ಸಿಎಂ ಸ್ಥಾನ ಪತನ ಮುನ್ಸೂಚನೆ ಹಿನ್ನೆಲೆ- ವಿಜಯೇಂದ್ರರಿಂದ ವೀರಶೈವ, ಲಿಂಗಾಯಿತ ಸ್ವಾಮೀಜಿಗಳ ಮೂಲಕ ಒತ್ತಡ ತಂತ್ರ- ಯತ್ನಾಳ ಗಂಭೀರ ಆರೋಪ

ವಿಜಯಪುರ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪದಚ್ಯುತಿ ಮುನ್ಸೂಚನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ವೀರಶೈವ- ಲಿಂಗಾಯಿತ ಮಠಾಧೀಶರು ಮತ್ತು ಸ್ವಾಮೀಜಿಗಳ ಮೂಲಕ ಸಿಎಂ ಪರ ಹೇಳಿಕೆ ನೀಡಲು ಒತ್ತಡ ಹೇರುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಯತ್ನಾಳ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಜಯೇಂದ್ರ ವಿರುಸ್ಧ ವಾಗ್ದಾಳಿ ನಡೆಸಿದ್ದು, ಮಠಾಧೀಶರು ಮತ್ತು ಸ್ವಾಮೀಜಿಗಳು ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ಹೇಳಿದ್ದಾರೆ. ಯತ್ನಾಳ […]

ಲಾಕಡೌನ್ ಮಧ್ಯೆಯೂ ಸಮರೋಪಾದಿಯಲ್ಲಿ ಸಾಗಿದ ಏರಪೋರ್ಟ್ ಕೆಲಸ- ಡಿಸಿಎಂ ಗೋವಿಂದ ಕಾರಜೋಳ ಮುತುವರ್ಜಿಗೆ ಜನರ ಮೆಚ್ಚುಗೆ

ಎಸ್. ಡಿ. ಕುಮಾನಿ ವಿಜಯಪುರ: ಬಸವ ನಾಡಿನ ಜನರ ಗಗನಯಾನ ಕನಸು ನನಸಾಗುವ ಸಮಯ ಹತ್ತಿರವಾಗುತ್ತಿದೆ. ಎಲ್ಲೆಡೆ ಕೊರೊನಾ ಎರಡನೇ ಅಲೆಯಿಂದಾಗಿ ಲಾಕಡೌನ್ ಜಾರಿಯಲ್ಲಿದ್ದರೂ ನಿರ್ಮಾಣ ಕಾಮಗಾರಿಳಿಗೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ನಿಗದಿತ ಸ್ಥಳದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಸಮರೋಪಾದಿಯಲ್ಲಿ ಸಾಗಿದೆ. ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಡಿಸಿಎಂ ಗೋವಿಂದ ಕಾರಜೋಳ ಮತ್ತು ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳ ಸಮಗ್ರ ಪ್ರಯತ್ನದಿಂದಾಗಿ ಕಳೆದ ಸುಮಾರು ಒಂದು ದಶಕದಿಂದ ನನೆಗುದಿಗೆ ಬಿದ್ದಿದ್ದ ಈ […]

ಬಬಲೇಶ್ವರ, ತಿಕೋಟಾ ನೂತನ ತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಟೆಂಟರ್ ಕರೆಯಲಾಗಿದೆ- ಶಾಸಕ ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭೆ ಕ್ಷೇತ್ರದ ನೂತನ ತಾಲೂಕು ಕೇಂದ್ರಗಳಾದ ಬಬಲೇಶ್ವರ ಮತ್ತು ತಿಕೋಟಾದಲ್ಲಿ ಮಿನಿ ವಿಧಾನಸೌಧಗಳನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ಮಾಜಿ ಸಚಿವ, ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ನೂತನ ತಾಲೂಕು ಕೇಂದ್ರಗಳಲ್ಲಿ ಎಲ್ಲ ತಾಲೂಕು ಮಟ್ಟದ ನಾನಾ ಇಲಾಖೆಗಳ ಕಛೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ತಲಾ ರೂ. 10 ಕೋ. ವೆಚ್ಚದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ಎರಡು ಕಡೆ ಸುಸಜ್ಜಿತ ಮಿನಿ ವಿಧಾನಸೌಧ ನಿರ್ಮಿಸಲಾಗುತ್ತಿದೆ ಎಂದು […]

ಮೂರ್ನಾಲ್ಕು ದಿನಗಳಲ್ಲಿ ಲಾಕಡೌನ್ ಮುಂದುವರೆಸುವ ಕುರಿತು ಸಿಎಂ ತಜ್ಞರ, ಕೊವಿಡ್ ನಿರ್ವಹಣಾ ಪಡೆ ಜೊತೆ ಚರ್ಚಿಸಿ ನಿರ್ಧರಿಸಲಿದ್ದಾರೆ- ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೊರೊನಾ ನಿಯಂತ್ರಿಸಲು ಜೂ.30 ರ ವರೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಇಲಾಖೆ ಮತ್ತು ಕೇಂದ್ರ ಸರಕಾರಗಳಿಂದ ನಿರ್ದೇಶನಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಲಾಕಡೌನ್ ಮುಂದುವರೆಸುವ ಕುರಿತು ಸಿಎಂ ಮೂರ್ನಾಲ್ಕು ದಿನಗಳಲ್ಲಿ ನಿರ್ಧರಿಸಲಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವರಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜೂ. 7ನೇ ತಾರಿಕಿನವರೆಗೆ ಲಾಕಡೌನ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ಕೇಂದ್ರದಿಂದ ನಿರ್ದಶನ ಬಂದಿರುವ ಹಿನ್ನಲೆಯೆಲ್ಲಿ ಲಾಕಡೌನ್ ಮುಂದುವರೆಸುವ […]