ವಿಜಯಪುರ ಜಿಲ್ಲೆಯಲ್ಲಿ ಮತ್ತೆ 17 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ- ಆತಂಕದಲ್ಲಿ ಜನತೆ

ವಿಜಯಪುರ: ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಮತ್ತೆ 17 ಜನರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆಯಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಕೊರೊನಾ ಜೊತೆ ಈಗ ಬ್ಲ್ಯಾಕ್ ಫಂಗಸ್ ಕೂಡ ಕಾಣಿಸಿಕೊಂಡಿದ್ದು, ಈಗ ಹೊಸದಾಗಿ 17 ಜನರಲ್ಲಿ ಈ ರೋಗ ಪತ್ತೆಯಾಗಿದೆ.  ಇದರಿಂದಾಗಿ ಈವರೆಗೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 67 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಂತಾಗಿದೆ.  ಇವರಲ್ಲಿ ಈಗಾಗಲೇ 7 ಜನರು ಬ್ಲ್ಯಾಕ್ ಫಂಗಸ್‌ನಿಂದ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ ಎಂದು ಅವರು ತಿಳಿಸಿದರು.

ಸಾಮಾನ್ಯವಾಗಿ ನೀಡಲಾಗುವ ಚಿಕಿತ್ಸೆಯ ಮೂಲಕ ಈಗ ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.  ಈ ರೋಗಿಗಳಿಗೆ ಸರಕಾರದಿಂದ ಈವರೆಗೆ ಔಷಧ ಬಂದಿಲ್ಲ.  ಸರಕಾರದಿಂದ ವಿಜಯಪುರ ಜಿಲ್ಲೆಯ ಪಾಲಿನ
ಔಷಧಿ ಬರುವ ತನಕ ಅಲ್ಲಿಯವರೆಗೆ ಸಾಮಾನ್ಯ ಕೋರ್ಸ್‌ನಂತೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.  ಒಟ್ಟು 67 ಪ್ರಕರಣಗಳಲ್ಲಿ 12 ಜನರಿಗೆ ಬೇರೆ ಕಡೆ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಜಿಲ್ಲೆಯ ಎಲ್ಲ ವೈದ್ಯರುಗಳಿಗೆ ಬೆಂಗಳೂರಿನ ತಜ್ಞ ವೈದ್ಯರೊಂದಿಗೆ ವಿಡಿಯೋ ಕಾನ್ಫರೆಸ್ನ್ ಮೂಲಕ ಬ್ಲ್ಯಾಕ್ ಫಂಗಸ್ ಮತ್ತು ಅದಕ್ಕಿರುವ ಚಿಕಿತ್ಸೆಯ ಬಗ್ಗೆ ಚರ್ಚೆ ನಡೆಸಲು ಆರೋಗ್ಯ ಇಲಾಖೆ ಆಯುಕ್ತರು ವ್ಯವಸ್ಥೆ ಮಾಡಿದ್ದರು.  ಈ ಸಂದರ್ಭದಲ್ಲಿ ಕೆಲವು ಜನ ವೈದ್ಯರು ಕೆಲವು ವಿಚಾರಗಳ ಕುರಿತು ಪ್ರಶೆ ಕೇಳಿ ಅದಕ್ಕೆ ಪರಿಹಾರ ನೀಡುವ ಕುರಿತು ಉತ್ತರ ಪಡೆದುಕೊಂಡಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದರು.

Leave a Reply

ಹೊಸ ಪೋಸ್ಟ್‌