಪೊಲೀಸರು ವಿಜಯಪುರ ಪೊಲೀಸರ ಮಾನವನ್ನು ರಾಷ್ಟ್ರಾದ್ಯಂತ ಹರಾಜು ಹಾಕುವ ಮೂಲಕ ತಮ್ಮ ವೃತ್ತಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಈವರೆಗೆ ಸಾರ್ವಜನಿಕರು ಸಿಟ್ಟಾಗಿಯೇ ಗೊಣಗುತ್ತಿದ್ದ ವಿಜಯಪುರ ಜಿಲ್ಲೆಯ ಹೈವೆ ಪೆಟ್ರೋಲಿಂಗ್ ಪೊಲೀಸರ ಮಾನವನ್ನು ಉತ್ತರ ಭಾರತ ಲಾರಿ ಚಾಲಕರು ದೇಶಾದ್ಯಂತ ಹರಾಜು ಹಾಕುವ ಮೂಲಕ ಅವರ ಬಂಡವಾಳ ಬಯಲಿಗೆ […]
ಖಾಸಗಿ, ಅನುದಾನಿತ, ಸರಕಾರಿ ಶಾಲೆ, ಕಾಲೇಜುಗಳ ಸಿಬ್ಬಂದಿಗೆ ಪರಿಹಾರ ಘೋಷಿಸಿ- ಸಿಎಂ, ಶಿಕ್ಷಣ ಸಚಿವರಿಗೆ ಪರಿಷತ ಸದಸ್ಯ ಅರುಣ ಶಹಾಪುರ ಪ್ರತ್ಯೇಕ ಪತ್ರ
ವಿಜಯಪುರ: ಖಾಸಗಿ, ಅನುದಾನಿತ ಹಾಗೂ ಸರಕಾರಿ ಶಾಲೆ, ಕಾಲೇಜುಗಳ ಸಿಬ್ಬಂದಿಗಳ ಪರ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಸಿಎಂ ಮತ್ತು ಶಿಕ್ಷಣ ಸಚಿವರಿಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಗಳು ಬಸವ ನಾಡಿಗೆ ಲಭ್ಯವಾಗಿವೆ. ಸಿಎಂ ಗೆ ಪತ್ರ ಬರೆದಿರುವ ಪತ್ರದಲ್ಲಿ ಅರುಣ ಶಹಾಪುರ ಅವರು, ಖಾಸಗಿ, ಅನುದಾನಿತ ಮತ್ತು ಸಹಕಾರಿ ಶಾಲೆ ಹಾಗೂ ಕಾಲೇಜುಗಳ ಸಿಬ್ಬಂದಿಗೆ ಪರಿಹಾರ ಘೋಷಿಸಬೇಕು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಕೋವಿಡ್ […]