ವಿಜಯಪುರ: ಕೊರೊನಾ ಸಂಕಷ್ಟ ಕಾಲದಲ್ಲಿ ಸಿಎಂ ಬದಲಾವಣೆ ವಿಚಾರ ಸರಿಯಲ್ಲ. ಈ ವಿಷಯದಲ್ಲಿ ತಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಿರುರುವುದಾಗಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸಿಎಂ ಜೊತೆ ವಿಡಿಯೋ ಸಂವಾದದ ಬಳಿಕ ಮಾತನಾಡಿದ ಅವರು, ನಾನು ಪಕ್ಷದ ಹೈ ಕಮಾಂಡ ನಿರ್ಣಯಕ್ಕೆ ನಾನು ಬದ್ದನಾಗಿದ್ದೇನೆ. ನಾನು ಯಾವುದೇ ವ್ಯಕ್ತಿಯ ನಿಲುವಿಗಿಂತ ಪಕ್ಷದ ನಿರ್ಣಯಕ್ಕೆ ನಾನು ಬದ್ದನಾಗಿದ್ದೇನೆ. ಕೊರೊನಾ ಸಂದರ್ಭದಲ್ಲಿ ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇಂಥ ಇಂತಹ ಸಂದರ್ಭದಲ್ಲಿ ಸಿ ಎಂ ಬದಲಾವಣೆ ಮಾಡುವದು ಒಳ್ಳೆಯದಲ್ಲ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ತಿಳಿಸಿದರು.
ಸಿಎಂ ಜೊತೆ ವಿಡಿಯೋ ಸಂವಾದದಲ್ಲಿ ವಿಜಯಪುರ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಲಸಿಕೆ ಸರಬರಾಜು ಆಗಬೇಕು. ಅಲ್ಲದೇ, ಬ್ಲ್ಯಾಕ್ ಫಂಗಸ್ ಪ್ರಕರಣದ ಕುರಿತು ಸಿಎಂ ಜೊತೆ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಗಮನಕ್ಕೆ ತರಲಾಗಿದೆ. ಈಗ ಬೇಡಿಕೆಗಿಂತ ಕಡಿಮೆ ಎಂಜೆಕ್ಷನ್ ಲಭ್ಯವಿವೆ. ಈ ಹಿನ್ನೆಲೆಯಲ್ಲಿ ಬೇಗನೆ ಎಂಜೆಕ್ಷನ್ ಸರಬರಾಜು ಮಾಡುವಂತೆ ಮನವಿ ಮಾಡಲಾಗಿದೆ. ಇಂಡಿ ಮತ್ತು ತಾಳಿಕೋಟಿಗೆ ಒಂದು ಆಕ್ಸಿಜನ್ ಪ್ಲ್ಯಾಂಟ್ ಮಾಡಲು ವಿನಂತಿ ಮಾಡಿದ್ದೇವೆ. ಇವೆಲ್ಲವನ್ನೂ ಬೇಗನೇ ಈಡೇರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಸೋಮನಗೌಡ ಪಾಟೀಲ ಸಾಸನೂರ ಇದೇ ಸಂದರ್ಭದಲ್ಲಿ ತಿಳಿಸಿದರು.