ವಿಜಯಪುರ: ಬಸವ ನಾಡು ವಿಜಯಪುರ ನಗರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಪೂರೈಸ ಮತ್ತೋಂದು ಘಟಕ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಮುಂದಿನ 2-3 ದಿನಗಳಲ್ಲಿ ಈ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ತಿಳಿಸಿದ್ದಾರೆ.
ಈ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಿ ಎಲ್ ಡಿ ಈ ಆಸ್ಪತ್ರೆಯಲ್ಲಿ ಈಗಾಗಲೇ 13 ಕೆ ಎಲ್ ಡಿ ಆಕ್ಸಿಜನ್ ಘಟಕದ ಅಸ್ತಿತ್ವದಲ್ಲಿದೆ. ಈಗ ಹೊಸದಾಗಿ 13 ಕೆ ಎಲ್ ಡಿ ಮತ್ತೋಂದು ಘಟಕವನ್ನು ಅಳವಡಿಸಲಾಗುತ್ತಿದ್ದೆ. ಇದರಿಂದ ಇನ್ನೂ ಹೆಚ್ಚಿನ ರೋಗಿಗಳಿಗೆ ಆಕ್ಸಿಜನ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ರಮಾಣ ಈ ಘಟಕಿಂದಾಗಿ ಒಟ್ಟು 26 ಕೆ ಎಲ್ ಡಿ ಗೆ ಹೆಚ್ಚಳವಾಗಲಿದೆ. ಮುಂದಿನ ದಿನಗಳಲ್ಲಿ ಇದರಿಂದ 600 ರೋಗಿಗಳಿಗೆ ಯಾವುದೇ ಅಡೆತಡೆ ಇಲ್ಲದೆ ಉತ್ತಮ ಗುಣಮಟ್ಟದ ಆಕ್ಸಿಜನ್ ಪೂರೈಸಬಹುದು ಡಾ. ಅರವಿಂದ ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಫೌಂಡೇಶನ್ ಹಾಕಿ ಕ್ಯೂರಿಂಗ್ ಮಾಡಲಾಗಿದ್ದು, ಇಂದು ಪ್ರ್ಯಾಕ್ಸ್ ಏರ್ ಕಂಪನಿಯಿಂದ ಬೃಹತ್ ಟ್ಯಾಂಕರ್ ಬಂದಿದ್ದು, ಅಳವಡಿಸುವ ಕಾರ್ಯ ಆರಂಭವಾಗಿದೆ. ಮುಂದಿನ 2-3 ದಿನಗಳಲ್ಲಿ ಈ ಕಾರ್ಯ ಪೂರ್ಣಗೊಂಡು, ರೋಗಿಗಳ ಬಳಕೆಗೆ ಜೀವವಾಯು ಲಭ್ಯವಾಗಲಿದೆ.