ಕೊರೊನಾ ಭಯ, ಚಿಂತೆಯನ್ನು ದೂರ ಮಾಡಲು ಮನಸ್ಸಿಗೆ ಸ್ವಯಂ ಸೂಚನೆ’ಗಳನ್ನು ನೀಡಿ ನಿಶ್ಚಿಂತೆಯಿಂದಿರಿ- ಸಂದೀಪ ಅಳಸಿ

ಸಂದೀಪ ಅಳಸಿ

ವಿಜಯಪುರ: ಇಂದು ಇಡೀ ದೇಶ ಕೊರೊನಾ ಎರಡನೇ ಅಲೆಯಿಂದ ತತ್ತರಿಸಿ ಹೋಗಿದೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳುಲ್ಲಿ ಕೊರೊನಾ ಬಗ್ಗೆ ಓದಿ, ವಿಡಿಯೋಗಳನ್ನು ನೋಡಿ ಜನರು ಗುಣಮುರಾಗುವವರಿಗಿಂತ ಸಮಸ್ಯೆ ಎದುರಿಸುತ್ತಿರುವ ಸೋಂಕಿತರ ಬಗ್ಗೆಯೇ ಹೆಚ್ಚಿನ ಘಟನಾವಳಿಗಳತ್ತ ಗಮನ ಹರಿಸುತ್ತಿದ್ದಾರೆ. ಇದು ಜನಸಾಮಾನ್ಯರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಉಂಟಾಗಿದ್ದು, ಆಕ್ಸಿಜನ್ ಕೊರತೆ, ಬೆಡ್ ಕೊರತೆಯಂಥ ವಿಚಾರಗಳು ಜನಸಾಮಾನ್ಯರಲ್ಲಿ ಭಯ, ಚಿಂತೆ, ನಿರಾಶೆ ಹೆಚ್ಚಾಗಲು ಕಾರಣವಾಗಿದೆ.

ಇದರಿಂದಾಗಿ ಕೊರೊನಾ ಸೋಂಕಿಗಿಂತಲೂ ಅದರ ಭಯದಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಇಂಥ ಸಂದರ್ಭಗಳಲ್ಲಿ ಜನರ ಮನಸ್ಥೈರ್ಯ ಹೆಚ್ಚಿಸುವುದು, ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮತ್ತು ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಮನೋಧೈರ್ಯ ಕಾಪಾಡಿಕೊಳ್ಳುವುದು ಅಷ್ಟೇ ಅಗತ್ಯವಾಗಿದೆ.

ಮನೋಸ್ಥೈರ್ಯವನ್ನು ಹೆಚ್ಚಿಸಲು ಸಮ್ಮೋಹನ ಉಪಚಾರ ಪದ್ಧತಿಯಂತೆ ನಮ್ಮ ಮನಸ್ಸಿಗೆ ಸ್ವಯಂ ಸೂಚನೆಯನ್ನು ನೀಡುವುದು ಉಪಯೋಗವಾಗಬಹುದು. ಸಮ್ಮೋಹನ ಉಪಚಾರ ಪದ್ಧತಿಯಂತೆ ಪ್ರತಿದಿನ ನಮ್ಮ ಮನಸ್ಸಿಗೆ ಯೋಗ್ಯ ಸ್ವಯಂ ಸೂಚನೆಯನ್ನು ನೀಡಿದರೆ ಖಂಡಿತವಾಗಿಯೂ ಸದ್ಯದ ಸಂಕಟ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಮನಸ್ಸು ಸ್ಥಿರವಾಗುತ್ತದೆ.

ಮನೋಬಲ ಹೆಚ್ಚಾಗಿ ಸ್ಥಿರವಾಗಿರಲು ಅಂತರ್ಮನಸ್ಸಿಗೆ ಸ್ವಯಂ ಸೂಚನೆಯನ್ನು ನೀಡುವ ಮೊದಲು ಕೊರೊನಾ’ ಅವಧಿಯಲ್ಲಿ ಸರಕಾರವು ನೀಡಿದ ಎಲ್ಲ ಸೂಚನೆಗಳನ್ನು ಅಂದರೆ ನಿಯಮಿತವಾಗಿ ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಪಾಡುವುದು, ಆಗಾಗ ನಿಯಮಿತವಾಗಿ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದನ್ನು ಸೇರಿದಂತೆ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

