ಬಸವ ನಾಡಿನಲ್ಲಿ ಶ್ರೀ ಸಾಯಿ ಸೇವಾ ಸಮಿತಿಯಿಂದ ಸದ್ದಿಲ್ಲದೆ ನಡೆದಿದೆ ಕೊರೊನಾ ಸೋಂಕಿತರ ಸೇವೆ

ವಿಜಯಪುರ: ಬಸವ ನಾಡಿನಲ್ಲಿ ಸದ್ದಿಲ್ಲದೆ ಕೊರೊನಾ ರೋಗಿಗಳ ಸೇವೆ ಮಾಡುವ ಮೂಲಕ ಶ್ರೀ ಸಾಯಿ ಸೇವಾ ಸಮಿತಿ ಗಮನ ಸೆಳೆದಿದೆ.

ಕೊರೊನಾ ಸಂಕಷ್ಟ ಸಮಯದಲ್ಲಿ ನಾನಾ ಸಂಘಟನೆಗಳು, ವ್ಯಕ್ತಿಗಳು ಹಲವಾರು ರೀತಿಯಲ್ಲಿ ತಮ್ಮದೇ ಆದ ಸಮಾಜ ಸೇವೆ ಮಾಡುತ್ತ ಜನಪರ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಶ್ರೀ ಸಾಯಿ ಸೇವಾ ಸಮಿತಿ ಮಾತ್ರ ವಿನೂತನ ಕೊರೊನಾ ಸೋಂಕಿತರಿಗೆ ವಿಶೇಷ ಗಮನ ಹರಿಸುವ ಮೂಲಕ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ವಿಜಯಪುರದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಕೊರೊನಾ ಸೋಂಕಿತರಿಗೆ ಉಚಿತವಾಗಿ ಆಹಾರ, ನೀರು ಹಂಚಿಕೆ

ಕಳೆದ ಒಂದು ವಾರದಿಂದ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಉಚಿತವಾಗಿ ಊಟ ನೀಡುವ ಮೂಲಕ ಹಸಿವು ನೀಗಿಸುತ್ತಿದೆ. ಪ್ರತಿದಿನ ರಾತ್ರಿ ಆಸ್ಪತ್ರೆಗೆ ತೆರಳುವ ಸಮಿತಿಯ ಸದಸ್ಯರಾದ ನಿರ್ದೇಶಕರು ಮತ್ತು ಸದಸ್ಯರಾದ ಮುರುಗೇಶ ಪಟ್ಟಣಶೆಟ್ಟಿ, ಸಂತೋಷ ಕಲಬುರ್ಗಿ, ಶಿವಾನಂದ ಮುಲವಾಡ, ದಯಾನಂದ ನಿಕ್ಕಂ, ಭೀಮು ಜಮಖಂಡಿ ಮುಂತಾದವರು ಆಹಾರದ ಪೊಟ್ಟಣಗಳು ಹಾಗೂ ಶುದ್ಧವಾದ ನೀರನ್ನು ನೀಡಿ ಬರುತ್ತಿದ್ದಾರೆ.

ಪ್ರತಿನಿತ್ಯ ಸುಮಾರು 150ಕ್ಕೂ ಹೆಚ್ಚು ಜನರಿಗೆ ಶ್ರೀ ಸಾಯಿ ಸೇವಾ ಸಮಿತಿ ಸದಸ್ಯರು ಕಳೆದ ಮೂರ್ನಾಲ್ಕು ದಿನಗಳಿಂದ ಉಚಿತವಾಗಿ ಆಹಾರದ ಪೊಟ್ಟಣಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಅಲ್ಲದೇ, ಮುಂಬರುವ ದಿನಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಗ್ರಾಮೀಣ ಭಾಗಗಳಲ್ಲಿ ಸ್ಯಾನಿಟೈಜೇಶನ್ ಸೇರಿದಂತೆ ನಾನಾ ಸಮಾಜಪ ಕೆಲಸಗಳಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಸಮಿತಿ ಮುಖಂಡ ಅಪ್ಪಾಸಾಹೇಬ ತೊಗರಿ ಬಸವ ನಾಡಿಗೆ ತಿಳಿಸಿದ್ದಾರೆ.

ವಿಜಯಪುರದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಕೊರೊನಾ ಸೋಂಕಿತರಿಗೆ ಉಚಿತವಾಗಿ ಆಹಾರ, ನೀರು ಹಂಚಿಕೆ

ಸಮಾನ ವಯಸ್ಕ ಮತ್ತು ಮನಸ್ಕ ಯುವಕರ ಸಮಿತಿ ಇದಾಗಿದ್ದು, ಸದಾ ಒಂದಿಲ್ಲೊಂದು ಸಮಾಜ ಸೇವೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ.

One Response

Leave a Reply

ಹೊಸ ಪೋಸ್ಟ್‌