ಸಿಎಂ ಸ್ಥಾನ ಪತನ ಮುನ್ಸೂಚನೆ ಹಿನ್ನೆಲೆ- ವಿಜಯೇಂದ್ರರಿಂದ ವೀರಶೈವ, ಲಿಂಗಾಯಿತ ಸ್ವಾಮೀಜಿಗಳ ಮೂಲಕ ಒತ್ತಡ ತಂತ್ರ- ಯತ್ನಾಳ ಗಂಭೀರ ಆರೋಪ

ವಿಜಯಪುರ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪದಚ್ಯುತಿ ಮುನ್ಸೂಚನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ವೀರಶೈವ- ಲಿಂಗಾಯಿತ ಮಠಾಧೀಶರು ಮತ್ತು ಸ್ವಾಮೀಜಿಗಳ ಮೂಲಕ ಸಿಎಂ ಪರ ಹೇಳಿಕೆ ನೀಡಲು ಒತ್ತಡ ಹೇರುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಯತ್ನಾಳ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಜಯೇಂದ್ರ ವಿರುಸ್ಧ ವಾಗ್ದಾಳಿ ನಡೆಸಿದ್ದು, ಮಠಾಧೀಶರು ಮತ್ತು ಸ್ವಾಮೀಜಿಗಳು ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ಹೇಳಿದ್ದಾರೆ.

ಯತ್ನಾಳ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಸ್ತಾಪಿಸಿರುವ ವಿಚಾರ ಇಲ್ಲಿದೆ.

