ವಿಜಯಪುರ: ಮನೆ ಮನೆಗೆ ಹಣ್ಣು ಮತ್ತು ತರಕಾರಿ ಮಾರಾಟ ಮಾಡುವ ಹಾಪಕಾಮ್ಸ್ ವಾಹನಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಚಾಲನೆ ನೀಡಿದರು.
ವಿಜಯಪುರ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ,(ಜಿಲ್ಲಾ ಪಂಚಾಯಿತಿ) ಮತ್ತು ಜಿಲ್ಲಾ ಹಾಪಕಾಮ್ಸ್ ಸಹಯೋಗದಲ್ಲಿ ಸಂಚಾರಿ ಸರಕು ವಾಹನದ ಮೂಲಕ ಹಣ್ಣು ಮತ್ತು ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಇದಾಗಿದೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತಡೆಗಟ್ಟಲು ಸರಕಾರ ಜನತಾ ಕರ್ಫ್ಯೂ, ಲಾಕಡೌನ್ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲದ ಹಿತದೃಷ್ಟಿಯಿಂದ ಹಾಪಕಾಮ್ಸ್ ನಿಂದ ವಿಜಯಪುರ ನಗರದ ನಿವಾಸಿಗಳಿಗೆ ದಿನನಿತ್ಯ ಅಗತ್ಯ ಹಣ್ಣು ಮತ್ತು ತರಕಾರಿಗಳನ್ನು ತಲುಪಿಸಲು 10 ಮಳಿಗೆಗಳ ಮುಖಾಂತರ ಈಗಾಗಲೇ ಮಾರಾಟ ಮಾಡಲಾಗುತ್ತದೆ. ಅದರಂತೆ ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಹಾಪಕಾಮ್ಸ್, ಸಹಯೋಗದಲ್ಲಿ ನಾನಾ ಬಡಾವಣೆ ಗಳಿಗೆ ಸಂಚರಿಸಲು ಐದು ಸಂಚಾರಿ ವಾಹನಗಳ ಮೂಲಕ ಹಣ್ಣು ಮತ್ತು ತರಕಾರಿಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ವಿಜಯಪುರ ನಗರದ ನಾನಾ ಬಡಾವಣೆಗಳಿಗೆ ಐದು ಸಂಚಾರಿ ವಾಹನಗಳ ಮೂಲಕ ಹಣ್ಣು ಮತ್ತು ತರಕಾರಿಗಳನ್ನು ಗ್ರಾಹಕರಿಗೆ ತಲುಪಿಸಲು ಹಾಗೂ ರೈತರಿಂದ ಖರೀದಿಸಲು ಎರಡು ಗೂಡ್ಸ ವಾಹನಗಳನ್ನು ನಿಯೋಜಿಸಲಾಗಿದೆ. ಈ
ವಾಹನಗಳು ಜೋರಾಪೂರ ಪೇಠ, ಶಾಸ್ತ್ರಿ ನಗರ, ಘೇವರಚಂದ್ಮ ಕಾಲೋನಿ, ರಾಜಕುಮಾರ ಲೇಔಟ್, ಚಾಲುಕ್ಯ ನಗರ, ಕೆ ಎಚ್ ಬಿ ಕಾಲನಿ, ಶ್ರೀನಗರ, ಕೆ ಸಿ ನಗರ್, ಎಂ ಬಿ ಪಾಟೀಲ್ಮ ನಗರ, ಆಲಕುಂಟೆ ನಗರ, ವಜ್ರ ಹನುಮಾನ್ ನಗರ, ಇಬ್ರಾಹಿಂಪುರ, ಗಣೇಶನಗರ, ರಾಜಾಜಿನಗರ, ಸಾಯಿ ಪಾರ್ಕ್, ಮಲ್ಲಿಕಾರ್ಜುನ ನಗರ, ಆದರ್ಶ ನಗರ, ಗುರುರಾಜ ಕಾಲನಿ, ನೀಲಾನ ಗರ,ಐಶ್ವರ್ಯ ನಗರ, ಅಕ್ಕಿ ಕಾಲನಿ, ಆಶ್ರಮ, ಪಾರೇಖ ನಗರ, ಕನಕದಾಸ ಬಡಾವಣೆ, ಹುಡ್ಕೊ, ಜಲನಗರ, ಕೆ ಕೆ ಕಾಲನಿಗಳಲ್ಲಿ ಸಂಚರಿಸಲಿವೆ.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖಡ ಉಪನಿರ್ದೇಶಕರು ಸಿದ್ಧರಾಮಯ್ಯ ಎಂ.ಬರಗಿಮಠ, ಜಿಲ್ಲಾ ಹಾಪಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಸಚಿನ್ ಉಟಗಿ,
ಜಿಲ್ಲಾ ಹಾಪಕಾಮ್ಸ್ ನಿರ್ದೇಶಕ ನಂದು ರಾಥೋಡ, ಹಾಪಕಾಮ್ಸ್ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.