ಬಂಜಾರಾ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ನೀಡಿ, ವಿಜಯಪುರ ಜಿಲ್ಲೆಗೆ ಸೂಕ್ತ ಔಷಧಿ ಒದಗಿಸಲು ಎಂ ಎಲ್ ಸಿ ಪ್ರಕಾಶ ರಾಠೋಡ ಆಗ್ರಹ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ವಿನ ಪ್ರಮಾಣದಲ್ಲಿ ಹರಡಿದ್ದು,‌ ಲಂಬಾಣಿ ತಾಂಡಾದ ಜನರು ಬೇರೆ ಬೇರೆ ಕಡೆ ದುಡಿಯಲು ಹೊಗಿದ್ದವರು ಲಾಕಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿ ಇದ್ದಾರೆ. ಇವರುಗೆ ಮತ್ತು ಲಂಬಾಣಿಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ವಿಧಾನ ಪರಿಷತ ಸದಸ್ಯ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಪ್ರಕಾಶ ರಾಠೋಡ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳಿಗೂ ಹೆಚ್ಷಿನ ಪ್ರಮಾಣದಲ್ಲಿ ಸೋಂಕು ಕಂಡು ಬರುತ್ತಿದೆ. ಅದನ್ನು ತಡೆಯಲು ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿ ಮಾಡಿದರು‌

ಟಾಸ್ಕ್ ಪೊಸ್ ಮಾಡಿದ್ದೀರಿ ಅವರುಗಳು ಹಳ್ಳಿಗಳಲ್ಲಿ ಹೋಗಿ ‌ಕೋವಿಡ್ ಇರುವ ಸೊಂಕಿತರನ್ನು ಪತ್ತೆಹಚ್ಚಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಮೂರು ಸಾವಿರ ಜನರಿಗೆ ಸೊಂಕು ಹಬ್ಬಿದೆ ಇದರ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟ್ ಮಾಡಬೇಕು. ವಿಧಾನ ಸಭೆಯ ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳ ಪ್ರದೇಶಾಭಿವೃದ್ದಿ ಅನುದಾನವನ್ನು ಕಾಂಗ್ರೆಸ್ ಪಕ್ಷದಿಂದ ಪರವಾಗಿ ಇದನ್ನು ಕೊರೊನಾ ನಿರ್ವಹಣೆಗಾಗಿ ಉಪಯೋಗಬೇಕು ಎಂದು ಲ ಕೇಳಿಕೊಂಡಿದ್ದೀವೆ. ಆದರೆ ಅದನ್ನು ಸರಕಾರ‌ ನೀಡಿರುವುದಿಲ್ಲ. ಈಗ ವಿಧಾನ ಸಭೆಯ ಮತ್ತು ವಿಧಾನ ಪರಿಷತ್ತಿನ ಸದಸ್ಯರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನೀಡುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ, ಅದನ್ನು ಉಪಯೋಗಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಅದೇ ರೀತಿ ಬ್ಲ್ಯಾಕ್ ಫಂಗಸ್ ರೋಗ ರೋಗಿಗಳ ಸಂಖ್ಯೆಯಲ್ಲಿ ವಿಜಯಪುರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಈ ರೋಗಕ್ಕೆ ಎಂಫೊಥೆರಿಸಿನ್ ಎಂಜೆಕ್ಷನ್ ಕೊರತೆಯಿದೆ. ಇದರ ಬದಲಾಗಿ ಪೊಸ್ಯಾಕೊನ್ಯಾಝೊಲ್ ಅಥವಾ ಇಸಾವುಕ್ಯಾಝೋಲ್ ಎಂಜೆಕ್ಷನ್ ನೀಡಲು ಅವಕಾಶ ಮಾಡಿ ಕೊಡಬೇಕು ಎಂದು ಪ್ರಕಾಶ ರಾಠೋಡ ಸಿಎಂ ಬಳಿ ಮನವಿ ಮಾಡಿದರು.

Leave a Reply

ಹೊಸ ಪೋಸ್ಟ್‌