https://m.facebook.com/story.php?story_fbid=2410963312381440&id=100004033850943

ರಾಜ್ಯದ ವೀರಶೈವ- ಲಿಂಗಾಯತ ಮಠ ಮಾನ್ಯ ಗಳ ಪೂಜ್ಯ ಮಠಾಧೀಶರು ಹಾಗು ಪೂಜ್ಯ ಸ್ವಾಮಿಜಿಗಳಿಗೆ ಶ್ರೀ ಯಡಿಯೂರಪ್ಪನವರ ಸುಪುತ್ರ ವಿಜಯೇಂದ್ರನಿಗೆ ತಮ್ಮ ತಂದೆಯ ಸ್ಥಾನದ ಪತನದ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ಅವಮಾನವಾಗುತ್ತದೆ ಮತ್ತು ಕಡೆಗಣಿಸಿಂತಾಗುತ್ತದೆ ಎಂದು ಬಿಂಬಿಸಲಾಗುತ್ತಿದೆ. ಇದರಿಂದ ಪಕ್ಷಕ್ಕೆ ಭಾರಿ ಹಿನ್ನಡೆಯಾಗುತ್ತದೆ ಹಾಗೂ ಪಕ್ಷವೆ ಕರ್ನಾಟಕದಲ್ಲಿ ನಾಶವಾಗುತ್ತದೆ. ಎಂಬ ಇತ್ಯಾದಿ ಬೆದರಿಕೆಯನ್ನು ಮಠಾಧೀಶರು,ಸ್ವಾಮಿಜಿಗಳಿಂದ ಹೇಳಿಕೆ ನೀಡಲು ಒತ್ತಡ ಪ್ರಾರಂಭಿಸಿದ್ದು, ಇದಕ್ಕಾಗಿ ಎಷ್ಟೇ ಹಣ ಖರ್ಚಾದರೂ ಸರಿ, ಎಂಬಂತೆ ಎಲ್ಲರ ಸಂಪರ್ಕ ಮಾಡತೊಗಿದ್ದಾರೆ. ಆದರೆ ಯಾರೊಬ್ಬ ಪೂಜ್ಯರು ಸಹ ಇಂತಹ ಸಮಾಜ ಕಳಂಕಿತರ ಪರವಾಗಿ ವಿಶ್ವ ಗುರು ಬಸವಣ್ಣನವರ ತತ್ವಕ್ಕೆ ವಿರುದ್ಧವಾದ ನಿಲುವು ತಳೆಯುವದಿಲ್ಲ ಎಂಬುದು ನಮ್ಮ ನಂಬಿಕೆ. ಭ್ರಷ್ಟಾಚಾರದಿಂದ ಇಡಿ ಕುಟುಂಬ ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದೆ ಇಂತಹ ಕುಟುಂಬದಿಂದ ನಮ್ಮ ರಾಜ್ಯವನ್ನು ಮುಕ್ತಗೊಳಿಸಲು ಯಾರೂ ಆಮೀಷಕ್ಕೆ ಒಳಗಾಗದೇ ಇವರ ಪರ ಹೇಳಿಕೆಯಾಗಲೀ, ಅಥವಾ ಇವರ ಪರ ಲಾಭಿ ಮಾಡಬಾರದೆಂದು ಕಳಕಳಿಯ ವಿನಂತಿ. ಭ್ರಷ್ಟಾಚಾರದಿಂದ ಗಳಿಸಿದ ಹಣದಿಂದ ಏನು ಬೇಕಾದರೂ ಖರೀಧಿಸಬಹುದು, ಎಂಬ ಸೊಕ್ಕಿನಿಂದ ಇಂದು ಎಲ್ಲರನ್ನೂ ಅಂದರೆ ಪೂಜ್ಯ ಮಠಾಧೀಶರನ್ನು. ಮಾಧ್ಯಮಗಳನ್ನು ವೀರೋಧ ಪಕ್ಷಗಳನ್ನು ಖರೀದಿ ಮಾಡುವ ಅಹಂಕಾರ ಮತ್ತು ಹಣದ ಪಿತ್ತ ನೆತ್ತಿಗೆ ಏರಿದೆ.
ತಮ್ಮ‌ಪರ ನಿಲುವು ತಳೆಯಲು ಒತ್ತಾಯಿಸುವುದು ಹಾಗು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಹಾಗೂ ಪಕ್ಷದ ಕೇಂದ್ರದ ನಾಯಕರುಗಳನು ಕೆಟ್ಟ ಶಬ್ದಗಳಲ್ಲಿ ಟೀಕೀಸಲು ತಮ್ಮದೇ ಆದ ಖಾಸಗಿ ಜಾಲತಾಣ ಮೂಲಕ ಪ್ರೇರೇಪಿಸುತ್ತಿರುವುದು, ನಮ್ಮ ವೀರಶೈವ ಲಿಂಗಾಯತ ಸಮಾಜ ಎಂದಿಗೂ ಸಹಿಸಲ್ಲ. ಈ ರೀತಿ ಇವರ ಪರ ಹೋದರೆ ಸಮಾಜ ತಲೆತಗ್ಗಿಸಿ, ಭ್ರಷ್ಟ ಸಮಾಜವನಿಸುತ್ತದೆ. ಅಕಸ್ಮಾತ ಇಂತಹ ದುರುಳರ , ಭ್ರಷ್ಟರ ಪರವಾಗಿ
ಇವರ ಪರ ಯಾರಾದರೂ ಹೇಳಿಕೆ ನೀಡಿದರೆ ಅದು ನಮ್ಮ ವೀರಶೈವ ಲಿಂಗಾಯತರ ಅಧ:ಪತನವಾದಂತೆ ಸರಿ. ಎಂದಿಗೂ ಸಮಾಜ ಸಮಾಜಮುಖಿಯಾಗಿರಬೇಕು ಹೊರತು ಹಣದ ಆಮೀಷಕ್ಕೊಳಗಾಗಬಾರದು. ಇದು ನಮ್ಮಪಂಚ ಪೀಠ, ಬಸವಾದಿ ಪ್ರಮಥರ ತತ್ತ್ವಕ್ಕೆ ವಿರೊಧ ಆಗಿದೆ.

ಯತ್ನಾಳ ಅವರ ಈ ಹೇಳಿಕೆ ಈಗ ಮಹತ್ವ ಪಡೆದಿದ್ದು, ಮುಂದಿನ ಘಟನಾವಳಿಗಳನ್ನು ಕಾದು ನೋಡಬೇಕಾಗಿದೆ.

Leave a Reply

ಹೊಸ ಪೋಸ್ಟ್‌