ಮೂರ್ನಾಲ್ಕು ದಿನಗಳಲ್ಲಿ ಲಾಕಡೌನ್ ಮುಂದುವರೆಸುವ ಕುರಿತು ಸಿಎಂ ತಜ್ಞರ, ಕೊವಿಡ್ ನಿರ್ವಹಣಾ ಪಡೆ ಜೊತೆ ಚರ್ಚಿಸಿ ನಿರ್ಧರಿಸಲಿದ್ದಾರೆ- ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೊರೊನಾ ನಿಯಂತ್ರಿಸಲು ಜೂ.30 ರ ವರೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಇಲಾಖೆ ಮತ್ತು ಕೇಂದ್ರ ಸರಕಾರಗಳಿಂದ ನಿರ್ದೇಶನಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಲಾಕಡೌನ್ ಮುಂದುವರೆಸುವ ಕುರಿತು ಸಿಎಂ ಮೂರ್ನಾಲ್ಕು ದಿನಗಳಲ್ಲಿ ನಿರ್ಧರಿಸಲಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವರಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜೂ. 7ನೇ ತಾರಿಕಿನವರೆಗೆ ಲಾಕಡೌನ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ಕೇಂದ್ರದಿಂದ ನಿರ್ದಶನ ಬಂದಿರುವ ಹಿನ್ನಲೆಯೆಲ್ಲಿ ಲಾಕಡೌನ್ ಮುಂದುವರೆಸುವ ಕುರಿತು ಸಿಎಂ ಮೂರ್ನಾಲ್ಕು ದಿನಗಳಲ್ಲಿ ತಜ್ಞರು, ಕೊವಿಡ್ ನಿರ್ವಹಣೆ ಕಾರ್ಯಪಡೆಗಳ ಜೊತೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ಇಂದಿಗೆ ಏಳು ವರ್ಷಗಳಾಗುತ್ತಿವೆ. ಈ ವರ್ಷಾಚರಣೆಯನ್ನು ಬಿಜೆಪಿ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸೇವೆ ಮಾಡಲು ಸೂಚಿಸಲಾಗಿದೆ. ದೇಶಾದ್ಯಂತ ಒಂದು ಲಕ್ಷ ನಾನಾ ಗ್ರಾಮಗಳಿಗೆ ತೆರಳಿ ಬಿಜೆಪಿ ಕಾರ್ಯಕರ್ತರು ಸೇವೆ ಮಾಡಲಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ತಕೇಂದ್ರ ಸರಕಾರದ 7ನೇ ವರ್ಶಾಚರಣೆ. ಎಲ್ಲ ಕಾರ್ಯಕರ್ತರು ಗ್ರಾಮೀಣ ಪ್ರದೇಶಕ್ಕೆ ಹೋಗಿ ಸೇವೆ ಮಾಡಬೇಕು. ಒಂದು ಲಕ್ಷ ಹಳ್ಳಿಗಳಿಗೆ ತೆರಳಿ ಸೇವೆ ಮಾಡಲು ಸೂಚಿಸಲಾಗಿದೆ. ರಾಜ್ಯದಲ್ಲಿಯೂ ಕೆಲಸ ಮಾಡಲು ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ. ನಾನೂ ಯಲಹಂಕಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಕೊವಿಡ್ ಕೇಂದ್ರಕ್ಕೆ ತೆರಳಿ ಆಹಾರ ವಿತರಿಸುತ್ತೇನೆ ಎಂದು ಅವರು ತಿಳಿಸಿದರು.

ಇದೇ ವೇಳೆ, ಬೆಂಗಳೂರಿನಲ್ಲಿ ಜನ ಲಾಕಡೌನ್ ಮಧ್ಯೆಯೂ ಓಡಾಡುತ್ತಿರುವುದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಪಾಸಿಟಿವಿಟಿ ರೇಟ್ ಇಳಿಯಬೇಕು. ಸೋಂಕಿತರ ಸಂಖ್ಯೆ ಕೂಡ ಇನ್ನೂ ಕಡಿಮೆಯಾಗಬೇಕು. ಕೊರೊನಾ ಪೂರ್ಣ ಹತೋಟಿಯಲ್ಲಿ ಬರಬೇಕು. ಇಷ್ಟು ದಿನ ಸಹಕಾರ ನೀಡಿದ್ದೀರಿ. ಇನ್ನೊಂದು ವಾರ ಸಹಕಾರ ನೀಡಿ. ನಮ್ಮ ಕಾರ್ಯ ಚಟುವಟಿಕೆಗಳ ಮೇಲೆ ನಾವೇ ನಿರ್ಬಂಧ ಹಾಕಿಕೊಳ್ಳಬೇಕು. ಇನ್ನೋಂದು ವಾರದ ಪ್ರಶ್ನೆಯಿದೆ. ಎಲ್ಲರೂ ಸಹರಕಾರ ಕೊಟ್ಟರೆ ಖಂಡಿತವಾಗಿಯೂ ಕೊರೊನಾ ನಿಯಂತ್ರಣಕ್ಕೆ ಬರಲಿದೆ. ಇದನ್ನು ನಾವು ಸರಿಯಾಗಿ ಮಾಡಿದರೆ, ಕೊರೊನಾ ಮತ್ತು ನಮ್ಮ ಚಟುವಟಿಕೆಗಳೂ ನಿಯಂತ್ರಣವಾಗುತ್ತವೆ. ಇಲ್ಲದಿದ್ದರೆ ಮತ್ತೆ ಉಲ್ಬಣವಾದರೆ ಕಷ್ಟವಾಗುತ್ತೆ ಎಂಬುದನ್ನು ಜನರು ಅರ್ಥ ಮಾಡಿಕೊಂಡು ಜೂ. 7ರ ವರೆಗೆ ಕಟ್ಟುನಿಟ್ಟಿನ ಲಾಕಡೌನ್ ಸಹಕರಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