ಉದಾಹರಣೆಗೆ ತಮಗೆ ಕೊರೊನಾ ಸೋಂಕು ತಗುಲಿದರೆ ನಾನು ಗುಣಮುಖನಾಗುಬಹುದಾ ಎಂಬ ಭಯ ಹಲವರಲ್ಲಿ ಕಾಡುತ್ತದೆ. ಇಂಥ ಸಂದರ್ಭದಲ್ಲಿ ಈ ರೋಗಾಣುವಿನ ಸೋಂಕು ತಗುಲಿರುವ ಶೇ. 80ರಷ್ಟು ಜನರ ರೋಗದ ಸ್ವರೂಪವು ಸೌಮ್ಯವಾಗಿರುತ್ತದೆ ಎನ್ನುವುದು ನನಗೆ ಗಮನಕ್ಕೆ ಸಾಕು. ಬಂದು ನಾನು ಸಕಾರಾತ್ಮಕವಾಗಿರುತ್ತೇನೆ. ನನ್ನ ಕುಟುಂಬದವರು, ಹಿತಚಿಂತಕರು ಮತ್ತು ಸರಕಾರಿ ಇಲಾಖೆಗಳು ನೀಡಿರುವ ಸೂಚನೆಗಳನ್ನು ಪಾಲಿಸಿ ಆರೋಗ್ಯದ ಸರಿಯಾದ ರೀತಿಯಲ್ಲಿ ಕಾಳಜಿ ವಹಿಸುತ್ತೇನೆ ಎಂಬುದು ಸ್ವಯಂ ಸೂಚನೆಯನ್ನು ನೀಡುವ ಪದ್ಧತಿಯಾಗಿದೆ.

ನಮ್ಮ ಮನಸ್ಸಿನಲ್ಲಿ ಯಾವ ಅಯೋಗ್ಯ ವಿಚಾರಗಳಿಂದ ಒತ್ತಡ ಅಥವಾ ಚಿಂತೆಯಾಗುತ್ತದೆಯೋ. ಆ ವಿಚಾರಗಳ ಬಗ್ಗೆ 15 ದಿನಗಳ ಅಥವಾ ವಿಚಾರ ಕಡಿಮೆಯಾಗುವ ವರೆಗೆ ಸಂಬಂಧಪಟ್ಟ ಸ್ವಯಂ ಸೂಚನೆಯನ್ನು ನೀಡಬೇಕು. ಈ ಸ್ವಯಂ ಸೂಚನೆಯನ್ನು ದಿನದಲ್ಲಿ 5 ಬಾರಿ ನೀಡಬೇಕು. ಒಂದು ಬಾರಿಗೆ ಒಂದು ಸ್ವಯಂ ಸೂಚನೆಯನ್ನು 5 ಸಲ ಅಂತರ್ಮನಸ್ಸಿಗೆ ನೀಡಬೇಕು.

ಮನಸ್ಸಿನಲ್ಲಿ ಬರುವ ನಿರರ್ಥಕ ವಿಚಾರಗಳಿಂದ ಸ್ವಯಂ ಸೂಚನೆಗಳನ್ನು ಏಕಾಗ್ರತೆಯಿಂದ ಕೊಡಲು ಆಗದಿದ್ದರೆ, ಸ್ವಲ್ಪ ದೊಡ್ಡ ಸ್ವರದಲ್ಲಿ ಸ್ವಯಂ ಸೂಚನೆಯ ಸತ್ರವನ್ನು ನೀಡಬಹುದು ಅಥವಾ ಕಾಗದದ ಮೇಲೆ ಬರೆದಿರುವ ಸ್ವಯಂ ಸೂಚನೆಯನ್ನು ಓದಬಹುದು. 

ಇದರಿಂದ ಮನಸ್ಸು ನಾಕಾರಾತ್ಮಕ ಅಂಶಗಳ ಬದಲು ಸಕಾರಾತ್ಮಕ ಚಿಂತನೆಗಳತ್ತ ಬದಲಾಗಿ ಮಾನಸಿಕ ಮತ್ತು ದೈಹಿಕವಾಗಿ ನಾವು ಸದೃಢರಾಗಿರಲು ಸಾಧ್ಯವಾಗಲಿದೆ.

Leave a Reply

ಹೊಸ ಪೋಸ್ಟ್‌